ತುಮಕೂರು: ಶುದ್ಧಿ ಚಾರಿಟಬಲ್ ಆಂಡ್ ಎಜುಕೇಷನಲ್ ಟ್ರಸ್ಟ್, ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದೊಂದಿಗೆ ನಗರದ ಬೆಳಗುಂಬದ ಕೆಂಪೇಗೌಡ ಬಡಾವಣೆಯ ಶ್ರೀ ಚಂದ್ರ ಯೋಗ ಮಂದಿರದಲ್ಲಿ ಜುಲೈ 15ರಿಂದ ಉಚಿತ ಯೋಗಾಸನ ಪ್ರಾಣಾಯಾಮ, ಧ್ಯಾನ ಹಾಗೂ ಪವರ್ ಯೋಗ ತರಬೇತಿ ಹಮ್ಮಿಕೊಳ್ಳಲಾಗಿದೆ.
ಯೋಗವೆಂಬುದು ಒಂದು ಸಾಧನೆ. ಯೋಗ ಬಲ್ಲವನಿಗೆ ರೋಗವಿಲ್ಲ, ಯೋಗದಿಂದ ಬೊಜ್ಜು ದೇಹ, ಮಾನಸಿಕ ಒತ್ತಡ, ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ, ಬಿ.ಪಿ., ಮಂಡಿನೋವು, ಸೊಂಟನೋವು, ಸ್ತ್ರೀಯರ ಮಾಸಿಕ ದೋಷ ಹಾಗೂ ಇತರೆ ಎಲ್ಲಾ ರೋಗಗಳನ್ನು ನಿಯಂತ್ರಣದಲ್ಲಿಡಲು ಮತ್ತು ಮನಸ್ಸಿಗೆ ಶಾಂತಿ ತಂದು ಕೊಡಲು ಯೋಗ ಅತಿ ಮುಖ್ಯ. ಇಂತಹ ಯೋಗ ಅಭ್ಯಾಸಗಳನ್ನು ಪರಿಣತ ಶಿಕ್ಷಕಿಯರಿಂದ ಪಡೆದು ನಿತ್ಯ ಅಭ್ಯಾಸ ಮಾಡಿದಲ್ಲಿ ನಿಮ್ಮ ಆರೋಗ್ಯವು ಉತ್ತಮವಾಗುತ್ತದೆ ಎಂದು ಯೋಗ ಗುರುಗಳೂ ಆದ ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಚಂದ್ರಣ್ಣ ತಿಳಿಸಿದ್ದಾರೆ.
ಬೆಳಗುಂಬದ ಚಂದ್ರ ಯೋಗ ಮಂದಿರದಲ್ಲಿ ಯೋಗ ತರಗತಿಗಳು ಆರಂಭವಾಗಲಿವೆ. ಪವರ್ ಯೋಗ, ಫೇಸ್ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ವಿಶೇಷ ತರಬೇತಿಗಳು ಇರುತ್ತವೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಹೆಣ್ಣು ಮಕ್ಕಳು ಕೂಡ ಯೋಗ ಶಿಬಿರದಲ್ಲಿ ಪಾಲ್ಗೊಂಡು ಯೋಗಾಭ್ಯಾಸ ಮಾಡಿ ಆರೋಗ್ಯವಂತರಾಗಿ ಎಂದು ಅವರು ಕೋರಿದ್ದಾರೆ.
ಯೋಗಾಭ್ಯಾಸ ತರಗತಿಗಳು ಜುಲೈ 15ರ (ಬುಧವಾರ)ದಿಂದ ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ 7 ಗಂಟೆಯವರೆಗೆ ಹಾಗೂ ಸಂಜೆ 5ರಿಂದ 6 ಗಂಟೆಯವರೆಗೆ ನಡೆಯಲಿವೆ. ತರಬೇತಿ ಪಡೆದ ಯೋಗ ಶಿಕ್ಷಕರು ತರಬೇತಿ ನೀಡುವರು. ಭಾಗವಹಿಸುವ ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಿ ಅಭ್ಯಾಸ ಪ್ರಾರಂಭಿಸಲು ವಿನಂತಿಸಿದ್ದಾರೆ.
ಹೆಸರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಪ್ರೊ.ಕೆ. ಚಂದ್ರಣ್ಣ–9900622993, 6360002626, ರಮೇಶಣ್ಣ–9535409078, ಬಿ.ಸಿ. ವಿಜಯಕುಮಾರ್–9448274947 ಇವರನ್ನು ಸಂಪರ್ಕಿಸಲು ಕೋರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


