
ಸಂಪಾದಕರು, ನಮ್ಮ ತುಮಕೂರು ಡಿಜಿಟಲ್ ಸುದ್ದಿ ಮಾಧ್ಯಮ
ತುಮಕೂರಿನ ಸಮಸ್ತ ಜನತೆಯ ಆಶಾಕಿರಣವಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗಿ ಮೂಡಿಬರುತ್ತಿರುವ ‘ನಮ್ಮತುಮಕೂರು’ ಡಿಜಿಟಲ್ ಸುದ್ದಿ ಮಾಧ್ಯಮವು ಯಶಸ್ವಿಯಾಗಿ ಐದು ವರ್ಷಗಳನ್ನು ಪೂರೈಸಿ, ಹೆಮ್ಮೆಯಿಂದ ಆರನೇ ವರ್ಷಕ್ಕೆ ಕಾಲಿಟ್ಟಿದೆ. ಈ ಶುಭ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಹರಿದುಬಂದಿರುವ ಶುಭಾಶಯಗಳ ಮಹಾಪೂರವೇ, ಈ ಮಾಧ್ಯಮವು ಜನಮಾನಸದಲ್ಲಿ ಗಳಿಸಿರುವ ವಿಶ್ವಾಸ ಹಾಗೂ ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.
ಕಳೆದ ಐದು ವರ್ಷಗಳ ಹಾದಿ ಸುಲಭದ್ದಾಗಿರಲಿಲ್ಲ. ಹತ್ತು ಹಲವು ಸವಾಲುಗಳು, ಆರ್ಥಿಕ ಹಾಗೂ ಸಾಂಸ್ಥಿಕ ಅಡಚಣೆಗಳನ್ನು ಮೆಟ್ಟಿ ನಿಂತು ‘ನಮ್ಮತುಮಕೂರು’ ತಂಡವು ಸತ್ಯದ ಪರವಾದ ನಿಲುವನ್ನು ಎಂದಿಗೂ ಬಿಟ್ಟುಕೊಡಲಿಲ್ಲ. ಕೇವಲ ತುಮಕೂರು ಜಿಲ್ಲೆಗೆ ಮಾತ್ರವಲ್ಲದೆ, ರಾಜ್ಯದ ಇತರೆಡೆಗಳ ಜನರ ಮೂಲಭೂತ ಸಮಸ್ಯೆಗಳಿಗೂ ಧ್ವನಿಯಾಗಿ, ಆಡಳಿತ ವ್ಯವಸ್ಥೆಯ ಹಾಗೂ ಅಧಿಕಾರಿ ವರ್ಗದ ಕಣ್ತೆರೆಸುವಲ್ಲಿ ಈ ಮಾಧ್ಯಮ ಯಶಸ್ವಿಯಾಗಿದೆ. ಯಾವುದೇ ಲಾಭಕ್ಕೋ ಅಥವಾ ಬಂಡವಾಳಶಾಹಿ ಉದ್ಯಮದ ಹಿತಾಸಕ್ತಿಗೋ ಜೋತುಬೀಳದೆ, ಶುದ್ಧ ಜನಪರ ಪತ್ರಿಕೋದ್ಯಮದ ಮೌಲ್ಯಗಳನ್ನು ಎತ್ತಿಹಿಡಿದು ಬೆಳೆದಿರುವುದು ಇದರ ಹೆಗ್ಗಳಿಕೆ.
ಯಾವುದೇ ಮಾಧ್ಯಮ ಸಂಸ್ಥೆಯ ನಿಜವಾದ ಬಲ ಇರುವುದು ಅಲ್ಲಿನ ಓದುಗರು ಮತ್ತು ಜನರ ವಿಶ್ವಾಸದಲ್ಲೇ ಹೊರತು ಕೇವಲ ತಾಂತ್ರಿಕ ಬೆಳವಣಿಗೆಯಲ್ಲ. ಕಳೆದ ಐದು ವರ್ಷಗಳಿಂದ ಪ್ರತಿಯೊಂದು ವರದಿಯನ್ನೂ ಬೆಂಬಲಿಸಿ, ತಿದ್ದಿ-ತೀಡಿ, ಈ ಮಟ್ಟಕ್ಕೆ ಬೆಳೆಸಿದ ಜಿಲ್ಲೆಯ ಸಮಸ್ತ ಜನತೆಗೆ, ಹಿರಿಯರಿಗೆ ಹಾಗೂ ಹಿತೈಷಿಗಳಿಗೆ ಸಂಸ್ಥೆಯು ಸದಾ ಋಣಿಯಾಗಿದೆ. ತೆರೆಯ ಹಿಂದೆ ನಿಂತು ಹಗಲಿರುಳು ಶ್ರಮಿಸುವ ತಾಂತ್ರಿಕ ಸಿಬ್ಬಂದಿ, ಡೆಸ್ಕ್ ನಿರ್ವಾಹಕರು, ಕ್ಷೇತ್ರಮಟ್ಟದ ವರದಿಗಾರರು ಹಾಗೂ ‘ಮಹಾನಾಯಕ’ ಡಿಜಿಟಲ್ ಮಾಧ್ಯಮದ ಸಂಪಾದಕೀಯ ಮಂಡಳಿಯ ಸಹಕಾರ ಈ ಯಶಸ್ಸಿನ ಬೆನ್ನೆಲುಬಾಗಿದೆ. ಜೊತೆಗೆ, ಸದಾ ಸಹೋದರ ಭಾವನೆಯಿಂದ ಬೆಂಬಲಿಸಿದ ಎಲ್ಲಾ ಮುದ್ರಣ, ದೃಶ್ಯ ಮತ್ತು ಡಿಜಿಟಲ್ ಮಾಧ್ಯಮದ ಮಿತ್ರರ ಕೊಡುಗೆಯೂ ಸ್ಮರಣೀಯ.
ಇಂದು ಡಿಜಿಟಲ್ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ‘ನಮ್ಮತುಮಕೂರು’, ಆರನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ತಂತ್ರಜ್ಞಾನದ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಮತ್ತಷ್ಟು ವಿಸ್ತೃತಗೊಳ್ಳುವ ಗುರಿ ಹೊಂದಿದೆ. ಗ್ರಾಮೀಣ ಭಾಗದ ಮೂಲಸೌಕರ್ಯ ಕೊರತೆಗಳು, ಶೈಕ್ಷಣಿಕ ಹಾಗೂ ಸಾಮಾಜಿಕ ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತಾ, ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಜನಪರ ಪತ್ರಿಕೋದ್ಯಮದ ಬದ್ಧತೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಸಂಸ್ಥೆ ಸಿದ್ಧವಾಗಿದೆ.
ಸತ್ಯದ ಹಾದಿಯಲ್ಲಿ, ಜನರ ನಂಬಿಕೆಯೇ ಶ್ರೀರಕ್ಷೆಯಾಗಿ ಮುನ್ನಡೆಯುತ್ತಿರುವ ‘ನಮ್ಮತುಮಕೂರು’ ಮಾಧ್ಯಮವು ಮುಂದಿನ ದಿನಗಳಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ, ಸಮಾಜಕ್ಕೆ ದಾರಿದೀಪವಾಗಲಿ ಎಂದು ಹಾರೈಸೋಣ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
