ಮಧುಗಿರಿ: ತೋಟಗಾರಿಕೆ ಇಲಾಖೆ ವತಿಯಿಂದ 2026-27 ನೆ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್/ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆಯಡಿ, ತೋಟಗಾರಿಕೆ ರೈತರಿಗೆ ಹಾಗೂ ಉದ್ದಿಮೆದಾರರಿಗೆ ನೆರವು ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.
ಯೋಜನೆಯ ವಿವಿಧ ಕಾರ್ಯಕ್ರಮಗಳಡಿ ಹಣ್ಣಿನ ಬೆಳೆಗಳಾದ ಬಾಳೆ, ಮಾವು ಹಾಗೂ ದಾಳಿಂಬೆ ಹೊಸ ಪ್ರದೇಶ ವಿಸ್ತರಣೆ, ಪ್ರಧಾನ ಹಣ್ಣಿನ ಬೆಳೆಗಳಾದ ಡ್ರ್ಯಾಗನ್ ಹಣ್ಣು, ಬೆಣ್ಣೆ ಹಣ್ಣು, ಹುಣಸೆ ಹೊಸ ಪ್ರದೇಶ ವಿಸ್ತರಣೆ, ಹೈಬ್ರಿಡ್ ತರಕಾರಿ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ, ನೆರಳು ಪರದೆ ಹಾಗೂ ವೈಯಕ್ತಿಕ ನೀರು ಸಂಗ್ರಹಣಾ ಘಟಕಗಳ ನಿರ್ಮಾಣ, ಸಂರಕ್ಷಿತ ಬೇಸಾಯ ಕಾರ್ಯಕ್ರಮದಡಿ ಪ್ಲಾಸ್ಟಿಕ್ ಹೊದಿಕೆ, ಪಕ್ಷಿ ನಿರೋಧಕ ಬಲೆ ಅಳವಡಿಕೆ, ಸಮಗ್ರ ಕೀಟ, ರೋಗ ಮತ್ತು ಪೋಷಕಾಂಶಗಳ ನಿರ್ವಹಣೆ, ಕೊಯ್ಲೋತ್ತರ ನಿರ್ವಹಣೆಗಾಗಿ, ಕಡಿಮೆ ವೆಚ್ಚದ ಈರುಳ್ಳಿ ಶೇಖರಣಾ ಘಟಕ, ನೆರವು ನೀಡಲಾಗುವುದು.
ಹಳೆ ತೋಟಗಳ ಪುನಶ್ಚೇತನ, ಜೇನು ಸಾಕಾಣಿಕೆ, ಮಿನಿ ಟ್ರ್ಯಾಕ್ಟರ್ ಹಾಗೂ ಇತರೆ ಯಂತ್ರೋಪಕರಣಗಳಿಗೆ ಸಹಾಯಧನ ನೀಡಲಾಗುವುದು. ಮಾರ್ಗಸೂಚಿಯನ್ವಯ ವಿವಿಧ ಕಾರ್ಯಕ್ರಮಗಳನ್ನಾಧರಿಸಿ ಶೇ.25 ರಿಂದ 50 ರಷ್ಟು ಸಹಾಯಧನ ನೀಡಲಾಗುವುದು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಮಧುಗಿರಿ—08137–282417 ಸಹಾಯಕ ತೋಟಗಾರಿಕೆ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಕಸಬಾ– 80955 13992, ಸಹಾಯಕ ತೋಟಗಾರಿಕೆ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಐ.ಡಿ ಹಳ್ಳಿ ಮತ್ತು ಪುರವರ -99162 63620, ಸಹಾಯಕ ತೋಟಗಾರಿಕೆ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಕೊಡಿಗೇನಹಳ್ಳಿ- 80955 13992, ಸಹಾಯಕ ತೋಟಗಾರಿಕೆ ಅಧಿಕಾರಿ, ರೈತ ಸಂಪರ್ಕ ಕೇಂದ್ರ ದೊಡ್ಡೇರಿ ಮತ್ತು ಮಿಡಿಗೇಶಿ 91484 08616 ಸಂಪರ್ಕಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶಶಿಧರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


