ತುಮಕೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision–SIR)–2026 ಸಂಬಂಧ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23ರವರೆಗೆ ಕಾಲಾವಕಾಶ ನೀಡಲಾಗಿದ್ದು, ಕರಡು ಮತದಾರರ ಪಟ್ಟಿ ಪರಿಶೀಲಿಸಿಕೊಂಡು ಯಾವುದಾದರೂ ತಪ್ಪುಗಳಲ್ಲಿ/ಹೆಸರು ಕೈಬಿಟ್ಟಿದ್ದಲ್ಲಿ/ಹೊಸ ಸೇರ್ಪಡೆಗಳಲ್ಲಿ ನಿಗದಿತ ನಮೂನೆ 6, 7, 8ರಲ್ಲಿ ಭರ್ತಿ ಮಾಡಿ ERO/AERO/Additional AERO/ಗಳಿಗೆ ನೀಡಬಹುದಾಗಿದೆ ಅಥವಾ ಆನ್ ಲೈನ್ ಮೂಲಕವೂ ಸಹ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಎಸ್.ಐ.ಆರ್. ಪ್ರಕ್ರಿಯೆಯು ಸಂದರ್ಭದಲ್ಲಿ ಸೆಪ್ಟೆಂಬರ್ 11ರವರೆಗೆ ಜಿಲ್ಲೆಯಲ್ಲಿ ಒಟ್ಟು 1,11,875 ನೋಟೀಸುಗಳನ್ನು ಜನರೇಟ್ ಮಾಡಲಾಗಿದ್ದು, ಈ ಪೈಕಿ ಇಲ್ಲಿಯವರೆಗೂ 77,955 ನೋಟೀಸುಗಳನ್ನು ಮತದಾರರು/ಅವರ ಕುಟುಂಬದವರಿಗೆ ಜಾರಿ ಮಾಡಲಾಗಿದೆ. ಉಳಿದ 33,920 ನೋಟೀಸುಗಳನ್ನು ಜಾರಿ ಮಾಡಲು ಬಾಕಿಯಿದ್ದು, ಸಂಬಂಧಿಸಿದವರಿಗೆ ಸಕಾಲದಲ್ಲಿ ಜಾರಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ.
ಜಿಲ್ಲೆಯಲ್ಲಿ ಸೆಪ್ಟೆಂಬರ್ 5 ರಿಂದ ಆರಂಭವಾಗಿರುವ ವಿಚಾರಣೆ ಪ್ರಕ್ರಿಯೆಯಲ್ಲಿ ಸೆ.11ರವರೆಗೆ ಒಟ್ಟು 25,392 ನೋಟೀಸುಗಳನ್ನು 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ERO/AERO/Additional AERO ಗsಂದ ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಪಂಚಾಯಿತಿ/ವಾರ್ಡ್/ಸರ್ಕಾರಿ ನಿಗದಿತ ಕಚೇರಿಗಳಲ್ಲಿ ವಿಚಾರಣೆ ಮಾಡಲಾಗಿದೆ. ಉಳಿದ ಜಾರಿಯಾದ ನೋಟೀಸುಗಳ ವಿಚಾರಣೆಯು ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಮತದಾರರ ನೋಂದಣಾಧಿಕಾರಿ/ಸಹಾಯಕ ಮತದಾರರ ನೋಂದಣಾಧಿಕಾರಿಗಳ ಲಾಗಿನ್‌ನಲ್ಲಿ ವಿಚಾರಣಾ ಸಂದರ್ಭದಲ್ಲಿ ಮರಣ ಹೊಂದಿದವರು ಮತ್ತು Duplicate ಮತದಾರರೆಂದು ಈವರೆಗೆ ಒಟ್ಟು 67 ಮತದಾರರನ್ನು ಗುರುತಿಸಲಾಗಿದೆ.
ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಜೂನ್ 16 ರಿಂದ ಸೆಪ್ಟೆಂಬರ್ 10ರವರೆಗೆ ನಮೂನೆ–6 ರಲ್ಲಿ 18874, ನಮೂನೆ–6ಏರಲ್ಲಿ 30, ನಮೂನೆ–7ರಲ್ಲಿ 2242 ಹಾಗೂ ನಮೂನೆ-8ರಲ್ಲಿ 28412 ಸೇರಿ ಒಟ್ಟು 49,558 ಅರ್ಜಿಗಳು ಸ್ವೀಕೃತವಾಗಿದ್ದು, ನಿಯಮಾನುಸಾರ ಪರಿಶೀಲಿಸಿ ನಿಗದಿತ ಅವಧಿಯೊಳಗೆ ವಿಲೇವಾರಿಗೆ ಕ್ರಮವಹಿಸಲಾಗುತ್ತಿದೆ. ವಿವಿಧ ನೋಂದಾಯಿತ/ಮಾನ್ಯತೆ ಪಡೆದಿರುವ ಯಾವುದೇ ಪಕ್ಷಗಳ ಅಧ್ಯಕ್ಷರು/ಕಾರ್ಯದರ್ಶಿಯವರು ತಮ್ಮ ಪಕ್ಷದ ಅಧಿಕೃತ ಮತಗಟ್ಟೆ ಮಟ್ಟದ ಏಜೆಂಟ್‌ಗಳನ್ನು ಎಲ್ಲಾ ವಿಧಾನಸಭಾ ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳಿಗೆ ನೇಮಿಸುವುದರೊಂದಿಗೆ ಆಯಾ ಮತಗಟ್ಟೆ ಅಧಿಕಾರಿಗಳೊಂದಿಗೆ ಮತದಾರರ ಪಟ್ಟಿಯ ಸಮರ್ಪಕ ತಯಾರಿಕೆಗೆ ಸಹಕಾರ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
