ತುಮಕೂರು: ಜಿಲ್ಲಾ ಬಾಲ ಭವನ ಸಮಿತಿ ತುಮಕೂರು ಇವರ ವತಿಯಿಂದ 2026-27ನೇ ಸಾಲಿನಲ್ಲಿ 5 ರಿಂದ 16ರ ವಯೋಮಾನದ ಮಕ್ಕಳಿಗಾಗಿ ಏಪ್ರಿಲ್ 15 ರಿಂದ 29ರವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ 15 ದಿನಗಳ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.
ಆಸಕ್ತ ಪಾಲಕರು ಏ.9 ರಂದು ಸಂಜೆ 5 ಗಂಟೆಯೊಳಗೆ ಜಿಲ್ಲಾ ಬಾಲಭವನ ಕಚೇರಿ, ಎಂ.ಜಿ.ರಸ್ತೆ, ತುಮಕೂರು ಇಲ್ಲಿ ಕಚೇರಿ ವೇಳೆಯಲ್ಲಿ ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಶಿಬಿರದಲ್ಲಿ 60 ಮಕ್ಕಳಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
ಸರ್ಕಾರಿ ಶಾಲಾ ಮಕ್ಕಳು, ಗ್ರಾಮೀಣ/ಹೋಬಳಿ ಮಟ್ಟದ ಮತ್ತು ಸೌಲಭ್ಯ ವಂಚಿತ ಮಕ್ಕಳಿಗೆ, ಸರ್ಕಾರಿ ಸುಧಾರಣಾ ಸಂಸ್ಥೆಗಳ ಬಾಲಕ/ಬಾಲಕಿಯರ ಬಾಲ ಮಂದಿರದ ಮಕ್ಕಳಿಗೆ ಹಾಗೂ ವಿಕಲಚೇತನ ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ವಿಶೇಷ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9901890079 ಇವರನ್ನು ಸಂಪರ್ಕಿಸುವುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


