ತುಮಕೂರು: ನಗರದ ಎಸ್ ಐಟಿ ಮುಖ್ಯರಸ್ತೆಯ ಸಿದ್ದೇಶ್ವರ ಕನ್ವೆನ್ಷನ್ ಸೆಂಟರ್ ಪಕ್ಕ ಉಪ್ಪಿನ ಕೊಳಗ ಹಾಸ್ಟೆಲ್ ಮುಂಭಾಗ ಕಸ ತಂದು ಸುರಿಯಲಾಗುತ್ತಿದ್ದು, ಕಳೆದ 3 ದಿನಗಳಿಂದ ತ್ಯಾಜ್ಯ ಎತ್ತುವಳಿ ಮಾಡದೆ ಸಮಸ್ಯೆಯಾಗಿದೆ.
ರಸ್ತೆ ಬದಿಯಲ್ಲೇ ತಂದು ಸುರಿಯುತ್ತಿರುವ ಕಸವನ್ನು ಬೀದಿನಾಯಿಗಳು, ಬಿಡಾಡಿ ದನಗಳು ಕೆದಕಲು ಮುಂದಾಗಿದ್ದು, ರಸ್ತೆ ಮೇಲೆಲ್ಲಾ ಕಸ ಚೆಲ್ಲಾಪಿಲ್ಲಿಯಾಗಿ ಬೀಳುತ್ತಿದೆ. ಇದರಿಂದಾಗಿ ಸಮೀಪದ ವಾಣಿಜ್ಯ ಮಳಿಗೆಗಳವರು, ಹಾಸ್ಟೆಲ್ ವಿದ್ಯಾರ್ಥಿಗಳು ನಿವಾಸಿಗಳು, ರಸ್ತೆ ಮೇಲೆ ಸಂಚರಿಸುವವರು ದುರ್ನಾತ ಅನುಭವಿಸುವಂತಾಗಿದ್ದು, ಪಾಲಿಕೆಯವರ ಗಮನಕ್ಕೆ ತಂದರೂ ಪ್ರಯೋಜನವಿಲ್ಲದಂತಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ರಸ್ತೆ ಬಳಿಯೇ ಬಿದ್ದ ಕಸವನ್ನು ನೋಡಿ ಕೆಲವರು ಗಾಡಿಯಲ್ಲಿ ತಂದು ಕಸವನ್ನು ಇಲ್ಲಿಯೇ ಹಾಕುತ್ತಿದ್ದು, ಪಾಲಿಕೆಯವರೂ ಸಹ ಈ ಸ್ಥಳದಲ್ಲಿ ಕಸ ತಂದು ಹಾಕಿರುವ ದೂರು ಕೇಳಿಬಂದಿದೆ.
ಸ್ಮಾರ್ಟ್ ಸಿಟಿಯೆನಿಸಿರುವ ತುಮಕೂರು ನಗರದ ಪ್ರಮುಖ ವಾಣಿಜ್ಯ ರಸ್ತೆಯಾದ ಎಸ್ಐಟಿ ಮುಖ್ಯರಸ್ತೆಯಲ್ಲೇ ಈ ಕಥೆಯಾದರೆ ಬೇರೆ ರಸ್ತೆಗಳು ಕಥೆಏನು ಎಂದು ನಾಗರಿಕರು ಪ್ರಶ್ನಿಸುವಂತಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
