ತುಮಕೂರು: ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್, ಜಿಲ್ಲಾ ಶಾಖೆ ತುಮಕೂರು ಇವರ ವತಿಯಿಂದ ಜು.12 ಬೆಳಿಗ್ಗೆ 10.30ಕ್ಕೆ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರ, ಜಿ.ಸಿ.ರಸ್ತೆ, ತುಮಕೂರು ಇಲ್ಲಿ ಮರಾಠ ಕುಲತಿಲಕ ಹಿಂದೂ ಸ್ವರಾಜ್ಯ ಸ್ಥಾಪಕ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 399ನೇ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ.
ದಿವ್ಯ ಸಾನಿಧ್ಯವನ್ನು ಗವಿಪುರಂನ ಶ್ರೀ ಗೋಸಾಯಿ ಮಠದ ಶ್ರೀ ಮಂಜುನಾಥ ಭಾರತಿ ಸ್ವಾಮಿಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ಕೆಕೆಎಂಪಿ ರಾಜ್ಯಾಧ್ಯಕ್ಷ ಎಸ್. ಸುರೇಶ್ ಸಾರೆ ಅವರು ವಹಿಸುವರು. ಸಚಿವ ವಿ.ಸೋಮಣ್ಣ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಮುಖ್ಯ ಅತಿಥಿಗಳಾಗಿ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಜ್ಯೋತಿಗಣೇಶ್, ಬಿ.ಸುರೇಶ್ ಗೌಡ, ಎಸ್.ಆರ್.ಸಿಂಧೆ, ಟಿ.ಆರ್.ಸುನಿಲ್ ಚವಾಣ್, ಟಿ.ಆರ್. ವೆಂಕಟರಾವ್ ಚವಾಣ್ ಅವರುಗಳು ಆಗಮಿಸುವರು.
ಹೆಚ್.ಎನ್.ಚಂದ್ರಶೇಖರ್ ಶಿವಾಜಿ ಕುರಿತು ಉಪನ್ಯಾಸ ನೀಡುವರು. ಟಿ.ಎಚ್.ಜನಾರ್ಧನ್ ಸೋನಾಲೆ, ಆರ್.ನಾಗೇಶ್ರಾವ್ ಗಾಯಕ್ವಾಡ್, ಟಿ.ವಿ.ಶ್ರೀನಿವಾಸರಾವ್ ಸಾಳಂಕೆ ಅವರುಗಳು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ನಿರ್ಮಲಾಬಾಯಿ, ಗೋಪಿರಾವ್ ಲಾಟೆ, ಹೇಮೋಜಿರಾವ್ ಸಿಂಧೆ ಅವರುಗಳನ್ನು ಸನ್ಮಾನಿಸಲಾಗುವುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


