ಕೊರಟಗೆರೆ: ಮನೆಯ ಮುಂದಿನ ಕಾಂಪೌಂಡ್ ನಲ್ಲಿ ನಿಲ್ಲಿಸಿದ್ದ ಒಂದು ಕಾರು ಮತ್ತು ಎರಡು ಬೈಕ್‌ಗಳಿಗೆ ಕಿಡಿಗೇಡಿಯೋರ್ವ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಕೊರಟಗೆರೆಯ ಕೋಳಾಲ ಗ್ರಾಮದಲ್ಲಿ ನಡೆದಿದೆ.
ಕೊರಟಗೆರೆ ತಾಲ್ಲೂಕಿನ ಕೋಳಾಲ ಕೆ.ಸಿ.ಎನ್.ಭಾರತ್ ಗ್ಯಾಸ್ ಏಜೆನ್ಸಿಯ ಮಾಲೀಕರಾದ ವಿರೂಪಾಕ್ಷಯ್ಯ ಅವರಿಗೆ ಸೇರಿದ ಮಹೇಂದ್ರ ಕಂಪನಿಯ ಕಾರು, ರಾಯಲ್ ಎನ್ ಫೀಲ್ಡ್ ಬೈಕ್, ಓಲಾ ಎಲೆಕ್ಟ್ರಿಕ್ ಬೈಕ್ ಗಳನ್ನು ಎಂದಿನಂತೆ ತಮ್ಮ ಮನೆಯ ಕಾಂಪೌಂಡ್ ನಲ್ಲಿ ನಿಲ್ಲಿಸಲಾಗಿತ್ತು, ತಡರಾತ್ರಿ ಸುಮಾರು 12–40ರ ಸಮಯದಲ್ಲಿ ಮುಸುಕುಧಾರಿ ಕಿಡಿಗೆಡಿಯೊಬ್ಬ ಕಾಂಪೌಂಡ್ ಪಕ್ಕದಲ್ಲಿ ನಿಂತು ಕಾರಿನ ಮೇಲೆ ಪೆಟ್ರೋಲ್ ಸುರಿದು ಬಳಿಕ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿಯಾದ ಘಟನೆ ಸಿಸಿ ಕ್ಯಾಮೆರಾದಲ್ಲಿ ಕಿಡಿಗೇಡಿ ಕೃತ್ಯ ಸೆರೆಯಾಗಿ ಕಂಡು ಬಂದಿದೆ, ಕಿಡಿಗೇಡಿ ಹಚ್ಚಿನ ಬೆಂಕಿಯ ಕೆನ್ನಾಲಿಗೆಗೆ ಕಾರು ಹಾಗೂ ಎರಡು ಬೈಕ್ ಗಳು ಸುಟ್ಟು ಕರಕಲಾಗಿದೆ, ಈ ವೇಳೆ ಮನೆಯ ಅಕ್ಕಪಕ್ಕ ಸುತ್ತ ಹೊಗೆ ಅವರಿಸಿದ್ದು ಅಕ್ಕ ಪಕ್ಕದ ಮನೆಯವರು ಕೂಡಲೇ ನೀರು ಸುರಿದು ಡೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಘಟನೆಯ ಸಿಸಿ ಕ್ಯಾಮರಾದಲ್ಲಿ ಸೇರೆಯಾದ ದೃಶ್ಯದ ತುಣುಕನ್ನು ವಶಪಡಿಸಿಕೊಂಡು ಬೆಂಕಿ ಹಚ್ಚಿನ ಕಿಡಿಗೇಡಿಯ ಪತ್ತೆಕಾರ್ಯದಲ್ಲಿ ತೋಡಗಿದ್ದಾರೆ ಎನ್ನಲಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


