nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ: ತುಮಕೂರು ಪ್ರಥಮ

    June 21, 2026

    ಸಿರಾದಲ್ಲಿ ಮೀನು ಮಾರಾಟ ಮಳಿಗೆಯನ್ನು ಸ್ಥಾಪಿಸಲು ಕೂಡಲೇ ಕ್ರಮ: ಟಿ.ಬಿ.ಜಯಚಂದ್ರ

    June 21, 2026

    ಸಿರಾ ತಾಲೂಕು ಹೊಸಹಳ್ಳಿ ಗೇಟ್ ಬಳಿ ಪುರುಷ ಶವ ಪತ್ತೆ

    June 21, 2026
    Facebook Twitter Instagram
    ಟ್ರೆಂಡಿಂಗ್
    • ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ: ತುಮಕೂರು ಪ್ರಥಮ
    • ಸಿರಾದಲ್ಲಿ ಮೀನು ಮಾರಾಟ ಮಳಿಗೆಯನ್ನು ಸ್ಥಾಪಿಸಲು ಕೂಡಲೇ ಕ್ರಮ: ಟಿ.ಬಿ.ಜಯಚಂದ್ರ
    • ಸಿರಾ ತಾಲೂಕು ಹೊಸಹಳ್ಳಿ ಗೇಟ್ ಬಳಿ ಪುರುಷ ಶವ ಪತ್ತೆ
    • ಜಯನಗರ ಪಶ್ಚಿಮ ಪಾರ್ಕ್ ಜಾಗದಲ್ಲಿ ‘ನಮ್ಮ ಕ್ಲಿನಿಕ್’ ಸ್ಥಾಪನೆಗೆ ವಿರೋಧ: ಆಸ್ಪತ್ರೆ ನಿರ್ಮಾಣಕ್ಕೆ ತಡೆ ಕೋರಿ ಶಾಸಕರಿಗೆ ಮನವಿ
    • ಕುಣಿಗಲ್: ಮೀಟರ್ ಬಡ್ಡಿ ದಂಧೆಗೆ ಮತ್ತೊಂದು ಬಲಿ; ಕಿರುಕುಳ ತಾಳಲಾರದೆ ಹರಿಕಥೆ ದಾಸ ಆತ್ಮಹತ್ಯೆ!
    • ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅನುಕೂಲವಾಗುವಂತೆ ಬಾಲಭವನ ಅಭಿವೃದ್ಧಿಗೆ ಪೂರಕ ಕಾಮಗಾರಿ ಕೈಗೊಳ್ಳಲು ಸಿಇಒ ಅಶ್ವಿಜಾ ಸಲಹೆ
    • ಪಾವಗಡ: ವಸತಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಶಾಸಕರಿಗೆ ಪ್ರಾಂಶುಪಾಲರ ಮನವಿ
    • ಎಸ್ ಐಆರ್ ಪ್ರಕ್ರಿಯೆಯಿಂದ ತಿಪಟೂರು ಕ್ಷೇತ್ರದ ಯಾವೊಬ್ಬ ಮತದಾರನೂ ಹೊರಗುಳಿಯಬಾರದು: ಸಿ.ಬಿ. ಶಶಿಧರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಿರಾದಲ್ಲಿ ಮೀನು ಮಾರಾಟ ಮಳಿಗೆಯನ್ನು ಸ್ಥಾಪಿಸಲು ಕೂಡಲೇ ಕ್ರಮ: ಟಿ.ಬಿ.ಜಯಚಂದ್ರ
    ಸಿರಾ June 21, 2026

    ಸಿರಾದಲ್ಲಿ ಮೀನು ಮಾರಾಟ ಮಳಿಗೆಯನ್ನು ಸ್ಥಾಪಿಸಲು ಕೂಡಲೇ ಕ್ರಮ: ಟಿ.ಬಿ.ಜಯಚಂದ್ರ

    By adminJune 21, 2026No Comments2 Mins Read
    t b jayachandra

    Provided by
    Provided by

    ಸಿರಾ: ಮೀನು ಒಂದು ಪೌಷ್ಟಿಕ ಮತ್ತು ಪೋಷಕ ಆಹಾರ ಎಂದು ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು. ನಗರದ ಮೀನುಗಾರಿಕಾ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಮತ್ಸ್ಯ ಆಶ್ರಯ ಯೋಜನೆಯಡಿಯಲ್ಲಿ ಮೀನುಗಾರರಿಗೆ ಮನೆಗಳ ಹಕ್ಕು ಪತ್ರ ಹಾಗೂ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಸಿರಾ ಭಾಗದಲ್ಲಿ ಈ ಹಿಂದೆ ಮಳೆ ಬಂದು ಕೆರೆಗಳು ತುಂಬಿದಾಗ ಮಾತ್ರ ಮೀನಿನ ಮರಿಗಳನ್ನು ಸಾಕುವ ಮೂಲಕ ಮೀನು ಕೃಷಿ ನಡೆದಿತ್ತು. ಇದೀಗ ಕಳ್ಳಂಬೆಳ್ಳ, ಸಿರಾ, ಮುದ rollerskates ಸೇರಿದಂತೆ ಅನೇಕ ಕೆರೆಗಳಿಗೆ ಹೇಮಾವತಿಯ ನೀರು ಹರಿದ ಪರಿಣಾಮ ತಾಲೂಕಿನ ಬಹುತೇಕ ಕೆರೆಗಳಲ್ಲಿ ಮೀನು ಸಾಕಾಣಿಕೆಯು ಹೆಚ್ಚಾಗಿ ನಡೆಯುತ್ತಿದ್ದು ಮೀನು ಸಾಕಾಣಿಕೆದಾರರು ಆರ್ಥಿಕವಾಗಿ ಸದೃಢಗೊಳ್ಳಲು ಕಾರಣವಾಗಿದೆ ಎಂದರು.

    ಸಿರಾ ಭಾಗದಲ್ಲಿ ಅತಿ ಹೆಚ್ಚು ಮೀನು ಸಾಕಾಣಿಕೆಗೆ ಒತ್ತು ಸಿಗಲು ದಯಾನಂದ ಸಾಗರ್ ಅವರಂತಹ ಅನೇಕ ಮಂದಿಯ ಮೀನುಗಾರಿಕೆಯ ಕಾಳಜಿ ಕಾರಣವಾಗಿದೆ. ವಿವಿಧ ಉತ್ತಮ ತಳಿಯ ಮೀನು ಮರಿಗಳ ಸಾಕಣಿಕೆಗೆ ಗುತ್ತಿಗೆದಾರರು ಮುಂದಾಗಬೇಕು. ಮೀನುಗಾರರಿಗೆ ವಿವಿಧ ಯೋಜನೆಗಳ ಸೌಲಭ್ಯ ಲಭಿಸುವಂತಾಗಬೇಕು ಎಂದರು.

    ಗ್ರಾಮೀಣ ಪ್ರದೇಶದಲ್ಲಿ ಪ್ರಮುಖವಾಗಿ ಸಮುದಾಯ ಕೆರೆಗಳು, ಕೃಷಿ ಹೊಂಡ, ತಡೆ ಅಣೆಕಟ್ಟು, ಗೋಕಟ್ಟೆ, ನಾಲಾಬದು, ಬೋರ್ವೆಲ್ ಆಧಾರಿತ ನೀರು ಸಂಗ್ರಹಣಾ ಕೊಳಗಳು, ನೀರಾವರಿ ಬಾವಿಗಳು ಹಾಗೂ ಪಾಂಡ್ ಗಳು ಮುಂತಾದ ಜಲ ಸಂಪನ್ಮೂಲಗಳಲ್ಲಿ ಮೀನು ಸಾಕಣೆಗೆ ವಿಪುಲ ಅವಕಾಶವಿದೆ. ಈ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಮೀನು ಸಾಕಣೆ ಮಾಡಿದರೆ ಗ್ರಾಮೀಣ ಮಟ್ಟದಲ್ಲಿ ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಆಹಾರ ದೊರೆತಂತಾಗುತ್ತದೆಯಲ್ಲದೆ ರೈತರ ಆರ್ಥಿಕ ಅಭಿವೃದ್ಧಿಗೂ ಸಹ ಸಹಕಾರಿಯಾಗುತ್ತದೆ ಎಂದು ಜಯಚಂದ್ರ ತಿಳಿಸಿದರು.

    ಜಿಲ್ಲಾ ಮೀನುಗಾರಿಕಾ ಉಪ ನಿರ್ದೇಶಕ ನಂಜುಂಡಪ್ಪ, ಸಿರಾ ಸಹಾಯಕ ನಿರ್ದೇಶಕ ಕೆ.ಕೆ.ಮಹೇಶ್ವರಪ್ಪ, ಮಹರ್ಷಿ ಪ.ಪಂ ಮೀನು ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಪಂಜಗಾನಹಳ್ಳಿ ದಯಾನಂದ ಸಾಗರ್, ಸಪ್ತಗಿರಿ ಬಡಾವಣೆಯ ತಿಪ್ಪೇಸ್ವಾಮಿ ಸೇರಿದಂತೆ ಅನೇಕ ಪ್ರಮುಖರು ಇದ್ದರು. ಮೀನಿನ ಬಲೆ, ದೋಣಿ ಸೇರಿದಂತೆ ವಿವಿಧ ಸವಲತ್ತುಗಳನ್ನು ಮೀನುಗಾರರಿಗೆ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಯಿತು.

    ಮೀನಿನ ಮಾಂಸ ನಮ್ಮ ದೇಹದ ದೃಢತೆಗೆ ಮತ್ತು ಆರೋಗ್ಯಕ್ಕೆ ಅಗತ್ಯವಾದ ಸಸಾರಜನಕ, ಜೀವಸತ್ವ ಮತ್ತು ಲವಣಗಳನ್ನು ಒದಗಿಸುತ್ತದೆ. ಇತರೆ ಮಾಂಸಗಳಿಗಿಂತ ಶ್ರೇಷ್ಠ ಮತ್ತು ಕಡಿಮೆ ವೆಚ್ಚದಲ್ಲಿ ದೊರೆಯುತ್ತದೆ. ಸಿರಾ ಭಾಗದಲ್ಲಿ ಹೇಮಾವತಿಯ ನೀರು ಕೆರೆಗಳನ್ನು ತುಂಬಿದ ಪರಿಣಾಮ ಮೀನು ಕೃಷಿ ಹೆಚ್ಚಾಗಿದ್ದು ಸಿರಾ ನಗರದಲ್ಲಿ ಮೀನು ಮಾರಾಟ ಮಳಿಗೆಯನ್ನು ಸ್ಥಾಪಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು.

    | ಟಿ.ಬಿ.ಜಯಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಸಿರಾ ತಾಲೂಕು ಹೊಸಹಳ್ಳಿ ಗೇಟ್ ಬಳಿ ಪುರುಷ ಶವ ಪತ್ತೆ

    June 21, 2026

    ನೂತನ ನಂದಿನಿ ಕ್ಷೀರ ಮಳಿಗೆ ಉದ್ಘಾಟನೆ: ರೈತರಿಗೆ ಮತ್ತಷ್ಟು ಲಾಭದಾಯಕವಾಗಲಿದೆ: ಎಸ್.ಆರ್.ಗೌಡ

    June 19, 2026

    ಸಿರಾ: ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

    June 15, 2026

    Leave A Reply Cancel Reply

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ: ತುಮಕೂರು ಪ್ರಥಮ

    June 21, 2026

    ತುಮಕೂರು: ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯು ಶೇ. 100.63ರಷ್ಟು ಪ್ರಗತಿ ಸಾಧಿಸಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ…

    ಸಿರಾದಲ್ಲಿ ಮೀನು ಮಾರಾಟ ಮಳಿಗೆಯನ್ನು ಸ್ಥಾಪಿಸಲು ಕೂಡಲೇ ಕ್ರಮ: ಟಿ.ಬಿ.ಜಯಚಂದ್ರ

    June 21, 2026

    ಸಿರಾ ತಾಲೂಕು ಹೊಸಹಳ್ಳಿ ಗೇಟ್ ಬಳಿ ಪುರುಷ ಶವ ಪತ್ತೆ

    June 21, 2026

    ಜಯನಗರ ಪಶ್ಚಿಮ ಪಾರ್ಕ್ ಜಾಗದಲ್ಲಿ ‘ನಮ್ಮ ಕ್ಲಿನಿಕ್’ ಸ್ಥಾಪನೆಗೆ ವಿರೋಧ: ಆಸ್ಪತ್ರೆ ನಿರ್ಮಾಣಕ್ಕೆ ತಡೆ ಕೋರಿ ಶಾಸಕರಿಗೆ ಮನವಿ

    June 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.