ತಿಪಟೂರು: ಸತತ 31 ವರ್ಷಗಳ ಮಾಧ್ಯಮ ಕ್ಷೇತ್ರದ ದೀರ್ಘ ಸೇವೆಯ ಜೊತೆಯಲ್ಲೇ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಮುದ್ರಣ ಮತ್ತು ದೃಶ್ಯ ಮಾಧ್ಯಮ ಸೇವೆ ಮಾಡಿರುವ ಇವರ ಆದಿತ್ಯವಾಣಿ ದಿನ ಪತ್ರಿಕೆಯಲ್ಲಿ ಪ್ರಕಟಿಸಿದ ಕೈಗಾರಿಕೆಗಳ ಸಬ್ಸಿಡಿ ಹಗರಣ, ಮಟ್ಕಾ ಆನ್ ಲೈನ್ ಬೆಟ್ಟಿಂಗ್ ಮತ್ತು ಬಿಟ್ ಕಾಯಿನ್ ಕುರಿತ ತನಿಖಾ ವರದಿಗಳಲ್ಲಿ ಸರ್ಕಾರದ ಕೋಟ್ಯಾಂತರ ರೂಪಾಯಿ ವಂಚನೆಯಾಗುತ್ತಿರುವ ಸಬ್ಸಿಡಿ ಹಗರಣ ಕುರಿತ ಸಮಗ್ರ ತನಿಖಾ ವರದಿಗೆ ಕೆಯುಡಬ್ಲ್ಯೂಜೆ ರಾಜ್ಯ ಮಟ್ಟದ ಟಿ ಕೆ ಮಲಗೊಂಡ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಜಿಲ್ಲಾ ಮಟ್ಟದ ತುಮಕೂರು ವಾರ್ತೆಯಿಂದ 1995 ರಲ್ಲಿ ತಿಪಟೂರು ತಾಲ್ಲೂಕು ವರದಿಗಾರ/ಪ್ರತಿನಿಧಿಯಾಗಿ ಮಾದ್ಯಮ ಸೇವೆ ಆರಂಭಿಸಿ ನಂತರ ಸಂಜೆವಾಣಿ (1996 — 1999) ಜನ ವಾಹಿನಿ(1998), ಆದಿತ್ಯ ವಾಣಿ ವಾರ ಪತ್ರಿಕೆ(1999–2022), ವಿಜಯ ಕರ್ನಾಟಕ (2000–2012), ಕನ್ನಡ ಸೇನೆ ರಾಜ್ಯ ಮಟ್ಟದ ವಾರ ಪತ್ರಿಕೆ (2005–2012), ಅಮೋಘ ವಾರ್ತೆ, ತುಮಕೂರು (2006–2015), ಸಿಇಓ ಆಗಿ ರಾಜ್ಯ ಮಟ್ಟದ ಮಯೂರ ಟಿವಿ ಚಾನೆಲ್ (201–2017), ಆದಿತ್ಯ ವಾಣಿ ಆನ್ ಲೈನ್ ನ್ಯೂಸ್ ಚಾನೆಲ್ ( 2018–2026), ಆದಿತ್ಯವಾಣಿ ದಿನ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕರಾಗಿ (2022-2026) ಕರ್ತವ್ಯ ನಿರ್ವಹಿಸಿದ್ದಾರೆ.
ತಿಪಟೂರು ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ (2015), ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ವಾರ್ಷಿಕ ಪ್ರಶಸ್ತಿ (2017), ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2017), ಮೈಸೂರು ದಸರಾ ಮಹೋತ್ಸವದಲ್ಲಿ ಐದು ಬಾರಿ ರಾಜ್ಯ ವಿಭಾಗ ಮಟ್ಟದ ಪ್ರಶಸ್ತಿ, ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ಕೊಡ ಮಾಡುವ ರಾಜ್ಯ ಮಟ್ಟದ ಸಾಧಕ ಪ್ರಶಸ್ತಿ (2023), ಕಾಯಕ ರತ್ನ ಪ್ರಶಸ್ತಿ (ಬೀದರ್ –2024) ಲಭಿಸಿರುತ್ತದೆ. ಇದಲ್ಲದೇ ಸಂಘ ಸಂಸ್ಥೆಗಳ ಮತ್ತು ನಾಗರೀಕರ ನೂರಾರು ಸನ್ನಾನ ಗೌರವಗಳು ಇವರಿಗೆ ಸಂದಿವೆ.
ಇವರ ಸೇವೆ ಗುರ್ತಿಸಿ ಕೆಯುಡಬ್ಲೂಜೆ ಏಪ್ರಿಲ್ 11–12ರಂದು ರಾಜ್ಯ ಮಟ್ಟದ ದತ್ತಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಇದರ ಪೂರ್ವಭಾವಿಯಾಗಿ ಕೆಯುಡಬ್ಲೂಜೆ ರಾಜ್ಯ ಮಟ್ಟದ ಟಿ.ಕೆ.ಮಲಗೊಂಡ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ತಿಪಟೂರು ಕೃಷ್ಣ ಅವರನ್ನು ತಿಪಟೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಪತ್ರಕರ್ತ ಸನ್ಮಾನಿಸಿದರು.
ಸಂಘದ ಅಧ್ಯಕ್ಷರಾದ ಟಿ.ಎಸ್.ದಯಾನಂದ್, ಉಪಾಧ್ಯಕ್ಷರಾದ ಕರಿಕೆರೆ ಪ್ರಶಾಂತ್, ಕಾರ್ಯದರ್ಶಿ ಸಿದ್ದೇಶ್, ಖಜಾಂಚಿ ಕುಮಾರಸ್ವಾಮಿ, ಹಿರಿಯ ಪತ್ರಕರ್ತ ಆನಂದ್ ಸೇರಿದಂತೆ ಸಂಘದ ಪದಾಧಿಜಾರಿಗಳು, ಇತರೆ ಪತ್ರಕರ್ತರು ಉಪಸ್ಥಿತರಿದ್ದರು.
ಆದಿತ್ಯವಾಣಿ ಸಂಪಾದಕರಾದ ತಿಪಟೂರು ಕೃಷ್ಣ ಸತತ 31 ವರ್ಷಗಳ ಮಾಧ್ಯಮ ಕ್ಷೇತ್ರದ ದೀರ್ಘ ಸೇವೆಯ ಜೊತೆಯಲ್ಲೇ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಮುದ್ರಣ ಮತ್ತು ದೃಶ್ಯ ಮಾದ್ಯಮ ಸೇವೆ ಮಾಡಿರುವ ಇವರ ಆದಿತ್ಯವಾಣಿ ದಿನ ಪತ್ರಿಕೆಯಲ್ಲಿ ಪ್ರಕಟಿಸಿದ ಕೈಗಾರಿಕೆಗಳ ಸಬ್ಸಿಡಿ ಹಗರಣ ತನಿಖಾ ವರದಿಗೆ ಕೆಯುಡಬ್ಲ್ಯೂಜೆ ರಾಜ್ಯ ಮಟ್ಟದ ಟಿ ಕೆ ಮಲಗೊಂಡ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಜಿಲ್ಲೆಗೆ ಮತ್ತು ತಾಲ್ಲೂಕಿಗೆ ಗೌರವ ಬಂದಿದೆ ಎಂದು ಅಧ್ಯಕ್ಷ ದಯಾನಂದ್ ಸಭೆಗೆ ತಿಳಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


