ತುಮಕೂರು: ನಗರದ ದಿಬ್ಬೂರು ಸರ್ಕಲ್ ನಿಂದ ಶಿರಾ ಗೇಟ್ ಕಡೆಗೆ 80 ಅಡಿ ರಸ್ತೆಯಲ್ಲಿ ವೀಲಿಂಗ್ ಮಾಡಿಕೊಂಡು ಬರುತ್ತಿದ್ದ ಯುವಕನನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿರಾ ಗೇಟ್ ಎಸ್.ಎನ್.ಪಾಳ್ಯದ ಮೊಹಮ್ಮದ್ ಸಲೀಂ (17) ಎಂಬಾತ ಏ.4ರಂದು ಬೆಳಗ್ಗೆ 10:30ರ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಡಿಯೋ ಬೈಕ್ ಅನ್ನು ಚಲಾಯಿಸಿಕೊಂಡು ಬರುತ್ತಿದ್ದ. ಬೀಟ್ ಪೊಲೀಸ್ ಅಧಿಕಾರಿಗಳ ದೂರಿನ ಅನ್ವಯ ಅಪ್ರಾಪ್ತನಾಗಿದ್ದರೂ ವಾಹನ ಚಾಲನೆ ಮಾಡಿದರ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತ ಬಾಲಕನಿಗೆ ಚಾಲನೆ ಮಾಡಲು ಬೈಕ್ ನೀಡಿದ್ದ ಕಾರಣಕ್ಕೆ ಸವಾರನ ತಂದೆ ಸಾದಿಕ್ ಪಾಷಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರತ್ಯೇಕ ಪ್ರಕರಣ: ಹೊನ್ನೇನಹಳ್ಳಿ ಕಡೆಯಿಂದ ರಿಂಗ್ ರಸ್ತೆಯಲ್ಲಿ ಡಿಯೋ ಬೈಕ್ ನಲ್ಲಿ ತಿಕ್ಕತೊಟ್ಲುಕೆರೆಯ ಮುಬಾರಕ್ ಪಾಷ (19) ಎಂಬಾತ ಸೋಮವಾರ ಮಧ್ಯಾಹ್ನ 2:15ರ ಹೊತ್ತಿನಲ್ಲಿ ವೀಲಿಂಗ್ ಮಾಡಿಕೊಂಡು ವಾಹನ ಚಾಲನೆ ಮಾಡುತ್ತಿದ್ದು, ಆತನನ್ನು ಬೆನ್ನಟ್ಟಿದ ಬೀಟ್ ಪೊಲೀಸ್ ಅಧಿಕಾರಿಗಳಾದ ಶಾಂತಕುಮಾರ್ ಹಾಗೂ ಹರೀಶ್ ಗುಬ್ಬಿ ಗೇಟ್ ಜಂಕ್ಷನ್ ಬಳಿ ವಶಕ್ಕೆ ಪಡೆದು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


