nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೀದರ್: ಬೆಳಕುಣಿ ಚೌದ್ರಿ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ದಸರಾ ಮಹೋತ್ಸವ!

    October 22, 2026

    ತುಮಕೂರು ದಸರಾ ವೈಭವಕ್ಕೆ ತೆರೆ: ಅದ್ದೂರಿಯ ಜಂಬೂಸವಾರಿ: ಡಿಸಿಎಂ ಸೇರಿ ಗಣ್ಯರಿಂದ ಪುಷ್ಪಾರ್ಚನೆ

    October 22, 2026

    ತುಮಕೂರು ರೈಲು ಪ್ರಯಾಣಿಕರೇ ಗಮನಿಸಿ! ಅ.23ರಿಂದ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ

    October 22, 2026
    Facebook Twitter Instagram
    ಟ್ರೆಂಡಿಂಗ್
    • ಬೀದರ್: ಬೆಳಕುಣಿ ಚೌದ್ರಿ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ದಸರಾ ಮಹೋತ್ಸವ!
    • ತುಮಕೂರು ದಸರಾ ವೈಭವಕ್ಕೆ ತೆರೆ: ಅದ್ದೂರಿಯ ಜಂಬೂಸವಾರಿ: ಡಿಸಿಎಂ ಸೇರಿ ಗಣ್ಯರಿಂದ ಪುಷ್ಪಾರ್ಚನೆ
    • ತುಮಕೂರು ರೈಲು ಪ್ರಯಾಣಿಕರೇ ಗಮನಿಸಿ! ಅ.23ರಿಂದ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ
    • ತುಳಸಿ ಗಿಡ ಬೆಳೆಸುವಾಗ ಈ ತಪ್ಪು ಮಾಡಬೇಡಿ! ನೀರು ಹಾಕುವುದರಿಂದ ಪೂಜೆಯವರೆಗೆ ತಿಳಿಯಬೇಕಾದ ಸಂಪ್ರದಾಯಗಳು ಇವು 
    • ಚಾಣಕ್ಯನ ನೀತಿ: ಈ 6 ಲಕ್ಷಣಗಳು ನಿಮ್ಮ ಸ್ನೇಹಿತರಲ್ಲಿದ್ದರೆ ಎಚ್ಚರ! ಅಂಥ ಸ್ನೇಹದಿಂದ ದೂರ ಉಳಿಯುವುದೇ ಉತ್ತಮ
    • ಮೈಸೂರು ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ವಜ್ರಮುಷ್ಟಿ ಕಾಳಗ ರದ್ದು! ಕಾರಣವೇನು?
    • ರಾವಣನ ಅಂತ್ಯಕ್ರಿಯೆ ನೆರವೇರಿಸಿದ್ದು ಯಾರು? ರಾವಣನ ಸಾವಿನ ಬಳಿಕ ಲಂಕೆಯಲ್ಲಿ ನಡೆದಿದ್ದೇನು?
    •  ಕರ್ನಾಟಕದ ವಿದ್ಯುತ್ ಗ್ರಾಹಕರಿಗೆ ಮತ್ತೆ ಶಾಕ್‌! ದರ ಹೆಚ್ಚಳ ಸಾಧ್ಯತೆ? ಯಾರಿಗೆ ಬೀಳಲಿದೆ ಹೆಚ್ಚುವರಿ ಹೊರೆ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುಮಕೂರು ರೈಲು ಪ್ರಯಾಣಿಕರೇ ಗಮನಿಸಿ! ಅ.23ರಿಂದ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ
    ತುಮಕೂರು October 22, 2026

    ತುಮಕೂರು ರೈಲು ಪ್ರಯಾಣಿಕರೇ ಗಮನಿಸಿ! ಅ.23ರಿಂದ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ

    By Ganesh TumkuruOctober 22, 2026No Comments2 Mins Read
    tumakuru train

    ತುಮಕೂರು ರೈಲು ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 23ರಿಂದ ಹಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಇನ್ನು ಕೆಲವು ರೈಲುಗಳ ನಿರ್ಗಮನ ಸಮಯವನ್ನು ಮರುನಿಗದಿಪಡಿಸಲಾಗಿದೆ. ಕೆಲವು ರೈಲುಗಳು ಮಾರ್ಗಮಧ್ಯೆ ತಾತ್ಕಾಲಿಕವಾಗಿ ವಿಳಂಬವಾಗಲಿವೆ ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ಕನಮಡಿ ತಿಳಿಸಿದ್ದಾರೆ.

    ತುಮಕೂರು ನಿಲ್ದಾಣದ ಯಾರ್ಡ್‌ನಲ್ಲಿ ನಡೆಯುತ್ತಿರುವ ಪುನರಾಭಿವೃದ್ಧಿ ಕಾಮಗಾರಿಗೆ ಅನುಕೂಲವಾಗುವಂತೆ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಪ್ರಯಾಣಿಕರು ಪ್ರಯಾಣಕ್ಕೆ ಹೊರಡುವ ಮುನ್ನ ರೈಲುಗಳ ವೇಳಾಪಟ್ಟಿಯನ್ನು ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ.

    ಈ ಎರಡು ಮೆಮು ರೈಲುಗಳ ಸಂಚಾರ ರದ್ದು

    2026ರ ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಕೆಳಗಿನ ಎರಡು ಮೆಮು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

    ರೈಲು ಸಂಖ್ಯೆ 66572: ತುಮಕೂರು–ಕೆಎಸ್‌ ಆರ್ ಬೆಂಗಳೂರು ಮೆಮು ರೈಲು.

    ರೈಲು ಸಂಖ್ಯೆ 66571: ಕೆಎಸ್‌ಆರ್ ಬೆಂಗಳೂರು–ತುಮಕೂರು ಮೆಮು ರೈಲು.

    ಈ ದಿನಗಳಲ್ಲಿ ಪ್ರಯಾಣಿಸಲು ಯೋಜಿಸಿರುವವರು ಪರ್ಯಾಯ ರೈಲು ಅಥವಾ ಸಾರಿಗೆ ವ್ಯವಸ್ಥೆಯ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆದುಕೊಳ್ಳುವುದು ಸೂಕ್ತ.

    ಎರಡು ಎಕ್ಸ್‌ ಪ್ರೆಸ್ ರೈಲುಗಳ ನಿರ್ಗಮನ ವಿಳಂಬ

    ನಿಗದಿತ ದಿನಗಳಲ್ಲಿ ಎರಡು ಎಕ್ಸ್‌ಪ್ರೆಸ್ ರೈಲುಗಳ ನಿರ್ಗಮನ ಸಮಯವನ್ನು ಮರುನಿಗದಿಪಡಿಸಲಾಗಿದೆ. ಈ ಬದಲಾವಣೆಗಳು ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಅನ್ವಯಿಸಲಿವೆ.

    ರೈಲು ಸಂಖ್ಯೆ 20689: ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಯಶವಂತಪುರದಿಂದ 75 ನಿಮಿಷ ತಡವಾಗಿ ಹೊರಡಲಿದೆ.

    ರೈಲು ಸಂಖ್ಯೆ 12725: ಕೆಎಸ್‌ಆರ್ ಬೆಂಗಳೂರು–ಧಾರವಾಡ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನಿಂದ 30 ನಿಮಿಷ ತಡವಾಗಿ ಹೊರಡಲಿದೆ.

    ಮಾರ್ಗಮಧ್ಯೆ ನಿಯಂತ್ರಣಗೊಳ್ಳುವ ರೈಲುಗಳು:

    ಕಾಮಗಾರಿಯ ಹಿನ್ನೆಲೆಯಲ್ಲಿ ಕೆಲವು ರೈಲುಗಳನ್ನು ಮಾರ್ಗಮಧ್ಯೆ ತಾತ್ಕಾಲಿಕವಾಗಿ ನಿಯಂತ್ರಿಸಲಾಗುತ್ತದೆ. ಇದರಿಂದ ಪ್ರಯಾಣದ ಅವಧಿಯಲ್ಲಿ ವಿಳಂಬವಾಗುವ ಸಾಧ್ಯತೆಯಿದೆ.

    ರೈಲು ಸಂಖ್ಯೆ 20652: ತಾಳಗುಪ್ಪ–ಕೆಎಸ್‌ಆರ್ ಬೆಂಗಳೂರು ಎಕ್ಸ್‌ ಪ್ರೆಸ್ ರೈಲನ್ನು 40 ನಿಮಿಷ ನಿಯಂತ್ರಿಸಲಾಗುತ್ತದೆ.

    ರೈಲು ಸಂಖ್ಯೆ 66567: ಕೆಎಸ್‌ ಆರ್ ಬೆಂಗಳೂರು–ತುಮಕೂರು ಮೆಮು ರೈಲನ್ನು 30 ನಿಮಿಷ ನಿಯಂತ್ರಿಸಲಾಗುತ್ತದೆ.

    ಈ ಎರಡೂ ರೈಲುಗಳಿಗೆ ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಈ ಬದಲಾವಣೆ ಅನ್ವಯಿಸಲಿದೆ.

    ರೈಲು ಸಂಖ್ಯೆ 1730: ವಾಸ್ಕೋ ಡ ಗಾಮಾ–ಯಶವಂತಪುರ ಎಕ್ಸ್‌ಪ್ರೆಸ್ ರೈಲನ್ನು 15 ನಿಮಿಷ ನಿಯಂತ್ರಿಸಲಾಗುತ್ತದೆ. ಈ ಬದಲಾವಣೆ ಅಕ್ಟೋಬರ್ 22ರಿಂದ 24ರವರೆಗೆ, ಅಕ್ಟೋಬರ್ 27ರಿಂದ 31ರವರೆಗೆ ಹಾಗೂ ನವೆಂಬರ್ 3ರಿಂದ 6ರವರೆಗೆ ಜಾರಿಯಲ್ಲಿರಲಿದೆ.

    ರೈಲು ಸಂಖ್ಯೆ 20676: ಮೈಸೂರು–ಬೆಳಗಾವಿ ಎಕ್ಸ್‌ಪ್ರೆಸ್ ರೈಲನ್ನು 15 ನಿಮಿಷ ನಿಯಂತ್ರಿಸಲಾಗುತ್ತದೆ. ಈ ಬದಲಾವಣೆ ಅಕ್ಟೋಬರ್ 23ರಿಂದ 25ರವರೆಗೆ, ಅಕ್ಟೋಬರ್ 28ರಿಂದ ನವೆಂಬರ್ 1ರವರೆಗೆ ಹಾಗೂ ನವೆಂಬರ್ 4ರಿಂದ 7ರವರೆಗೆ ಅನ್ವಯಿಸಲಿದೆ.

    ರೈಲು ಸಂಖ್ಯೆ 19667: ಉದಯಪುರ ಸಿಟಿ–ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಅಕ್ಟೋಬರ್ 26 ಮತ್ತು ನವೆಂಬರ್ 2ರಂದು ಮಾರ್ಗಮಧ್ಯೆ 30 ನಿಮಿಷ ನಿಯಂತ್ರಿಸಲಾಗುತ್ತದೆ.

    ತುಮಕೂರು ರೈಲು ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಈ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ. ರೈಲು ಪ್ರಯಾಣಿಕರು ಅನಗತ್ಯ ತೊಂದರೆ ತಪ್ಪಿಸಲು ಪ್ರಯಾಣದ ದಿನಾಂಕ ಮತ್ತು ರೈಲಿನ ವೇಳಾಪಟ್ಟಿಯನ್ನು ಅಧಿಕೃತ ರೈಲ್ವೆ ಮೂಲಗಳಲ್ಲಿ ಪರಿಶೀಲಿಸಿಕೊಂಡು ಪ್ರಯಾಣಿಸುವುದು ಉತ್ತಮ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ತುಮಕೂರು ದಸರಾ ವೈಭವಕ್ಕೆ ತೆರೆ: ಅದ್ದೂರಿಯ ಜಂಬೂಸವಾರಿ: ಡಿಸಿಎಂ ಸೇರಿ ಗಣ್ಯರಿಂದ ಪುಷ್ಪಾರ್ಚನೆ

    October 22, 2026

    ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತುಮಕೂರಿನ ಸಾಧನೆ: ನಕ್ಷೆಯ ಆಕಾರದ ಮಾನವಾಕೃತಿಯಲ್ಲಿ ಸಾಮೂಹಿಕ ನೃತ್ಯ ಮತ್ತು ಗಾಯನ

    October 20, 2026

    ತುಮಕೂರಿನ ದೇವರಾಯನದುರ್ಗದಲ್ಲಿ ನಿಜಕ್ಕೂ ಕಾಡುಮನುಷ್ಯರು ಪ್ರತ್ಯಕ್ಷರಾಗಿದ್ದಾರಾ? ಪೊಲೀಸರ ಸ್ಪಷ್ಟನೆ ಇಲ್ಲಿದೆ

    October 20, 2026

    Leave A Reply Cancel Reply

    Our Picks

    ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ₹15,000 ಸಿಗುತ್ತಾ? ಕೇಂದ್ರದ ಉದ್ಯೋಗ ಯೋಜನೆಯ ಅರ್ಹತೆಗಳೇನು?

    October 21, 2026

    ಫೇಸ್‌ ಬುಕ್‌, ಇನ್‌ ಸ್ಟಾಗ್ರಾಂನಲ್ಲಿ ರಾಜಕೀಯ ಪೋಸ್ಟ್‌ ಗಳಿಗೆ ಬ್ರೇಕ್‌? ಮೆಟಾಗೆ ಕೇಂದ್ರದ ಮಹತ್ವದ ಸೂಚನೆ!

    October 20, 2026

    ಇಎಸ್‌ ಐಸಿ ಮಹತ್ವದ ಅಪ್‌ ಡೇಟ್:  ಇಎಸ್‌ ಐಸಿ ವಿಮಾದಾರರಿಗೆ ಸಿಹಿ ಸುದ್ದಿ:‌ ಎಷ್ಟು ಸಿಗಲಿದೆ ಈ ಹಣ?

    October 20, 2026

    ಜಿಯೋ ಗ್ರಾಹಕರಿಗೆ ಶಾಕ್! ಉಚಿತ ಹಾಟ್‌ ಸ್ಟಾರ್ ಸೌಲಭ್ಯ ಬಂದ್‌; OTT ಪ್ರಿಯರಿಗೆ ಇನ್ನು ಯಾವುದು ಬೆಸ್ಟ್‌ ಪ್ಲಾನ್?

    October 19, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಬೀದರ್: ಬೆಳಕುಣಿ ಚೌದ್ರಿ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿದ ದಸರಾ ಮಹೋತ್ಸವ!

    October 22, 2026

    ಔರಾದ್:  ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮದಲ್ಲಿ ದಸರಾ ಹಬ್ಬದ ಸಡಗರ-ಸಂಭ್ರಮ ಮನೆಮಾಡಿತ್ತು. ವರ್ಷಗಳಿಂದ ನಡೆದುಕೊಂಡು ಬಂದಿರುವ…

    ತುಮಕೂರು ದಸರಾ ವೈಭವಕ್ಕೆ ತೆರೆ: ಅದ್ದೂರಿಯ ಜಂಬೂಸವಾರಿ: ಡಿಸಿಎಂ ಸೇರಿ ಗಣ್ಯರಿಂದ ಪುಷ್ಪಾರ್ಚನೆ

    October 22, 2026

    ತುಮಕೂರು ರೈಲು ಪ್ರಯಾಣಿಕರೇ ಗಮನಿಸಿ! ಅ.23ರಿಂದ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ

    October 22, 2026

    ತುಳಸಿ ಗಿಡ ಬೆಳೆಸುವಾಗ ಈ ತಪ್ಪು ಮಾಡಬೇಡಿ! ನೀರು ಹಾಕುವುದರಿಂದ ಪೂಜೆಯವರೆಗೆ ತಿಳಿಯಬೇಕಾದ ಸಂಪ್ರದಾಯಗಳು ಇವು 

    October 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.