ತುಮಕೂರು: ನೈಸ್ ಸಂಸ್ಥೆಯ ಅಶೋಕ್ ಖೇಣಿ ಅವರು ಖಾಸಗಿ ಟಿ.ವಿ ಸಂದರ್ಶನದಲ್ಲಿ ಸಿದ್ಧಗಂಗಾ ಮಠ ಹಾಗೂ ಡಾ.ಶಿವಕುಮಾರ ಸ್ವಾಮೀಜಿಗಳ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಿಜಯಸೇನೆ ಹಾಗೂ ಮಠದ ಭಕ್ತರು ಅಶೋಕ್ ಖೇಣಿ ವಿರುದ್ಧ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದೆ.
ಸಿದ್ಧಗಂಗಾ ಮಠ ಹಾಗೂ ಪೂಜ್ಯರ ಬಗ್ಗೆ ತಪ್ಪು ಮಾಹಿತಿ ನೀಡಿ ಅವಮಾನ ಮಾಡಿದ್ದು, ಭಕ್ತರಿಗೆ ತೀವ್ರ ನೋವಾಗಿದೆ. ಅಶೋಕ್ ಖೇಣಿ ಅವರು ಕೂಡಲೇ ಬಹಿರಂಗ ಕ್ಷಮೆ ಕೇಳಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದ ಅವರು, ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನುಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕೆಲವು ದಿನಗಳ ಹಿಂದೆ ಅಶೋಕ್ ಖೇಣಿಯವರು ಖಾಸಗಿ ಟಿವಿ ಚಾನಲ್ ಸಂದರ್ಶನದಲ್ಲಿ ಶ್ರೀಮಠಕ್ಕೆ ಸಂಬಂಧಿಸಿದಂತೆ ‘ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದಾಗ ಸಮಾಧಿಯಲ್ಲಿತ್ತು ಖೇಣಿ ಕೊಟ್ಟ ವಸ್ತು’ ಎಂಬ ಶೀರ್ಷಿಕೆಯಡಿ ಮಾತನಾಡಿ, ಕೆಲವೊಂದು ಸತ್ಯಕ್ಕೆ ದೂರವಾದ ಮಾಹಿತಿಗಳನ್ನು ನೀಡಿದ್ದಾರೆ. ಸಂದರ್ಶನ ಸಮಯದಲ್ಲಿ ಸ್ವಾಮೀಜಿಯವರು ನನಗೆ ಚಿನ್ನದ ಕರಡಿಗೆ ಮಾಡಿಸಿಕೊಡಲು ಯಾಕೆ ಕೇಳಿದರು? ಎಂದು ಅಶೋಕ್ ಚೇಣು ಪ್ರಶ್ನಾರ್ಥಕವಾಗಿ ನುಡಿದಿದ್ದಾರೆ. ಈ ಹೇಳಿಕೆ ಶ್ರೀಮಠಕ್ಕೆ ಹಾಗೂ ಸ್ವಾಮೀಜಿಗಳಿಗೆ ಮಾಡಿದ ಅಪಮಾನ ಎಂದು ಹೆಚ್.ಎನ್. ದೀಪಕ್ ಹೇಳಿದರು.
ಖೇಣಿಯವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಭಕ್ತರಾದ ರುದ್ರೇಶ್, ರಾಕೇಶ್, ಹರೀಶ್, ರಾಧಮ್ಮ, ಸುಧಾಕರ್ ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
