ಶಿರಾ: ತಾಲೂಕಿನ ಹುಲಿಕುಂಟೆ ಹೋಬಳಿಯ ಬರಗೂರು ಸಮೀಪದ ಗೋಣಿಹಳ್ಳಿ, ಬಡಮಾರನಹಳ್ಳಿ ಸೇರಿದಂತೆ ಹಲವು ಭಾಗಗಳಲ್ಲಿ ಕಳೆದ ಮೂರು ದಿನಗಳ ಹಿಂದೆ ಬಿದ್ದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದ ಅನೇಕ ರೈತರ ದಾಳಿಂಬೆ ಬೆಳೆ ನಷ್ಟಗೊಂಡಿದೆ.
ಗೋಣಿಹಳ್ಳಿ ಗ್ರಾಮದ ರೈತ ಸಿದ್ದಪ್ಪ, ಬಡಮಾರನಹಳ್ಳಿ ಭಾಗದ ವೀರ ಮುಲ್ಲಪ್ಪ, ಗುರುಮೂರ್ತಿ ಸೇರಿದಂತೆ ಬಹುತೇಕ ರೈತರ ದಾಳಿಂಬೆ ತೋಟಗಳು ವ್ಯಾಪಕವಾಗಿ ಹಾನಿಗೊಳಗಾಗಿವೆ. ಆಲಿಕಲ್ಲು ಮಳೆಯಿಂದ ಫಸಲಿಗೆ ಬಂದಿದ್ದ ದಾಳಿಂಬೆ ಕೊಳೆತು ಹೋಗುವ ಹಂತ ತಲುಪಿವೆ.
ಈ ಸಂಬಂಧ ವಿಧಾನ ಪರಿಷತ್ ಶಾಸಕ ಚಿದಾನಂದ್ ಎಂ.ಗೌಡ ಶನಿವಾರ ಈ ಭಾಗಕ್ಕೆ ಭೇಟಿ ನೀಡಿ ರೈತರ ಸಂಕಷ್ಟವನ್ನು ಆಲಿಸಿದ್ದು, ತಹಶೀಲ್ದಾರ್ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಪಡೆದು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚನೆಯನ್ನು ನೀಡಿದ್ದಾರೆ.
ರೈತರ ದಾಳಿಂಬೆ ಬೆಳೆ ನಷ್ಟ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಚಿದಾನಂದ್ ಗೌಡ ರೈತರು ಬೆಳೆ ವಿಮೆ ಮಾಡಿಸಿರಬಹುದು. ಬೆಳೆ ವಿಮೆ ಹಣವನ್ನು ಹೊರತುಪಡಿಸಿ ಸರ್ಕಾರ ರೈತರ ಬೆಳೆ ನಷ್ಟವನ್ನು ಕಟ್ಟಿಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಈ ಸಂಬಂಧ ಸದನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


