ತುಮಕೂರು: ಜಿಲ್ಲಾಡಳಿತದ ವತಿಯಿಂದ ಆಚರಿಸಲಾಗುವ ತುಮಕೂರು ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ 17ರಂದು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ದಸರಾ ವೇದಿಕೆಯಲ್ಲಿ ದಸರಾ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಈ ಕವಿಗೋಷ್ಠಿಗಾಗಿ ಜಿಲ್ಲೆಯ ಆಸಕ್ತ ಕವಿಗಳಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮವನ್ನು ಹಿರಿಯ ಹಾಗೂ ಯುವ ವಿಭಾಗಗಳೆರಡರಲ್ಲೂ ನಡೆಸಲಾಗುತ್ತಿದೆ.
ಕವಿಗೋಷ್ಠಿ ವಿಭಾಗಗಳು ಹಾಗೂ ವಯೋಮಿತಿ:
- ಹಿರಿಯರ ವಿಭಾಗ: 35 ವರ್ಷ ಮೇಲ್ಪಟ್ಟ ಕವಿಗಳಿಗೆ.
- ಯುವ ವಿಭಾಗ: 18 ರಿಂದ 35 ವರ್ಷದೊಳಗಿನ ಯುವ ಕವಿಗಳಿಗೆ.
ಅರ್ಜಿ ಸಲ್ಲಿಕೆಯ ವಿವರಗಳು:
- ಆಸಕ್ತ ಜಿಲ್ಲೆಯ ಕವಿಗಳು ತಮ್ಮ ಸ್ವರಚಿತ 2 ಉತ್ತಮ ಕವನಗಳನ್ನು ಸ್ವ-ಅರ್ಜಿಯೊಂದಿಗೆ ಸಲ್ಲಿಸಬೇಕಾಗಿರುತ್ತದೆ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 29
ಅರ್ಜಿ ಸಲ್ಲಿಸಬೇಕಾದ ವಿಳಾಸ:
ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,
ಕನ್ನಡ ಭವನ, ಅಮಾನಿಕೆರೆ ರಸ್ತೆ,
ತುಮಕೂರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0816-2275204
ಸಾಹಿತ್ಯಾಸಕ್ತರು ಈ ಅವಕಾಶವನ್ನು ಬಳಸಿಕೊಳ್ಳಬೇಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಈಶ್ವರ ಕು. ಮಿರ್ಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
