ತುಮಕೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ತಾಲೂಕು ಘಟಕಕ್ಕೆ ನಡೆದ ಚುನಾವಣೆಯಲ್ಲಿ 9 ಮಹಿಳಾ ಸದಸ್ಯರು ಸೇರಿದಂತೆ 26 ಶಿಕ್ಷಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ತಾಲೂಕು ಘಟಕದ ಚುನಾವಣೆಗಾಗಿ ತಾಲೂಕು ಚುನಾವಣಾಧಿಕಾರಿಯಾಗಿ ಡಯಟ್‌ನ ನಿವೃತ್ತ ಉಪನ್ಯಾಸಕ ಕೆ.ಕೃಷ್ಣಮೂರ್ತಿ 10 ಏಪ್ರಿಲ್ 2026 ರಂದು ಅಧಿಸೂಚನೆ ಹೊರಡಿಸಿದ್ದರು. ಏಪ್ರಿಲ್ 14ರಂದು ಚುನಾವಣಾ ಪ್ರಕ್ರಿಯೆಗಳು ನಡೆದು, 9 ಮಹಿಳಾ ಮೀಸಲು ಸೇರಿದಂತೆ ಒಟ್ಟು 26 ಸ್ಥಾನಗಳಿಗೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಿರುವ ಅಷ್ಟೂ ಸ್ಥಾನಗಳ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಕೃಷ್ಣಮೂರ್ತಿ ಘೋಷಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ತಾಲೂಕು ಘಟಕದ ಅಧ್ಯಕ್ಷ ಪಿ.ಜಿ.ತಿಮ್ಮೇಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಪರಮೇಶ್, ನಿಕಟಪೂರ್ವ ಕಾರ್ಯದರ್ಶಿ ಕೆ.ನಾಗರಾಜು ಅವರುಗಳು ಅವಿರೋಧ ಆಯ್ಕೆಗೆ ಶ್ರಮಿಸಿದ್ದರು.
ಅವಿರೋಧ ಆಯ್ಕೆಯಾದ ಸದಸ್ಯರು:
ಸಾಮಾನ್ಯ ಕ್ಷೇತ್ರಗಳು: ದಿನೇಶ್ ಪಿ.ಎನ್.ಸಹ ಶಿಕ್ಷಕರು ಚಿಕ್ಕಸಾರಂಗಿ, ಹರೀಶ್ ಕೆ.ವಿ, ಸಹಶಿಕ್ಷಕರು ಹರಳೂರು, ಹರೀಶ್‌ಕುಮಾರ್.ಬಿ.ದೈಹಿಕ ಶಿಕ್ಷಣ ಶಿಕ್ಷಕರು ಕೋರ, ಜಗದೀಶ್.ಕೆ.ಎಚ್, ಸಹಶಿಕ್ಷಕರು ಬೆಳ್ಳಗೆರೆ, ಜಯರಾಮ್ ಕೆ.ಎ. ಸಹಶಿಕ್ಷಕರು ಬೈಚಾಪುರ, ಲೋಕೇಶ್ ಟಿ.ಎಚ್, ಸಹಶಿಕ್ಷಕರು ವಡ್ಡರಹಳ್ಳಿ, ಮಲ್ಲಿಕಾರ್ಜುನಯ್ಯ ಎಚ್.ಆರ್. ಸಹಶಿಕ್ಷಕರು ಹೆಗ್ಗರೆ, ಮಹಮದ್ ಫೈರೋಜ್ ಸಹಶಿಕ್ಷಕರು ಕೋರ, ನಾಗರಾಜು.ಕೆ. ಸಹ ಶಿಕ್ಷಕರು ಬಸಿಲಹಳ್ಳಿ, ನಾಗರಾಜು.ಕೆ.ವಿ. ಸಹಶಿಕ್ಷಕರು ಗೋವಿಂದರಾಜಪುರ, ಪದ್ಮರಾಜು.ಡಿ. ಸಹಶಿಕ್ಷಕರು ಮಹಿಮನಪಾಳ್ಯ, ಪರಮೇಶ್, ಸಹಶಿಕ್ಷಕರು ಹೆತ್ತೇನಹಳ್ಳಿ ಪಾಳ್ಯ, ಸತೀಶ್, ಸಹಶಿಕ್ಷಕರು, ಯಲ್ಲಾಪುರ, ಸಿದ್ದರಾಜು.ಕೆ.ಆರ್. ಸಹಶಿಕ್ಷಕರು, ಗೇರಹಳ್ಳಿ, ಶ್ರೀನಿವಾಸ್.ಟಿ., ಸಹಶಿಕ್ಷಕರು, ಕುಚಂಗಿಪಾಳ್ಯ, ಶಿವಕುಮಾರ್.ಸಿ., ಸಹಶಿಕ್ಷಕರು, ಆಗ್ನೇನಹಳ್ಳಿ, ತಿಮ್ಮೇಗೌಡ ಪಿ., ಸಹಶಿಕ್ಷಕರು, ಉತ್ತರ ಬಡಾವಣೆ ತುಮಕೂರು.
ಮಹಿಳಾ ಮೀಸಲು ಕ್ಷೇತ್ರಗಳು: ಜಯಲಕ್ಷ್ಮಮ್ಮ ಡಿ., ಸಹಶಿಕ್ಷಕಿ, ಯಲ್ಲಾಪುರ. ಕೋಮಲ ಆರ್., ಸಹಶಿಕ್ಷಕಿ, ಕಾತ್ಯಾಯಿನಿ, ಮಂಗಳ ಗೌರಮ್ಮ ಎಚ್.ಎನ್., ಸಹಶಿಕ್ಷಕಿ, ಕೋಟನಹಳ್ಳಿ. ಮಂಜುಳ ಕೆ.ಎ., ಸಹಶಿಕ್ಷಕಿ, ಹನುಮಂತನಗರ. ಮೆಹಬೂಬ್ ಬಿ., ಸಹಶಿಕ್ಷಕಿ, ಗೇರಹಳ್ಳಿ. ನಂದಿನಿ.ಎಸ್.ವಿ, ಸಹಶಿಕ್ಷಕಿ, ಕೈದಾಳ. ಸವಿತ ಆರ್., ಸಹಶಿಕ್ಷಕಿ, ಚಿಕ್ಕಹೊಸೂರು. ಸಂಗೀತ.ಡಿ, ಸಹಶಿಕ್ಷಕಿ, ಗೂಳೀಹೊನ್ನೆ. ಶಾಂತಕುಮಾರಿ.ಕೆ.ಟಿ., ಸಹಶಿಕ್ಷಕಿ, ಪಶ್ಚಿಮ ಬಡಾವಣೆ, ತುಮಕೂರು.
ಬಿ.ಇ.ಓ ಹನುಮಂತಪ್ಪ ಅವಿರೋಧವಾಗಿ ಆಯ್ಕೆಯಾದ ಎಲ್ಲರಿಗೂ ಹೂ ಗುಚ್ಛ ನೀಡಿ ಅಭಿನಂದಿಸಿ, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವಂತೆ ಶುಭ ಹಾರೈಸಿದರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


