ತುಮಕೂರು: ಮಧುಗಿರಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಹಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ತಲಾ 4 ಸೇರಿದಂತೆ ಒಟ್ಟು 12 ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ವಿವರ ಇಂತಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಹಶಿಕ್ಷಕರಾದ ಕೊರಟಗೆರೆ ತಾಲೂಕು ಶಂಭೋನಹಳ್ಳಿ ಶಾಲೆಯ ರೇವಣ್ಣ ಎಸ್., ಮಧುಗಿರಿ ತಾಲೂಕು ಸೋಗೆನಹಳ್ಳಿ ಗೊಲ್ಲರಹಟ್ಟಿ ಶಾಲೆಯ ನೇತ್ರಾವತಿ ಯು., ಪಾವಗಡ ತಾಲೂಕು ಪಾವಗಡ ಪಟ್ಟಣದ ಶನೇಶ್ವರ ದೇವಸ್ಥಾನದ ಹಿಂಭಾಗದ ಶಾಲೆಯ ಆದಿಲಕ್ಷ್ಮಿ ಹಾಗೂ ಸಿರಾ ತಾಲೂಕು ಅನುಪನಹಳ್ಳಿ ಶಾಲೆಯ ನಿರ್ಮಲ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಹಶಿಕ್ಷಕರಾದ ಕೊರಟಗೆರೆ ತಾಲೂಕು ಪಾಠಗಾನಹಳ್ಳಿ ಶಾಲೆಯ ಗಿರಿಜಮ್ಮ ಹೆಚ್.ಜೆ., ಪಾವಗಡ ತಾಲೂಕು ಕಣಿವೆನಹಳ್ಳಿ ಶಾಲೆಯ ನಾರಾಯಣಪ್ಪ ಕೆ., ಸಿರಾ ತಾಲೂಕು ಒಜ್ಜುಗುಂಟೆ ಶಾಲೆಯ ಸಿದ್ದಪ್ಪ ಟಿ.ಹೆಚ್., ಮುಖ್ಯ ಶಿಕ್ಷಕರಾದ ಮಧುಗಿರಿ ತಾಲೂಕು ಯಳ್ಳೂರು ಶಾಲೆಯ ದೇವರಾಜಮ್ಮ ಹೆಚ್.ಎನ್. ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದಲ್ಲಿ ಸಹಶಿಕ್ಷಕರಾದ ಕೊರಟಗೆರೆ ತಾಲೂಕು ದುಡ್ಡನಹಳ್ಳಿ ಶಾಲೆಯ ಅಶೋಕ್ ಪೂಜಾರಿ ಹಾಗೂ ಸಿರಾ ತಾಲೂಕು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಟಿಪ್ಪು ಸುಲ್ತಾನ್ ಎಂ., ಮಧುಗಿರಿ ತಾಲೂಕು ಸೋದೇನಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಗೋವಿಂದರಾಜು ಹೆಚ್.ಈ., ಪಾವಗಡ ತಾಲೂಕು ಕೊಡಮಡಗು ಶಾಲೆಯ ದೈಹಿಕ ಶಿಕ್ಷಕಿ ವಿಮಲ ಆರ್. ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
