ಪಾವಗಡ: ಬಗರ್ ಹುಕ್ಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರಾಗಿ ಕಡಪಲಕೆರೆ ನವೀನ್ ಆಯ್ಕೆಯಾಗಿದ್ದಾರೆ,.
ಈ ಸಂಬಂಧ ತಾಲ್ಲೂಕು ಬಿಜೆಪಿ ಘಟಕವು ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಆದೇಶ ಪ್ರತಿ ನೀಡಿ ಮಾತನಾಡಿದ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ರವಿಶಂಕರ್ ನಾಯ್ಕ ಪಕ್ಷವು ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ, ಉತ್ತಮ ಜವಾಬ್ದಾರಿಗಳನ್ನು ವಹಿಸುತ್ತಿದೆ. ಈ ನಿಟ್ಟಿನಲ್ಲಿ ಆಯ್ಕೆಯಾದ ಕಾರ್ಯಕರ್ತರು ಜನಸಾಮಾನ್ಯರ ಸೇವೆ ಮಾಡಿ ಉತ್ತಮ ಹೆಸರು ಪಡೆಯಬೇಕು ಎಂದು ತಿಳಿಸಿದರು.
ಗ್ರಾ.ಪಂ. ಸದಸ್ಯ ಹಾಗೂ ಬಿ.ಜೆ.ಪಿ.ಮುಖಂಡ ಕಡಪಲಕೆರೆ ನವೀನ್ ಮಾತನಾಡಿ, ನನ್ನನ್ನು ಪಕ್ಷ ಗುರುತಿಸಿ ಜವಾಬ್ದಾರಿ ಕೆಲಸ ನೀಡಿದೆ. ಅದನ್ನು ಸಮರ್ಪಕವಾಗಿ ನಿರ್ವಹಿಸಿ ನನ್ನ ಮೇಲೆ ಪಕ್ಷ ಇಟ್ಟಿರುವ ನಂಬಿಕೆಯನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪ್ರತಿಕ್ರಿಯಿಸಿದರು. ತಾಲ್ಲೂಕು ಬಿ.ಜೆ.ಪಿ.ಯ ಕಾರ್ಯಕರ್ತ ರಾದ ಬೆಳ್ಳಿಬಟ್ಲು ಪಾಲಯ್ಯ, ಕನ್ನಮೇಡಿಯ ಸಿದ್ದಗಂಗಮ್ಮ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷರು ಶ್ರೀ ರವಿಶಂಕರ್ ನಾಯ್ಕ್, ನಾಮನಿರ್ದೇಶನ ಸದಸ್ಯರಾದ ಕೆ.ಎಸ್.ನವೀನ್ ಕುಮಾರ್, ಬಿ.ಓ. ಪಾಲಯ್ಯ, ಸಿದ್ದಗಂಗಾಮ್ಮ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ, ಎಸ್.ಸಿ. ಮೋರ್ಚಾ ಉಪಾಧ್ಯಕ್ಷರು ರಾಮಾಂಜಿನಪ್ಪ, ಮಂಡಲ ಉಪಾಧ್ಯಕ್ಷರು ಶಿವಲಿಂಗ, ಕಾರ್ಯದರ್ಶಿ ಶೇಖರ್ ಬಾಬು, ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹನುಮಂತ ರೆಡ್ಡಿ ಯುವ ಮೋರ್ಚಾ ಅಧ್ಯಕ್ಷ ಮಧು ಉಪಸ್ಥಿತರಿದ್ದರು.
ವರದಿ: ರಾಮಪ್ಪ, ಸಿ.ಕೆ.ಪುರ.ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB