ಔರಾದ್: ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮದ ಮಾದಿಗ ಓಣಿಯಲ್ಲಿ ಲೋಕಶಾಹಿರ್ ಸಾಹಿತ್ಯ ರತ್ನ ಶ್ರೀ ಅಣ್ಣಾಭಾವು ಸಾಠೆ ಅವರ 106ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ರಮೇಶ್ ಮಾಳೆಗೆ ಅವರು ಅಣ್ಣಾಭಾವು ಸಾಠೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, “ಅಣ್ಣಾಭಾವು ಸಾಠೆ ಅವರು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ವಾಟೇಗಾಂವ್ ಗ್ರಾಮದಲ್ಲಿ 1920ರ ಆಗಸ್ಟ್ 1 ರಂದು ಜನಿಸಿದರು. ಕೇವಲ ಒಂದೂವರೆ ದಿನ ಮಾತ್ರ ಶಾಲೆಗೆ ತೆರಳಿದ್ದರೂ, ತಮ್ಮ ಸಾಹಿತ್ಯ ಮತ್ತು ಕವಿತೆಗಳ ಮೂಲಕ ಸಮಾಜದ ಶೋಷಿತ ವರ್ಗದ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿದ ಧೀಮಂತ ನಾಯಕ” ಎಂದು ಅವರ ಸೇವೆಯನ್ನು ಸ್ಮರಿಸಿದರು.
ಈ ಆಚರಣೆಯಲ್ಲಿ ಗ್ರಾಮದ ಮುಖಂಡರಾದ ಚಂದ್ರಕಾಂತ್ ಮಾಳೆಗೆ, ಶಿವಕಾಂತ್ ಮಾಳೆಗೆ, ರವಿಕಾಂತ್ ಮಲ್ಲಿಗೆ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ದೇವಿದಾಸ ಮಾಳೆಗೆ ಹಾಗೂ ಅನಿಲ್, ಶಾಂತಕುಮಾರ್, ಜೀವನ್ ಮಾಳೆಗೆ, ಅಮೃತ್, ಕಮಲಕಾರ್, ಅಂಬದಾಸ್, ಅಮರ್, ಶಿವಶಾಂತ್, ಪ್ರೇಮ್ ಸೇರಿದಂತೆ ಮಾದಿಗ ಸಮಾಜದ ನೂರಾರು ಯುವಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
