nammatumakuru

    Subscribe to Updates

    Get the latest creative news from FooBar about art, design and business.

    What's Hot

    ಇಂದಿಗೂ ಜೀವಂತವಾಗಿದ್ದಾನೆಯೇ ಅಶ್ವತ್ಥಾಮ? ಸಾವಿರಾರು ವರ್ಷಗಳ ಶಾಪ, ಇಂದಿಗೂ ಕೇಳಿಬರುವ ನಿಗೂಢ ಕಥೆಗಳು ಇಲ್ಲಿವೆ!

    November 1, 2026

    ದೇಹದ ಮೇಲೆ ಕಾಣಿಸಿಕೊಳ್ಳುವ ಕೊಬ್ಬಿನ ಗಡ್ಡೆಗಳು ಏಕೆ ಬರುತ್ತವೆ? ಮನೆಮದ್ದುಗಳಿಂದ ಕರಗುತ್ತವೆಯೇ?

    November 1, 2026

    ರಾಮನ ನೆರಳಾಗಿ ಬದುಕಿದ ಲಕ್ಷ್ಮಣನಿಗೆ ಕೊನೆಗೆ ಸಿಕ್ಕ ಶಿಕ್ಷೆಯೇನು? ರಾಮಾಯಣದ ಈ ಕಥೆ ನಿಮಗೆ ಗೊತ್ತೇ?

    November 1, 2026
    Facebook Twitter Instagram
    ಟ್ರೆಂಡಿಂಗ್
    • ಇಂದಿಗೂ ಜೀವಂತವಾಗಿದ್ದಾನೆಯೇ ಅಶ್ವತ್ಥಾಮ? ಸಾವಿರಾರು ವರ್ಷಗಳ ಶಾಪ, ಇಂದಿಗೂ ಕೇಳಿಬರುವ ನಿಗೂಢ ಕಥೆಗಳು ಇಲ್ಲಿವೆ!
    • ದೇಹದ ಮೇಲೆ ಕಾಣಿಸಿಕೊಳ್ಳುವ ಕೊಬ್ಬಿನ ಗಡ್ಡೆಗಳು ಏಕೆ ಬರುತ್ತವೆ? ಮನೆಮದ್ದುಗಳಿಂದ ಕರಗುತ್ತವೆಯೇ?
    • ರಾಮನ ನೆರಳಾಗಿ ಬದುಕಿದ ಲಕ್ಷ್ಮಣನಿಗೆ ಕೊನೆಗೆ ಸಿಕ್ಕ ಶಿಕ್ಷೆಯೇನು? ರಾಮಾಯಣದ ಈ ಕಥೆ ನಿಮಗೆ ಗೊತ್ತೇ?
    • ನವೆಂಬರ್ 1: ನಮ್ಮತುಮಕೂರು ಡಿಜಿಟಲ್ ಮಾಧ್ಯಮಕ್ಕೆ 5 ವರ್ಷಗಳ ಸಂಭ್ರಮ | ಸಂಪಾದಕೀಯ
    • ನಮ್ಮ ತುಮಕೂರು ಚಾನೆಲ್‌ ನ 5ನೇ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು | ಆರ್.ಶೋಭಾ
    • ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?
    • ರಾಜಗೋಪುರ ನಿರ್ಮಾಣಕ್ಕೆ ಎಂ.ಎನ್.ಜೆ. ಮಂಜುನಾಥ್‌ ರಿಂದ 5 ಲಕ್ಷ ರೂ. ದೇಣಿಗೆ |  2 ಕೋಟಿ ರೂ. ವೆಚ್ಚದ ಕಾಮಗಾರಿ ಶೇ.75ರಷ್ಟು ಪೂರ್ಣ
    • ಕುರಂಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ನೂತನ ಕಲ್ಯಾಣ ಮಂಟಪ ನಿರ್ಮಾಣಕ್ಕೆ ₹1 ಲಕ್ಷ ದೇಣಿಗೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನವೆಂಬರ್ 1: ನಮ್ಮತುಮಕೂರು ಡಿಜಿಟಲ್ ಮಾಧ್ಯಮಕ್ಕೆ 5 ವರ್ಷಗಳ ಸಂಭ್ರಮ | ಸಂಪಾದಕೀಯ
    Uncategorized November 1, 2026

    ನವೆಂಬರ್ 1: ನಮ್ಮತುಮಕೂರು ಡಿಜಿಟಲ್ ಮಾಧ್ಯಮಕ್ಕೆ 5 ವರ್ಷಗಳ ಸಂಭ್ರಮ | ಸಂಪಾದಕೀಯ

    By Ganesh TumkuruNovember 1, 2026No Comments2 Mins Read
    nammatumakuru

    ನವೆಂಬರ್ 1, ಒಂದೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮವಾದರೆ, ಮತ್ತೊಂದೆಡೆ ನಮ್ಮತುಮಕೂರು ಡಿಜಿಟಲ್ ಮಾಧ್ಯಮದ ಆರಂಭ ವರ್ಷವೂ ಹೌದು. ಇಂದಿಗೆ ನಮ್ಮತುಮಕೂರು ಮಾಧ್ಯಮ ಆರಂಭಗೊಂಡು ಯಶಸ್ವಿಯಾಗಿ 5 ವರ್ಷಗಳನ್ನು ಪೂರೈಸಿ 6ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಐದು ವರ್ಷಗಳಲ್ಲಿ ಮಾಧ್ಯಮವು ತುಮಕೂರು ಮಾತ್ರವಲ್ಲದೇ ರಾಜ್ಯದ ಮೂಲೆಮೂಲೆಗಳಲ್ಲಿರುವ ಕನ್ನಡಿಗರು ಹಾಗೂ ದೇಶ ವಿದೇಶಗಳಲ್ಲಿರುವ ಕನ್ನಡಿಗರನ್ನು ಯಶಸ್ವಿಯಾಗಿ ತಲುಪಿದೆ. ಇದು ನಮಗೆ ಸಾರ್ಥಕತೆಯ ಭಾವನೆಯನ್ನು ಮೂಡಿಸಿದೆ.

    ಕಳೆದ 5 ವರ್ಷಗಳಲ್ಲಿ ಯಾವುದೇ ಆರ್ಥಿಕ ಲಾಭವಿಲ್ಲದೇ, ಕೇವಲ ಸಾಮಾಜಿಕ ಲಾಭಗಳಿಗೆ ಒತ್ತುಕೊಟ್ಟ ಮಾಧ್ಯಮ ಸಮಾಜಕ್ಕೆ ಒಂದು ಕೊಡುಗೆಯಾಗಿ ಹೊರಹೊಮ್ಮಿರುವುದು ನಮ್ಮೆಲ್ಲರಿಗೂ ಸಂತಸದ ವಿಷಯವಾಗಿದೆ. ಪ್ರತಿ ವರ್ಷವೂ ಕೋಟ್ಯಾಂತರ ಜನರಿಗೆ ಸುದ್ದಿಗಳನ್ನು ಮಾಹಿತಿಗಳನ್ನು, ಉದ್ಯೋಗ ವಾರ್ತೆಗಳನ್ನು ತಿಳಿಸುತ್ತಾ, ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗುತ್ತಾ, ಮಾಧ್ಯಮ 5 ವರ್ಷಗಳ ಸುದೀರ್ಘ ನಡಿಗೆಯನ್ನು ಯಶಸ್ವಿಗೊಳಿಸಿರುವುದು ಮಾತ್ರವಲ್ಲ, 6ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಮೂಲಕ ಇನ್ನಷ್ಟು ಸಮಾಜಮುಖಿ ಕಾರ್ಯಗಳಿಗೆ ದಾರಿದೀಪವಾಗಿ ಹೊರಹೊಮ್ಮಲಿದೆ.

    ತುಮಕೂರಿನ ಸಾರ್ವಜನಿಕರ ಸಮಸ್ಯೆಗಳಿಗೆ ನಮ್ಮತುಮಕೂರು ಮಾಧ್ಯಮ ಧ್ವನಿಯಾಗಿದೆ. ಹಲವಾರು ಸಾರ್ವಜನಿಕ ಸಮಸ್ಯೆಗಳನ್ನು ಆಡಳಿತ ಯಂತ್ರದ ಗಮನಕ್ಕೆ ತಂದು ಅವುಗಳನ್ನು ಪರಿಹರಿಸಿರುವ ಹೆಗ್ಗಳಿಗೆ ನಮ್ಮತುಮಕೂರು ಮಾಧ್ಯಮದ್ದಾಗಿದೆ. ಮಾಧ್ಯಮ ಎನ್ನುವುದು ಉದ್ಯಮವಾಗಿರುವ ಕಾಲಘಟ್ಟದಲ್ಲಿ, ಮಾಧ್ಯಮವನ್ನು ಆರ್ಥಿಕ ಲಾಭದ ಸರಕಾಗಿ ಬಳಸದೇ, ಸಮಾಜ ಮುಖಿ ಕಾರ್ಯಗಳಿಗೆ ಬಳಸುವ ಕನಸು ಕಂಡವರು ನಮ್ಮತುಮಕೂರು ಮಾಧ್ಯಮದ ಪ್ರಧಾನ ಸಂಪಾದಕರಾದ ನಟರಾಜ್ ಜಿ.ಎಲ್. ಅವರು. ಇಂದು ಅವರ ಕನಸಿನ ಮಾಧ್ಯಮ ತುಮಕೂರಿನಲ್ಲಿ ಮನೆಮಾತಾಗಿದೆ. ತುಮಕೂರಿನ ಜನರ ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿದೆ.

    ಇಂದು ಮಾರುಕಟ್ಟೆಗಳಲ್ಲಿ ಕಣ್ಮರೆಯಾಗಿರುವ ದಿನಪತ್ರಿಕೆಗಳ ಸ್ಥಾನವನ್ನು ಡಿಜಿಟಲ್ ಮಾಧ್ಯಮಗಳು ತುಂಬುತ್ತಿವೆ. ಆದರೂ ಇಂದಿನ ಸರ್ಕಾರಗಳು ಡಿಜಿಟಲ್ ಸುದ್ದಿ ಮಾಧ್ಯಮವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೇ, ಸರ್ಕ್ಯುಲೇಶನ್ ಇಲ್ಲದ ಪತ್ರಿಕೆಗಳಿಗೆ ಜಾಹೀರಾತುಗಳನ್ನು ಸುರಿದು ಸಾರ್ವಜನಿಕರ ಕೋಟ್ಯಾಂತರ ಹಣವನ್ನು ವ್ಯರ್ಥ ಮಾಡುತ್ತಿದೆ. ದಿನಪತ್ರಿಕೆಗಳಿಗೆ ನೀಡುವ ಒತ್ತು ಆನ್ ಲೈನ್ ಮಾಧ್ಯಮಗಳಿಗೆ ಸರ್ಕಾರ ನೀಡದೇ ಇರುವುದು, “ಅಪ್ಪ ನೆಟ್ಟ ಆಳದ ಮರಕ್ಕೆ ನೇಣು ಹಾಕಿಕೊಂಡಂತೆ” ಎಂಬ ಗಾದೆ ಮಾತಿನಂತಾಗಿದೆ. ಸರ್ಕಾರ ಡಿಜಿಟಲ್ ಮಾಧ್ಯಮಗಳಿಗೆ ಒತ್ತು ನೀಡಬೇಕು ಎಂದು ಕೇವಲ ಬಾಯಿ ಮಾತಿನಿಂದ ಹೇಳದೇ ಕಾರ್ಯ ಪ್ರವೃತವಾಗಬೇಕಿದೆ.

    ಡಿಜಿಟಲ್ ಮಾಧ್ಯಮಗಳು ಇಂದು ಅತೀ ವೇಗವಾಗಿ ಜನರನ್ನು ತಲುಪುತ್ತಿವೆ. ತುಮಕೂರಿನಲ್ಲಿ ನಮ್ಮತುಮಕೂರು, ಆನ್ ಲೈನ್ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ, ತನ್ನದೇ ಸ್ವಂತ ಶಕ್ತಿಯ ಮೂಲಕ ಜನರಿಗೆ ಹತ್ತಿರವಾಗಿದೆ. ಮುಂದಿನ ದಿನಗಳಲ್ಲಿ ಮಾಧ್ಯಮವು ಹೊಸ ಬದಲಾವಣೆಗಳೊಂದಿಗೆ ಜನರಿಗೆ ಮತ್ತಷ್ಟು ಹತ್ತಿರವಾಗುವ ಯೋಜನೆ, ಯೋಚನೆಗಳಿಂದ ಕಾರ್ಯ ನಿರ್ವಹಿಸಲಿದೆ. ನಮ್ಮೆಲ್ಲ ಓದುಗರ ಜೊತೆಗೆ ಈ 5ನೇ ವರ್ಷದ ಸಂಭ್ರಮದ ಸಿಹಿ ಸುದ್ದಿಯನ್ನು ಹಂಚಿಕೊಳ್ಳುತ್ತಾ, ಜೊತೆಯಾಗಿ ಸಾಗೋಣ, ಉತ್ತಮ ಸಮಾಜವನ್ನು ನಿರ್ಮಾಣ ಮಾಡೋಣ…

    ನಮಸ್ಕಾರ

    — ಸಂಪಾದಕೀಯ ಮಂಡಳಿ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ದೇಹದ ಮೇಲೆ ಕಾಣಿಸಿಕೊಳ್ಳುವ ಕೊಬ್ಬಿನ ಗಡ್ಡೆಗಳು ಏಕೆ ಬರುತ್ತವೆ? ಮನೆಮದ್ದುಗಳಿಂದ ಕರಗುತ್ತವೆಯೇ?

    November 1, 2026

    ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಧರಣಿ ಸತ್ಯಾಗ್ರಹ: ಕಂದಾಯ ನಿರೀಕ್ಷಕರ ಅಮಾನತಿಗೆ ಆಗ್ರಹಿಸಿ ತಹಶೀಲ್ದಾರ್‌ ಗೆ ಸಾರ್ವಜನಿಕರ ಮನವಿ

    October 31, 2026

    ಗೃಹಿಣಿಯರೇ, ವಿದ್ಯಾರ್ಥಿಗಳೇ ಎಚ್ಚರ! ವರ್ಕ್ ಫ್ರಮ್ ಹೋಮ್ ಹೆಸರಿನಲ್ಲಿ ಆನ್ ಲೈನ್ ವಂಚಕರ ಜಾಲ!

    October 29, 2026

    Leave A Reply Cancel Reply

    Our Picks

    ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?

    October 31, 2026

    ವಂಚನೆಗೆ ಹಣ ಕಳೆದುಕೊಂಡವರಿಗೆ ಬ್ಯಾಂಕ್‌ ಗಳೇ ಪರಿಹಾರ ನೀಡಬೇಕಾ? ಸುಪ್ರೀಂ ಕೋರ್ಟ್ ಮಹತ್ವದ ಪ್ರಸ್ತಾಪ ಇಲ್ಲಿದೆ

    October 31, 2026

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026

    ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಹೊಡೆತ: ₹30 ಲಕ್ಷ ಕೋಟಿ ಸಂಪತ್ತು ಕರಗಲು 10 ಕಾರಣಗಳೇನು?

    October 28, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ಇಂದಿಗೂ ಜೀವಂತವಾಗಿದ್ದಾನೆಯೇ ಅಶ್ವತ್ಥಾಮ? ಸಾವಿರಾರು ವರ್ಷಗಳ ಶಾಪ, ಇಂದಿಗೂ ಕೇಳಿಬರುವ ನಿಗೂಢ ಕಥೆಗಳು ಇಲ್ಲಿವೆ!

    November 1, 2026

    ಮಹಾಭಾರತದ ಕಥೆಗಳಲ್ಲಿ ಇಂದಿಗೂ ಜನರಲ್ಲಿ ಕುತೂಹಲ ಮೂಡಿಸುವ ಪಾತ್ರಗಳಲ್ಲಿ ಅಶ್ವತ್ಥಾಮ ಪ್ರಮುಖರು. ಮಹಾಭಾರತ ಯುದ್ಧದ ಬಳಿಕ ಶ್ರೀಕೃಷ್ಣನಿಂದ ಶಾಪಕ್ಕೆ ಒಳಗಾಗಿ…

    ದೇಹದ ಮೇಲೆ ಕಾಣಿಸಿಕೊಳ್ಳುವ ಕೊಬ್ಬಿನ ಗಡ್ಡೆಗಳು ಏಕೆ ಬರುತ್ತವೆ? ಮನೆಮದ್ದುಗಳಿಂದ ಕರಗುತ್ತವೆಯೇ?

    November 1, 2026

    ರಾಮನ ನೆರಳಾಗಿ ಬದುಕಿದ ಲಕ್ಷ್ಮಣನಿಗೆ ಕೊನೆಗೆ ಸಿಕ್ಕ ಶಿಕ್ಷೆಯೇನು? ರಾಮಾಯಣದ ಈ ಕಥೆ ನಿಮಗೆ ಗೊತ್ತೇ?

    November 1, 2026

    ನವೆಂಬರ್ 1: ನಮ್ಮತುಮಕೂರು ಡಿಜಿಟಲ್ ಮಾಧ್ಯಮಕ್ಕೆ 5 ವರ್ಷಗಳ ಸಂಭ್ರಮ | ಸಂಪಾದಕೀಯ

    November 1, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.