ಬೀದರ್: ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಈ ಶುಭದಿನದಂದು ಐದು ವಸಂತಗಳನ್ನು ಯಶಸ್ವಿಯಾಗಿ ಪೂರೈಸಿ, 6ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ‘ನಮ್ಮ ತುಮಕೂರು ಡಿಜಿಟಲ್ ಮಾಧ್ಯಮ’ಕ್ಕೆ ಹೃತ್ಪೂರ್ವಕ 5ನೇ ವರ್ಷದ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.
ಜನಪರ ಧ್ವನಿಯಾಗಿ, ನಿಖರ ಹಾಗೂ ವಸ್ತುನಿಷ್ಠ ಸುದ್ದಿಗಳನ್ನು ನೀಡುತ್ತಾ ಡಿಜಿಟಲ್ ಪತ್ರಿಕೋದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ವಾಹಿನಿಯ ಮುಖ್ಯ ಸಂಪಾದಕರಾದ ಜಿ. ಎಲ್. ನಟರಾಜು ಅವರಿಗೆ ಮತ್ತು ಅವರ ಇಡೀ ಕಾರ್ಯನಿರತ ತಂಡಕ್ಕೆ ವಿಶೇಷ ಅಭಿನಂದನೆಗಳು. ನಿಮ್ಮ ನೇತೃತ್ವದಲ್ಲಿ ಸಂಸ್ಥೆಯು ಸದಾ ಸತ್ಯದ ಪರ ನಿಂತು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಮಾಧ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲಿ.
ನಾಡಿನ ಗಡಿ ಜಿಲ್ಲೆಯಾದ ಬೀದರ್ನಿಂದಲೂ ಉತ್ತಮ ಜನಪರ ವರದಿಗಳನ್ನು ನೀಡುತ್ತಾ ಸಂಸ್ಥೆಯೊಂದಿಗೆ ಕೈಜೋಡಿಸಿರುವ ಹೆಮ್ಮೆ ನಮ್ಮದು. ‘ನಮ್ಮ ತುಮಕೂರು ಡಿಜಿಟಲ್ ಮಾಧ್ಯಮ’ದ ಹೆಜ್ಜೆಗಳು ಸದಾ ಯಶಸ್ಸಿನ ಪಥದಲ್ಲಿ ಮುನ್ನಡೆಯಲಿ ಎಂದು ಹಾರೈಸುತ್ತೇವೆ.
ಶುಭ ಕೋರುವವರು:
ಅರವಿಂದ ಮಲ್ಲಿಗೆ, ಪತ್ರಕರ್ತರು, ಬೀದರ್ ಜಿಲ್ಲೆ
(ನಮ್ಮ ತುಮಕೂರು ಡಿಜಿಟಲ್ ಮಾಧ್ಯಮ ವಾಹಿನಿ)
