nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆ ವಿರುದ್ಧ ಕೇಸ್

    April 8, 2026

    ಹೈನುಗಾರರ ಸೇವೆಗೆ ಮರಳಿರುವುದು ಸಂತಸ ತಂದಿದೆ: ತುಮುಲ್ ಕಚೇರಿಯಲ್ಲಿ ಕೊಂಡವಾಡಿ ಚಂದ್ರಶೇಖರ್

    April 8, 2026

    ಜನಗಣತಿ ತರಬೇತಿ ವೇಳೆ ಶಿಕ್ಷಕಿ ಅಸ್ವಸ್ಥ: ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ತಹಶೀಲ್ದಾರ್

    April 8, 2026
    Facebook Twitter Instagram
    ಟ್ರೆಂಡಿಂಗ್
    • ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆ ವಿರುದ್ಧ ಕೇಸ್
    • ಹೈನುಗಾರರ ಸೇವೆಗೆ ಮರಳಿರುವುದು ಸಂತಸ ತಂದಿದೆ: ತುಮುಲ್ ಕಚೇರಿಯಲ್ಲಿ ಕೊಂಡವಾಡಿ ಚಂದ್ರಶೇಖರ್
    • ಜನಗಣತಿ ತರಬೇತಿ ವೇಳೆ ಶಿಕ್ಷಕಿ ಅಸ್ವಸ್ಥ: ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ತಹಶೀಲ್ದಾರ್
    • ತುಮಕೂರು: ಇಂದು ಸಚಿವ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಜನತಾದರ್ಶನ: ವಿವಿಧ ಇಲಾಖಾವಾರು ಪ್ರತ್ಯೇಕ 10 ಕೌಂಟರ್‌ ಗಳು
    • ಮಂಡ್ಯ: ಮಾಜಿ ಶಾಸಕ ಡಾ.ಅನ್ನದಾನಿ ವಿರುದ್ಧ ಅಕ್ರಮ ಸಂಬಂಧದ ಗಂಭೀರ ಆರೋಪ; ಕುಮಾರಸ್ವಾಮಿ ಕಾಲಿಗೆ ಬಿದ್ದು ಪತಿಯ ಗೋಳಾಟ!
    • ‘ಪೆಟ್ರೋಲ್‌ ಗೆ ಬದಲಾಯಿಸಿಕೊಳ್ಳಿ’: ಆಟೋ LPG ಸಮಸ್ಯೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಲಹೆ
    • ಶಿವಣ್ಣನ ಜೊತೆ ಮದುವೆ; ಹರಿದಾಡುತ್ತಿರುವ ಸುಳ್ಳು ಸುದ್ದಿಗೆ ನಟಿ ಸುಧಾರಾಣಿ ಆಕ್ರೋಶ!
    • ಸರ್ಕಾರಿ ಶಾಲಾ ಶಿಕ್ಷಕಿಯ ಭೀಕರ ಕೊಲೆ; ಮಾರಕಾಸ್ತ್ರಗಳಿಂದ ಕೊಚ್ಚಿ ಶವಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಒಳ ಮೀಸಲಾತಿ ಜಾರಿ ಮಾಡದ ಸರ್ಕಾರಕ್ಕೆ ಅಂಬೇಡ್ಕರ್, ಜಗಜೀವನ್ ರಾಂ ಜಯಂತಿ ಆಚರಿಸುವ ಅರ್ಹತೆ ಇಲ್ಲ: ದಲಿತ ಸಂಘರ್ಷ ಸಮಿತಿ ಆಕ್ರೋಶ
    ತುರುವೇಕೆರೆ April 6, 2026

    ಒಳ ಮೀಸಲಾತಿ ಜಾರಿ ಮಾಡದ ಸರ್ಕಾರಕ್ಕೆ ಅಂಬೇಡ್ಕರ್, ಜಗಜೀವನ್ ರಾಂ ಜಯಂತಿ ಆಚರಿಸುವ ಅರ್ಹತೆ ಇಲ್ಲ: ದಲಿತ ಸಂಘರ್ಷ ಸಮಿತಿ ಆಕ್ರೋಶ

    By adminApril 6, 2026No Comments1 Min Read
    dss

    ತುರುವೇಕೆರೆ: ರಾಜ್ಯದಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ದಲಿತ ಸಂಘರ್ಷ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಒಳ ಮೀಸಲಾತಿ ಜಾರಿ ಮಾಡದ ಸರ್ಕಾರಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಅವರ ಜಯಂತಿಗಳನ್ನು ಆಚರಿಸುವ ನೈತಿಕ ಅರ್ಹತೆ ಇಲ್ಲ ಎಂದು ಸಮಿತಿಯ ಮುಖಂಡರು ಕಿಡಿಕಾರಿದ್ದಾರೆ.

    ಪಟ್ಟಣದ ದಲಿತ ಸಂಘರ್ಷ ಸಮಿತಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಬಾಬು ಜಗಜೀವನ್ ರಾಂ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್, ಸರ್ಕಾರದ ಧೋರಣೆಯನ್ನು ಖಂಡಿಸಿದರು.


    Provided by
    Provided by

    ಹಾವನೂರು, ಕಾಂತರಾಜು, ನಾಗಮೋಹನ್ ದಾಸ್ ಹಾಗೂ ಎ.ಜೆ.ಸದಾಶಿವ ಆಯೋಗದ ವರದಿಗಳ ಪ್ರಕಾರ ರಾಜ್ಯದಲ್ಲಿ ಮಾದಿಗ ಸಮುದಾಯದವರು ಬಹುಸಂಖ್ಯಾತರಾಗಿದ್ದಾರೆ. ಸರ್ಕಾರ ಒಳ ಮೀಸಲಾತಿ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರೂ, ಕೆಲವು ಸಚಿವರ ಹಿತಾಸಕ್ತಿ ಮತ್ತು ವಿರೋಧದಿಂದಾಗಿ ಪ್ರಕ್ರಿಯೆ ತಡೆಹಿಡಿಯಲಾಗಿದೆ ಎಂದು ಅವರು ದೂರಿದರು.

    ಒಳ ಮೀಸಲಾತಿ ಜಾರಿಯಾಗದ ಕಾರಣ ಸುಮಾರು 56,419 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕುಂಠಿತಗೊಂಡಿದ್ದು, ಅರ್ಹ ಸಮುದಾಯದ ಜನರಿಗೆ ಭಾರಿ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

    ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿದ ಮುಖಂಡರು, ಕೂಡಲೇ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

    ಕಾರ್ಯಕ್ರಮದಲ್ಲಿ ಪುರಸಭೆಯ ಮಾಜಿ ಸದಸ್ಯ ಚಿದಾನಂದ್, ಡಿಎಸ್‌ಎಸ್ ತಾಲ್ಲೂಕು ಸಂಚಾಲಕ ಮಲ್ಲೂರು ತಿಮ್ಮೇಶ್, ಮತ್ತು ಸಮಿತಿಯ ಪ್ರಮುಖರಾದ ಗುರುದತ್, ಕೃಷ್ಣಣ್ಣ, ಗೋವಿಂದರಾಜು, ಬಸವರಾಜು, ಕೆಂಪಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಮಾ. 24 ರಂದು ತುರುವೇಕೆರೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ: ಕುಂದು ಕೊರತೆ ಸಭೆ

    March 22, 2026

    ಒಳಮೀಸಲಾತಿ ಜಾರಿಗೆ ಆಗ್ರಹ: ತುರುವೇಕೆರೆಯಲ್ಲಿ ಮಾದಿಗ ಸಮುದಾಯದಿಂದ ಬೃಹತ್ ಪ್ರತಿಭಟನೆ

    March 11, 2026

    ಹಂಪಲಾಪುರ: ಭೂಮಿ ಹಕ್ಕಿಗಾಗಿ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ

    March 10, 2026

    Leave A Reply Cancel Reply

    Our Picks

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆ ವಿರುದ್ಧ ಕೇಸ್

    April 8, 2026

    ತುಮಕೂರು: ನಗರದ ದಿಬ್ಬೂರು ಸರ್ಕಲ್ ನಿಂದ ಶಿರಾ ಗೇಟ್ ಕಡೆಗೆ 80 ಅಡಿ ರಸ್ತೆಯಲ್ಲಿ ವೀಲಿಂಗ್ ಮಾಡಿಕೊಂಡು ಬರುತ್ತಿದ್ದ ಯುವಕನನ್ನು…

    ಹೈನುಗಾರರ ಸೇವೆಗೆ ಮರಳಿರುವುದು ಸಂತಸ ತಂದಿದೆ: ತುಮುಲ್ ಕಚೇರಿಯಲ್ಲಿ ಕೊಂಡವಾಡಿ ಚಂದ್ರಶೇಖರ್

    April 8, 2026

    ಜನಗಣತಿ ತರಬೇತಿ ವೇಳೆ ಶಿಕ್ಷಕಿ ಅಸ್ವಸ್ಥ: ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ತಹಶೀಲ್ದಾರ್

    April 8, 2026

    ತುಮಕೂರು: ಇಂದು ಸಚಿವ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಜನತಾದರ್ಶನ: ವಿವಿಧ ಇಲಾಖಾವಾರು ಪ್ರತ್ಯೇಕ 10 ಕೌಂಟರ್‌ ಗಳು

    April 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.