nammatumakuru

    Subscribe to Updates

    Get the latest creative news from FooBar about art, design and business.

    What's Hot

    ರಾಹುಲ್ ಗಾಂಧಿಗೆ ‘ರಾಹು ಕಾಲ’ ಬಂದಿದೆ, ಅವರ ಪ್ರತಿಭಟನೆಗೆ ಯಾವುದೇ ಅರ್ಥವಿಲ್ಲ: ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ

    October 7, 2026

    ಹಾಸನ: ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಶವ ಪತ್ತೆ — ಕೊಲೆ ಶಂಕೆ, ಪ್ರಕರಣ ದಾಖಲು

    October 7, 2026

    ಬೆಂಗಳೂರು: ಅಮೆಜಾನ್ ಕಚೇರಿ ಹೊರಗೆ ಟ್ರಾನ್ಸ್‌’ಫಾರ್ಮರ್ ಸ್ಫೋಟ; ಪಾದಚಾರಿಗೆ ಗಾಯ

    October 7, 2026
    Facebook Twitter Instagram
    ಟ್ರೆಂಡಿಂಗ್
    • ರಾಹುಲ್ ಗಾಂಧಿಗೆ ‘ರಾಹು ಕಾಲ’ ಬಂದಿದೆ, ಅವರ ಪ್ರತಿಭಟನೆಗೆ ಯಾವುದೇ ಅರ್ಥವಿಲ್ಲ: ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ
    • ಹಾಸನ: ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಶವ ಪತ್ತೆ — ಕೊಲೆ ಶಂಕೆ, ಪ್ರಕರಣ ದಾಖಲು
    • ಬೆಂಗಳೂರು: ಅಮೆಜಾನ್ ಕಚೇರಿ ಹೊರಗೆ ಟ್ರಾನ್ಸ್‌’ಫಾರ್ಮರ್ ಸ್ಫೋಟ; ಪಾದಚಾರಿಗೆ ಗಾಯ
    • ತುಮಕೂರು: ಸ್ವಂತ ಉದ್ಯಮ ಸ್ಥಾಪನೆಗೆ ಉದ್ಯಮಶೀಲತಾ ತರಬೇತಿ – ಅರ್ಜಿ ಆಹ್ವಾನ
    • ತುಮಕೂರು: ಹಳೆ ದ್ವೇಷದ ಹಿನ್ನೆಲೆ ಯುವಕನ ಬರ್ಬರ ಹತ್ಯೆ; ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
    • ತುಮಕೂರಿನಲ್ಲಿ ವಿದ್ಯಾರ್ಥಿಗಳಿಗೆ ಕಯಾಕಿಂಗ್, ಕನೋಯಿಂಗ್,  ಶೂಟಿಂಗ್ ವಿಶೇಷ ತರಬೇತಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್
    • ನಂದಿನಿ ಹಾಲಿನ ದರ ಲೀಟರ್‌ ಗೆ ₹8 ಏರಿಕೆ?; ನವೆಂಬರ್ 1ರಿಂದ ಹೊಸ ದರ ಜಾರಿ?
    • ಫ್ರಿಡ್ಜ್‌’ನಲ್ಲಿಟ್ಟ ಆಹಾರ ಎಷ್ಟು ದಿನ ಸೇಫ್? ಈ ವಸ್ತುಗಳನ್ನು ಹೆಚ್ಚು ದಿನ ಇಟ್ಟರೆ ಅಪಾಯ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕುಣಿಗಲ್: ಗೊಂದಲದ ಗೂಡಾದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ
    ಕುಣಿಗಲ್ September 16, 2026

    ಕುಣಿಗಲ್: ಗೊಂದಲದ ಗೂಡಾದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ

    By Ganesh TumkuruSeptember 16, 2026No Comments2 Mins Read
    kunigal

    ಕುಣಿಗಲ್: ಅಧಿಕಾರಿಗಳ ಎಡವಟ್ಟಿನಿಂದಾಗಿ ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಹಾಗೂ ಗ್ರೇಡ್–2 ತಹಶೀಲ್ದಾರ್ ಕೋರ್ಟ್ ಕಲಾಪ ಏಕ ಕಾಲದಲ್ಲಿ ನಡೆದು ತಹಶೀಲ್ದಾರ್ ನ್ಯಾಯಾಲಯದ ಸಭಾಂಗಣದಲ್ಲಿ ಗೊಂದಲಕ್ಕೆ ಕಾರಣವಾದ ಪ್ರಸಂಗ ಮಂಗಳವಾರ ನಡೆಯಿತು.

    ರಾಜ್ಯದ ಪ್ರತಿ ಜಿಲ್ಲಾ ಮತ್ತು ತಾಲೂಕುಗಳಲ್ಲಿ ಸೆ.15 ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಆಯೋಜಿಸುವಂತೆ ಸರ್ಕಾರದ ಸ್ಪಷ್ಟ ಆದೇಶದ ಹಿನ್ನೆಲೆಯಲ್ಲಿ ಇಲ್ಲಿನ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆಯು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಮಂಗಳವಾರ ಇಲ್ಲಿನ ತಹಶೀಲ್ದಾರ್ ನ್ಯಾಯಾಲಯದ ಸಭಾಂಗಣದಲ್ಲಿ ಆಯೋಜಿಸಿತ್ತು.

    ಸಭಾಂಗಣದಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ, ಭಾರತದ ಸಂವಿಧಾನ ಪೀಠಿಕೆಯನ್ನು ಇಡಲಾಗಿತ್ತು. ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಹೊರತು ಪಡಿಸಿ ಬೇರೆ ಯಾವ ಅಧಿಕಾರಿಯೂ ಭಾಗವಹಿಸಿರಲಿಲ್ಲ. ಇದೇ ನ್ಯಾಯಾಲಯದ ಸಭಾಂಗಣದಲ್ಲಿ ಗ್ರೇಡ್–2 ತಹಶೀಲ್ದಾರ್ ಲೀಲಾವತಿ ಅವರು ನ್ಯಾಯಾಲಯದ ಕಲಾಪ ತೆಗೆದುಕೊಂಡಿದ್ದರು. ಹಲವಾರು ವಕೀಲರು, ಕಕ್ಷಿದಾರರು ಕೋರ್ಟ್‌ನಲ್ಲಿ ಭಾಗವಹಿಸಿದ್ದರು.

    ಆದರೆ ನ್ಯಾಯಾಲಯ ಸಭಾಂಗಣದಲ್ಲಿ ಪ್ರಜಾಪ್ರಭುತ್ವ ದಿನ ಆಚರಣೆ ನಡೆಯುತ್ತಿದೆಯೋ ಅಥವಾ ನ್ಯಾಯಾಲಯದ ಕಲಾಪ ನಡೆಯುತ್ತಿದೆಯೋ ಒಂದೂ ತಿಳಿಯದಂತಾಗಿ ಗೊಂದಲಕ್ಕೆ ಕಾರಣವಾಗಿತ್ತು. ಇದು ಕಾಟಾಚಾರದ ಕಾರ್ಯಕ್ರಮವಾಗಿದೆ ಎಂದು ಸಭೆಗೆ ಆಗಮಿಸಿದ ಕೆಲ ಸಂಘಟನೆಗಳ ಪದಾಧಿಕಾರಿಗಳು ಆರೋಪಿಸಿದರು. ಈ ನಡುವೆ ಕಸಾಪ ಅಧ್ಯಕ್ಷ ಡಾ. ಕಪನಿಪಾಳ್ಯ ರಮೇಶ್ ಸಂವಿಧಾನ ಪೀಠಿಕೆ ಓದಿದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಮತಾಮಣಿ, ಪ್ರಜಾಪ್ರಭುತ್ವ ಮೌಲ್ಯ, ಸಂವಿಧಾನ ಆಶಯ ಮತ್ತು ಯುವಜನರ ಪಾಲ್ಗೊಳ್ಳುವಿಕೆ ಬಲಪಡಿಸಲು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಸತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಯ್ಯ, ವಕೀಲರ ಸಂಘದ ಅಧ್ಯಕ್ಷ ಎ.ಆರ್.ರಂಗಸ್ವಾಮಿ ಮತ್ತಿತರರು ಇದ್ದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಮಮತಾ ಮಣಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ,  2007 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಿಂದ ಸ್ಥಾಪಿಸಲ್ಪಟ್ಟ ಈ ದಿನವು ಪ್ರಜಾಪ್ರಭುತ್ವದ ತತ್ವಗಳನ್ನು ಉತ್ತೇಜಿಸಲು ಮತ್ತು ಎತ್ತಿಹಿಡಿಯಲು ಹಾಗೂ ಜಾಗತಿಕವಾಗಿ ಅದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದೆ. ಇದು ಪ್ರಜಾಪ್ರಭುತ್ವದ ಆಡಳಿತ, ಮಾನವ ಹಕ್ಕುಗಳು ಮತ್ತು ಕಾನೂನಿನ ನಿಯಮದ ಮೌಲ್ಯವನ್ನು ನೆನಪಿಸುತ್ತದೆ. ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಬಲಪಡಿಸಲು ಜನರು ಮತ್ತು ಸರ್ಕಾರಗಳನ್ನು ಉತ್ತೇಜಿಸುತ್ತದೆ. ಈ ದಿನವು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಆಡಳಿತದ ಮಹತ್ವವನ್ನು ತೋರಿಸುತ್ತದೆ. ಸ್ವಾತಂತ್ರ್ಯ ಮತ್ತು ಸಮಾನತೆಯ ಪ್ರಚಾರ ಒಳಗೊಂಡಿರುವ ಪ್ರಜಾಪ್ರಭುತ್ವದ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ ಎಂದು ತಿಳಿಸಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ತುಮಕೂರು: ಹಳೆ ದ್ವೇಷದ ಹಿನ್ನೆಲೆ ಯುವಕನ ಬರ್ಬರ ಹತ್ಯೆ; ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

    October 7, 2026

    ದಲಿತ ಗೃಹಮಂತ್ರಿ, ಡಿಸಿಎಂ, ಉಸ್ತುವಾರಿ ಸಚಿವರಿದ್ದರೂ ಮಧುಗಿರಿಯಲ್ಲಿ ದಲಿತರ ಕಗ್ಗೊಲೆ!: ಸಿಂಹಾದ್ರಿ ಹತ್ಯೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

    September 30, 2026

    ಕ್ರೀಡಾಪಟುಗಳ ಸ್ನೇಹ ಸಂಕೇತದ ಕೊಂಡಿ ಕ್ರೀಡೆ: ಪ.ಪೂ. ಕಾಲೇಜುಗಳ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ತಹಶೀಲ್ದಾರ್

    September 3, 2026

    Leave A Reply Cancel Reply

    Our Picks

    50 ಪೈಸೆ ನಾಣ್ಯ ಇನ್ನೂ ಮಾನ್ಯವೇ? RBI ನಿಯಮ ತಿಳಿದರೆ ಅಚ್ಚರಿಯಾಗುತ್ತೆ!

    October 6, 2026

    35 ವರ್ಷಗಳ ಬಳಿಕ ಮರಳಿ ಕುಟುಂಬ ಸೇರಿದ ಮಹಿಳೆ: ಪತ್ತೆಗೆ ಸುಳಿವು ನೀಡಿದ ಕೈಯಲ್ಲಿದ್ದ ಹಚ್ಚೆ!

    October 6, 2026

    SBI ಗ್ರಾಹಕರಿಗೆ ಹೊಸ ರೂಲ್ಸ್; ATMನಲ್ಲಿ ಹಣ ತೆಗೆಯುವ ಮುನ್ನ ಈ ನಿಯಮ ತಿಳಿಯಿರಿ!

    October 5, 2026

    ಗೋವಾ ಹೋಗುವವರಿಗೆ ಸಿಹಿಸುದ್ದಿ; ಬೆಂಗಳೂರಿನಿಂದ ನೇರ ವಂದೇ ಭಾರತ್, ಮಾರ್ಗದಲ್ಲಿ ಈ 14 ನಿಲ್ದಾಣ!

    October 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ರಾಹುಲ್ ಗಾಂಧಿಗೆ ‘ರಾಹು ಕಾಲ’ ಬಂದಿದೆ, ಅವರ ಪ್ರತಿಭಟನೆಗೆ ಯಾವುದೇ ಅರ್ಥವಿಲ್ಲ: ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ

    October 7, 2026

    ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.…

    ಹಾಸನ: ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಶವ ಪತ್ತೆ — ಕೊಲೆ ಶಂಕೆ, ಪ್ರಕರಣ ದಾಖಲು

    October 7, 2026

    ಬೆಂಗಳೂರು: ಅಮೆಜಾನ್ ಕಚೇರಿ ಹೊರಗೆ ಟ್ರಾನ್ಸ್‌’ಫಾರ್ಮರ್ ಸ್ಫೋಟ; ಪಾದಚಾರಿಗೆ ಗಾಯ

    October 7, 2026

    ತುಮಕೂರು: ಸ್ವಂತ ಉದ್ಯಮ ಸ್ಥಾಪನೆಗೆ ಉದ್ಯಮಶೀಲತಾ ತರಬೇತಿ – ಅರ್ಜಿ ಆಹ್ವಾನ

    October 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.