ತುಮಕೂರು: ದೇಶದ, ಸಮಾಜದ ಬೆಳವಣಿಗೆಗೆ ನಿರ್ಮಾತೃಗಳಾಗಿ ಎಂಜಿನಿಯರ್ ಗಳು ಇಂಜಿನಿಯರ್ಗಳು ತಮ್ಮ ಆತ್ಮಸಾಕ್ಷಿಯಂತೆ ಕೆಲಸ ಮಾಡಬೇಕು. ಸರ್ಕಾರಗಳು ಬದಲಾಗುವ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುವ ಇಂಜಿನಿಯರ್ ಗಳು ಅಭಿವೃದ್ಧಿಯ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ, ತುಮಕೂರು ಜಿಲ್ಲಾ ಸರ್ಕಾರಿ ಇಂಜಿನಿಯರ್ ಗಳ ಸಂಘದ ಉದ್ಘಾಟನೆ ಹಾಗೂ ಸಂಘದ ಲಾಂಛನ ಅನಾವರಣ ಮಾಡಿ ಮಾತನಾಡಿದರು.
ಉತ್ತರ ಕರ್ನಾಟಕ ಭಾಗರ್ಭಿ ಮೈಸೂರು ಕರ್ನಾಟಕ ಅಭಿವೃದ್ಧಿಯಾಗಿರುವುದಕ್ಕೆ ಮೈಸೂರು ಸಂಸ್ಥಾನದ ಗಾಲಿಗೆ ಕೃಷ್ಣರಾಜ ಒಡೆಯರ್ ಹಾಗೂ ಅವರ ಆಡಳಿತದಲ್ಲಿ ಇಂಜಿನಿಯರ್, ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಅಭಿವೃದ್ಧಿ ಚಿಂತನೆ, ಅವರು ಮಾಡಿದ ಕೆಲಸ ಕಾರಣ. ವಿಶ್ವೇಶ್ವರಯ್ಯನವರು ನಾಡಿನ ಅಭಿವೃದ್ಧಿ ಆಗಬೇಕು ಎಂದುಕೊಂಡು ಕಾರ್ಯನಿರ್ವಹಿಸಿದರು, ಕಾರ್ಯ ವ್ಯಾಪ್ತಿಯಲ್ಲಿ ಸ್ವಾರ್ಥಬರಬಾರದು ಎಂಬ ತತ್ವ, ಆದರ್ಶಗಳನ್ನು ಇಟ್ಟುಕೊಂಡಿದ್ದರು. ತಮ್ಮ ಜೀವನಪೂರ್ತಿ ಅದೇ ತತ್ವಡಡಿಯಲ್ಲಿ ಕಾರ್ಯನಿರ್ವಹಿಸಿದರು ಎಂದು ನುಡಿದರು.
ಎಲ್ಲಾ ಇಂಜಿನಿಯರ್ ಗಳು ನಾಡಿನ ಅಭಿವೃದ್ಧಿಗೆ ತಮ್ಮದೇ ಆದ ಕೆಲಸ ಮಾಡಿದ್ದಾರೆ. ಯಾವುದೇ ಪಕ್ಷದ ಸರ್ಕಾರ ಬರಬಹುದು, ಬದಲಾಗಬಹುದು, ಆದರೆ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಬೇಕಾದವರು ಇಂಜಿನಿಯರ್ ಗಳು, ಸರ್ಕಾರದ ಮಟ್ಟದಲ್ಲಿ ನಿಯಮ ರೂಪಿಸುವಾಗ ದೋಷ ಕಂಡುಬಂದರೆ, ಇಂಜಿನಿಯರ್ ಗಳು ಸಂಘಗಳು ಚರ್ಚೆ ಮಾಡಿ ಸರಿಯಾದ ಸಲಹೆ ನೀಡುವ ಮೂಲಕ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದರು ಡಾ.ಜಿ. ಪರಮೇಶ್ವರ್ ಹೇಳಿದರು.
ಬದಲಾಗುತ್ತಿರುವ ತಂತ್ರಜ್ಞಾನದ ಜೊತೆ ನಾವು ಪ್ರಯಾಣ ಮಾಡಬೇಕು. ಇಂದು ಎಲ್ಲಾ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಪ್ರವೇಶ ಮಾಡುತ್ತಿದೆ. ಅದರ ವೇಗಕ್ಕೆ ಹೊಂದಿಕೊಳ್ಳಬೇಕು. ತಂತ್ರಜ್ಞಾನ ಮತ್ತು ಸುಧಾರಣೆಗೆ ಆಗಬೇಕು. ಸರ್ಕಾರದಿಂದ ಎಂ. ವಿಶ್ವೇಶ್ವರಯ್ಯ ಸ್ಥಾನದ ಸಾಹಸ ಮಾಡಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಿದ ಡಾ. ಪರಮೇಶ್ವರ್, ಮುಂದಿನ ಮಾದಿನಿಂದ ಸರ್ಕಾರದಂದೇ ಇಂಜಿನಿಯರ್ ದಿನ ಆಚರಿಸಲಾಗುವುದು ಎಂದು ಹೇಳಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ, ಆರ್ಥಿಕ ಬೆಳವಣಿಗೆಯಲ್ಲಿ ಎಲ್ಲಾ ಕ್ಷೇತ್ರದ ಇಂಜಿನಿಯರ್ ಗಳ ಪಾತ್ರ ದೊಡ್ಡದಿದೆ. ಹೊಸ ಆವಿಷ್ಕಾರ, ಮೂಲಸೌಕರ್ಯ ಒದಗಿಸುವಲ್ಲಿ ಇಂಜಿನಿಯರ್ ಗಳು ಕೊಡುಗೆ ನೀಡಿದ್ದಾರೆ. ಆದರೆ, ಕೆಲವು ಪರಿಸ್ಥಿತಿಯಲ್ಲಿ ಇಂಜಿನಿಯರ್ ಗಳು ವಿವಿಧ ರೀತಿಯ ಒತ್ತಡದಲಿ ಕೆಲಸ ಮಾಡಬೇಕಾಗಿದೆ. ಆದರೂ ಇಂಜಿನಿಯರ್ ಗಳು ತಮ್ಮ ಆತ್ಮಸಾಕ್ಷಿಯಂತೆ ಕೆಲಸ ಮಾಡುವ ಪ್ರಯತ್ನ ಮಾಡಿ ಎಂದು ಹೇಳಿದರು.
ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಆಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ನಗರಾಡಳಿತದ ಆಯುಕ್ತ ಸುಧಾ, ಬಿವಿಂಟಿಸಿ ಉಪಾಧ್ಯಕ್ಷ ನಿಕಿತ್ ರಾಜ್ ಮೌರ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಸರ್ಕಾರದ ಕಾರ್ಯದರ್ಶಿಗಳ ನಿವೃತ್ತರಾಗಿರುವ ರಾಘವನ್, ಪ್ರಧಾನ ಇಂಜಿನಿಯರ್ಗಳಾದ ಬಿ.ಆರ್. ವೀರಭದ್ರಯ್ಯ, ಟಿ.ಎನ್. ಧನರಾಜ್, ಹೆಚ್.ಟಿ. ದಿವಾಕರ್ ನಾಯ್ಕ್, ನಿವೃತ್ತ ಮುಖ್ಯ ಇಂಜಿನಿಯರ್ ಹೆಚ್. ಶಿವಕುಮಾರ್, ಮುಖ್ಯ ಇಂಜಿನಿಯರ್ ಹೆಚ್.ಎಸ್. ಆನಂದ್, ಅಧೀಕ್ಷಕ ಇಂಜಿನಿಯರ್ ಗಳ ಜಿ.ಸಿ. ಜಗದೀಶ್, ಬಿ. ತಿಮ್ಮರಾಯಪ್ಪ ಭಾಗವಹಿಸಿದ್ದರು.
ಜಿಲ್ಲಾ ಸರ್ಕಾರಿ ಇಂಜಿನಿಯರ್ ಗಳ ಸಂಘದ ಅಧ್ಯಕ್ಷ ಹೆಚ್.ಆರ್. ಮುರಳೀಧರ, ಉಪಾಧ್ಯಕ್ಷ ಜೆ.ರಾಜು, ಕಾರ್ಯದರ್ಶಿ ಹೆಚ್.ಎಂ.ಪುಟ್ಟಪ್ಪ, ಖಜಾಂಚಿ ಹೆಚ್.ಎಸ್. ಪ್ರಸನ್ನಕುಮಾರ್, ನಿರ್ದೇಶಕರಾದ ಅಂಜನ್, ಕೆ. ಮಂಜುಕುಮಾರ ಯಾದವ್, ಎಸ್. ಛಾಯಾಮಣಿ, ಜಿ.ಎಸ್. ರಾಧಾಕೃಷ್ಣ, ಬಿ.ಎಸ್. ಸುರೇಶ್ಕುಮಾರ್ ಮೊದಲಾದವರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
