nammatumakuru

    Subscribe to Updates

    Get the latest creative news from FooBar about art, design and business.

    What's Hot

    ಎಸ್.ಎಸ್.ಎಲ್.ಸಿ. ಫಲಿತಾಂಶ: ಸಹನಾ ಆಂಗ್ಲ ಮಾಧ್ಯಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

    April 23, 2026

    ದ್ವಿಭಾಷ ಮಾಧ್ಯಮದ ಹೆಸರಿನಲ್ಲಿ ಕನ್ನಡವನ್ನು ನಿರ್ಲಕ್ಷ್ಯಸಲಾಗುತ್ತಿದೆ: ಎಐಡಿಎಸ್ ಓ ಪ್ರತಿಭಟನೆ

    April 23, 2026

    ಆರ್ಥಿಕ ಶಿಸ್ತು ಇದ್ದರೆ ಸಹಕಾರಿ ಕ್ಷೇತ್ರ ಅಭಿವೃದ್ದಿ ಸಾಧ್ಯ: ಕೆ.ಎನ್.ರಾಜಣ್ಣ

    April 23, 2026
    Facebook Twitter Instagram
    ಟ್ರೆಂಡಿಂಗ್
    • ಎಸ್.ಎಸ್.ಎಲ್.ಸಿ. ಫಲಿತಾಂಶ: ಸಹನಾ ಆಂಗ್ಲ ಮಾಧ್ಯಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
    • ದ್ವಿಭಾಷ ಮಾಧ್ಯಮದ ಹೆಸರಿನಲ್ಲಿ ಕನ್ನಡವನ್ನು ನಿರ್ಲಕ್ಷ್ಯಸಲಾಗುತ್ತಿದೆ: ಎಐಡಿಎಸ್ ಓ ಪ್ರತಿಭಟನೆ
    • ಆರ್ಥಿಕ ಶಿಸ್ತು ಇದ್ದರೆ ಸಹಕಾರಿ ಕ್ಷೇತ್ರ ಅಭಿವೃದ್ದಿ ಸಾಧ್ಯ: ಕೆ.ಎನ್.ರಾಜಣ್ಣ
    • ತುಮಕೂರು: ಒಂದೇ ವಾರದಲ್ಲಿ 32 ನವಿಲುಗಳ ಮಾರಣಹೋಮ; ಬಿಸಿಲಿನ ತಾಪಕ್ಕೆ ರಾಷ್ಟ್ರಪಕ್ಷಿಗಳು ಬಲಿ?
    • ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ; ಈಗ ತಮಾಷೆ ಮಾಡುವಂತೆಯೂ ಇಲ್ಲ: ಎಫ್‌ ಐಆರ್‌ ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ
    • ಕರ್ನಾಟಕ SSLC ಪರೀಕ್ಷಾ ಫಲಿತಾಂಶ 2026 ಪ್ರಕಟ: ಶೇ. 94.10ರಷ್ಟು ಫಲಿತಾಂಶ, ದ.ಕ. ಜಿಲ್ಲೆ ಪ್ರಥಮ, ಕಲಬುರಗಿಗೆ ಕೊನೆಯ ಸ್ಥಾನ
    • ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಮನ್ನಣೆ ಸಿಗಬೇಕು: ಕರವೇ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಪ್ಪ
    • ತುಮಕೂರು: ಬುಗುಡನಹಳ್ಳಿ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ–ನೀರಿನ ಲಭ್ಯತೆ ಪರಿಶೀಲನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ದ್ವಿಭಾಷ ಮಾಧ್ಯಮದ ಹೆಸರಿನಲ್ಲಿ ಕನ್ನಡವನ್ನು ನಿರ್ಲಕ್ಷ್ಯಸಲಾಗುತ್ತಿದೆ: ಎಐಡಿಎಸ್ ಓ ಪ್ರತಿಭಟನೆ
    ತುಮಕೂರು April 23, 2026

    ದ್ವಿಭಾಷ ಮಾಧ್ಯಮದ ಹೆಸರಿನಲ್ಲಿ ಕನ್ನಡವನ್ನು ನಿರ್ಲಕ್ಷ್ಯಸಲಾಗುತ್ತಿದೆ: ಎಐಡಿಎಸ್ ಓ ಪ್ರತಿಭಟನೆ

    By adminApril 23, 2026No Comments2 Mins Read
    aidso

    ತುಮಕೂರು: ರಾಜ್ಯದ ಹಲವು ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷ ಮಾಧ್ಯಮದ ಹೆಸರಿನಲ್ಲಿ ಕನ್ನಡ ಮಾಧ್ಯಮವನ್ನು ಕಿತ್ತುಹಾಕಿ ಇಂಗ್ಲಿಷ್ ಮಾಧ್ಯಮವನ್ನು ಕಡ್ಡಾಯ ಮಾಡುತ್ತಿರುವ ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿ  ಎಐಡಿಎಸ್ ಓ ತುಮಕೂರು ಜಿಲ್ಲಾ ವತಿಯಿಂದ ನಗರದ ಟೌನ್ ಹಾಲ್ ಬಳಿ ಪ್ರತಿಭಟನೆ ಮಾಡಲಾಯಿತು.

    ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ ಓ ಜಿಲ್ಲಾ ಕಾರ್ಯದರ್ಶಿಗಳಾದ ಲಕ್ಕಪ್ಪ ಅವರು ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಹೇರಿಕೆ ಮಾಡುವುದರ ಮೂಲಕ ಕನ್ನಡವನ್ನೇ ಮರೆಮಾಚುವ ಉನ್ನಾರವನ್ನು ಇಂದು ಸರ್ಕಾರ ರೂಪಿಸಿದೆ, ಮಾತೃಭಾಷೆ ನಮ್ಮ ಸಂವಹನದ ಭಾಷೆಯಾಗಿದ್ದು ಆ ಭಾಷೆಯ ಮೂಲಕವೇ ಕಲಿಕೆಯಾದಾಗ ಮಗುವು ಸರಿಯಾಗಿ ವಿಷಯಗಳನ್ನು ಗ್ರಹಿಸಲು ಮತ್ತು ತನ್ನ ಭಾವನೆಗಳನ್ನು ನಿರ್ದಿಷ್ಟವಾಗಿ ವ್ಯಕ್ತಪಡಿಸಲು ಸಹಾಯಕವಾಗುತ್ತದೆ. ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯ ಮೂಲಕ ಕೊಡುವುದರಿಂದ ಮಗುವಿನ ಬೌದ್ಧಿಕ ಮಟ್ಟವು ಹೆಚ್ಚುತ್ತದೆ ಹಾಗೂ ಮಾನಸಿಕವಾಗಿ ಸದೃಢವಾಗಲು ಸಹಾಯವಾಗುತ್ತದೆ ಎಂದು ಹೇಳಿದರು


    Provided by
    Provided by

    ಮುಂದುವರಿದು, ರಾಜ್ಯ ಸರ್ಕಾರವು ಇದ್ಯಾವುದನ್ನು ಪರಿಗಣಿಸದೆ, “ರಾಜ್ಯದ 4404 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮವನ್ನು ಆರಂಭಿಸಲು ರಾಜ್ಯ ಸರ್ಕಾರವು ಆದೇಶಿಸಿದೆ. ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಸರ್ಕಾರಿ ಶಾಲೆ ಶಿಕ್ಷಕರಿಗೆ ಆಂಗ್ಲ ಮಾಧ್ಯಮ ತರಬೇತಿ ನೀಡಲಾಗುತ್ತಿದೆ. ಸರ್ಕಾರವು ಇದನ್ನು ದ್ವಿಭಾಷಾ ಮಾಧ್ಯಮ ಎಂದು ಕರೆಯುತ್ತಿದ್ದರೂ ಇಂಗ್ಲಿಷಿನಲ್ಲೇ ಪಾಠ ಮಾಡಬೇಕೆಂದು ಹಲವೆಡೆ ಶಿಕ್ಷಕರಿಗೆ ನಿರ್ದೇಶನ ನೀಡಲಾಗುತ್ತಿದೆ. ಕೆಲವು ಶಾಲೆಗಳಲ್ಲಿ ಜೂನ್ ನಿಂದ ಕನ್ನಡ ಮಾಧ್ಯಮ ಇರುವುದಿಲ್ಲ, ಬದಲಿಗೆ ಕೇವಲ ಆಂಗ್ಲ ಮಾಧ್ಯಮಕ್ಕೆ ಪ್ರವೇಶ ನೀಡಲಾಗುವುದೆಂದು ಪಾಲಕರಿಗೆ ತಿಳಿಸಲಾಗಿದೆ. ಇದು ಅಕ್ಷಮ್ಯ! ಸರ್ಕಾರದ ಈ ನಡೆಯನ್ನು ಎಐಡಿಎಸ್ಓ ಅತ್ಯುಗ್ರ ಪದಗಳಲ್ಲಿ ಖಂಡಿಸುತ್ತದೆ ಎಂದರು.

    ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಉಪಾಧ್ಯಕ್ಷರಾದ ಮೋಸಿನಬಾನು ರವರು ಮಾತನಾಡಿ, ಕನ್ನಡ ನಮ್ಮ ಮಾತೃಭಾಷೆ ಅದು ಒಂದು ಆಯ್ಕೆ ಅಲ್ಲ, ಅದು ನಮ್ಮ ಹಕ್ಕು. ಕೆಪಿಎಸ್ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನ ಮುಚ್ಚುತ್ತಿದ್ದಾರೆ.  ನಾವು ನಮ್ಮ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ, ಪ್ರಾಣ ಕೊಟ್ಟಾದರೂ ಸಹ ನಮ್ಮ ಶಾಲೆಗಳನ್ನ ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು.

    ಪ್ರತಿಭಟನೆಯಲ್ಲಿ ಎಐಡಿಎಸ್ ಓ ಪದಾಧಿಕಾರಿಗಳಾದ ಭರತ್ ಸೈಯದ್, ಸಂದೀಪ್,  ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಮಂಜುಳ, ಗೌಸ್ ಪೀರ್, ಶಿವಪ್ರಕಾಶ್ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ತುಮಕೂರು: ಒಂದೇ ವಾರದಲ್ಲಿ 32 ನವಿಲುಗಳ ಮಾರಣಹೋಮ; ಬಿಸಿಲಿನ ತಾಪಕ್ಕೆ ರಾಷ್ಟ್ರಪಕ್ಷಿಗಳು ಬಲಿ?

    April 23, 2026

    ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಮನ್ನಣೆ ಸಿಗಬೇಕು: ಕರವೇ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಪ್ಪ

    April 23, 2026

    ತುಮಕೂರು: ಬುಗುಡನಹಳ್ಳಿ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ–ನೀರಿನ ಲಭ್ಯತೆ ಪರಿಶೀಲನೆ

    April 23, 2026

    Leave A Reply Cancel Reply

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಪಾವಗಡ

    ಎಸ್.ಎಸ್.ಎಲ್.ಸಿ. ಫಲಿತಾಂಶ: ಸಹನಾ ಆಂಗ್ಲ ಮಾಧ್ಯಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

    April 23, 2026

    ಪಾವಗಡ: ತಾಲೂಕಿನ ಕೋಟಗುಡ್ಡದ ಸಹನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಶಾಲೆಗೆ…

    ದ್ವಿಭಾಷ ಮಾಧ್ಯಮದ ಹೆಸರಿನಲ್ಲಿ ಕನ್ನಡವನ್ನು ನಿರ್ಲಕ್ಷ್ಯಸಲಾಗುತ್ತಿದೆ: ಎಐಡಿಎಸ್ ಓ ಪ್ರತಿಭಟನೆ

    April 23, 2026

    ಆರ್ಥಿಕ ಶಿಸ್ತು ಇದ್ದರೆ ಸಹಕಾರಿ ಕ್ಷೇತ್ರ ಅಭಿವೃದ್ದಿ ಸಾಧ್ಯ: ಕೆ.ಎನ್.ರಾಜಣ್ಣ

    April 23, 2026

    ತುಮಕೂರು: ಒಂದೇ ವಾರದಲ್ಲಿ 32 ನವಿಲುಗಳ ಮಾರಣಹೋಮ; ಬಿಸಿಲಿನ ತಾಪಕ್ಕೆ ರಾಷ್ಟ್ರಪಕ್ಷಿಗಳು ಬಲಿ?

    April 23, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.