ತುಮಕೂರು: ತುಮಕೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶದಿಂದ ಆ.23 ರಿಂದ 25ರವರೆಗೆ ದೇವರಾಯನದುರ್ಗದ ಕರಿಗಿರಿ ಸಭಾಂಗಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರಿಗಾಗಿ ಪರಿಸರ ಜಾಗೃತಿ ಕುರಿತಾಗಿ ಮೂರು ದಿನಗಳ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ.
ಆ.23 ರಂದು ಬೆಳಗ್ಗೆ 9.30ಕ್ಕೆ ಪ್ರಭಾರ ಕುಲಪತಿ ಪ್ರೊ.ನಾಗಭೂಷಣ ಎಚ್. ಅವರು ‘ನದಿ ನಡಿಗೆ’ ಕಾರ್ಯಕ್ರಮಕ್ಕೆ ಕುಲಪತಿ ಕಾರ್ಯಾಲಯದ ಎದುರು ಚಾಲನೆ ನೀಡುವರು. ಅಲ್ಲಿಂದ ಆರಂಭಗೊಂಡ ನಡಿಗೆಯು ದೇವರಾಯನದುರ್ಗದ ಭೋಗ ಲಕ್ಷ್ಮೀನರಸಿಂಹ ದೇವಾಲಯದ ಬಳಿ ಕೊನೆಗೊಳ್ಳಲಿದೆ.
ಮಧ್ಯಾಹ್ನ 3ಕ್ಕೆ ನಡೆಯುವ ಕಾರ್ಯಾಗಾರವನ್ನು ಗಾಂಧಿ ಸ್ಮಾರಕ ನಿಧಿಯ ನಿರ್ದೇಶಕ ಜಿ.ಬಿ.ಶಿವರಾಜು ಉದ್ಘಾಟಿಸುವರು. ನಂತರ ವಿಚಾರ ಗೋಷ್ಠಿಗಳು ನಡೆಯಲಿವೆ.
ಆ.25 ರಂದು ಜಯಮಂಗಲಿ ನದಿಯು ತನ್ನ ಹರಿವು ಪ್ರಾರಂಭಿಸುವ ಇರಕಸಂದ್ರ ಕೆರೆಯಿಂದ ಆರಂಭಿಸಿ, ನದಿಯ ನೈಜ ಸ್ವರೂಪವನ್ನು ಗ್ರಹಿಸುತ್ತಾ ಜೀವವೈವಿಧ್ಯದ ಅಧ್ಯಯನ ಮಾಡುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
