nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮೂರು ದಶಕಗಳ ರಂಗ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ! | ಸ್ತ್ರೀ ವೇಷದ ಅಭಿನಯದಲ್ಲಿ ವಿಶಿಷ್ಟ ಛಾಪು ಮೂಡಿಸಿದ ದವಡಬೆಟ್ಟದ ಈರಣ್ಣ ಬಿ.ಡಿ.ಗೆ ಒಲಿದ ಪ್ರಶಸ್ತಿ

    November 3, 2026

    12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ.ಶಿವತಾರಕ್ ಆಯ್ಕೆ | ಶಾಸಕ ಸಿ.ಬಿ. ಸುರೇಶ್‌ ಬಾಬು ನೇತೃತ್ವದಲ್ಲಿ ಸಮ್ಮೇಳನಕ್ಕೆ ಸಿದ್ಧತೆ

    November 3, 2026

    ಔರಾದ್‌ | ಕುಡಿಯುವ ನೀರು ಪೂರೈಕೆಯಲ್ಲಿ ಲೋಪವಾದರೆ ಕ್ರಮ: ಶಾಸಕ ಪ್ರಭು ಚವ್ಹಾಣ

    November 3, 2026
    Facebook Twitter Instagram
    ಟ್ರೆಂಡಿಂಗ್
    • ಮೂರು ದಶಕಗಳ ರಂಗ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ! | ಸ್ತ್ರೀ ವೇಷದ ಅಭಿನಯದಲ್ಲಿ ವಿಶಿಷ್ಟ ಛಾಪು ಮೂಡಿಸಿದ ದವಡಬೆಟ್ಟದ ಈರಣ್ಣ ಬಿ.ಡಿ.ಗೆ ಒಲಿದ ಪ್ರಶಸ್ತಿ
    • 12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ.ಶಿವತಾರಕ್ ಆಯ್ಕೆ | ಶಾಸಕ ಸಿ.ಬಿ. ಸುರೇಶ್‌ ಬಾಬು ನೇತೃತ್ವದಲ್ಲಿ ಸಮ್ಮೇಳನಕ್ಕೆ ಸಿದ್ಧತೆ
    • ಔರಾದ್‌ | ಕುಡಿಯುವ ನೀರು ಪೂರೈಕೆಯಲ್ಲಿ ಲೋಪವಾದರೆ ಕ್ರಮ: ಶಾಸಕ ಪ್ರಭು ಚವ್ಹಾಣ
    • ಔರಾದ್: ಕುಡಿಯುವ ನೀರಿಗಾಗಿ 2.5 ಕೋಟಿ ಅನುದಾನಕ್ಕೆ ಶಾಸಕ ಪ್ರಭು ಚವ್ಹಾಣ ಆಗ್ರಹ
    • ಜೈನ ಸಮಾಜದ ತ್ಯಾಗ, ಸೇವೆ ಶ್ಲಾಘನೀಯ: ಸಿದ್ಧಲಿಂಗ ಸ್ವಾಮೀಜಿ
    • ಹಾಲಿನ ದರ ಹೆಚ್ಚಳದಿಂದ ರೈತರಿಗೆ ಹೆಚ್ಚಿನ:  ತುಮಕೂರು ಹಾಲು ಒಕ್ಕೂಟದ ನಿರ್ದೇಶಕಿ
    • ಸಿದ್ದರಾಮಯ್ಯ ಮೇಲೆ ವಿವಾದಾತ್ಮಕ ಸ್ಟಿಂಗ್ ಆಪರೇಷನ್ ವಿಡಿಯೋ: ಹೆಚ್ ಡಿಕೆ ಕೈವಾಡ: ಸಚಿವ ಕೃಷ್ಣ ಬೈರೇಗೌಡ
    • ತಿಪಟೂರು: ಅಣ್ಣಪ್ಪ ಸ್ವಾಮಿ — ಮಸಣಿಕಮ್ಮ ದೇವಿ ದೇವಸ್ಥಾನದಲ್ಲಿ ಪವಾಡ !
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮೂರು ದಶಕಗಳ ರಂಗ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ! | ಸ್ತ್ರೀ ವೇಷದ ಅಭಿನಯದಲ್ಲಿ ವಿಶಿಷ್ಟ ಛಾಪು ಮೂಡಿಸಿದ ದವಡಬೆಟ್ಟದ ಈರಣ್ಣ ಬಿ.ಡಿ.ಗೆ ಒಲಿದ ಪ್ರಶಸ್ತಿ
    Uncategorized November 3, 2026

    ಮೂರು ದಶಕಗಳ ರಂಗ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ! | ಸ್ತ್ರೀ ವೇಷದ ಅಭಿನಯದಲ್ಲಿ ವಿಶಿಷ್ಟ ಛಾಪು ಮೂಡಿಸಿದ ದವಡಬೆಟ್ಟದ ಈರಣ್ಣ ಬಿ.ಡಿ.ಗೆ ಒಲಿದ ಪ್ರಶಸ್ತಿ

    By Ganesh TumkuruNovember 3, 2026No Comments2 Mins Read
    koratagere

    ಪಾವಗಡ : ಮೂರು ದಶಕಗಳ ಸುದೀರ್ಘ ರಂಗಸೇವೆಗೆ ಮನ್ನಣೆ ದೊರೆತಿದ್ದು, ತಾಲೂಕಿನ ದವಡಬೆಟ್ಟ ಗ್ರಾಮದ ಹಿರಿಯ ರಂಗಭೂಮಿ ಕಲಾವಿದ ಈರಣ್ಣ ಬಿ.ಡಿ. ಅವರಿಗೆ 2026ನೇ ಸಾಲಿನ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

    ನವೆಂಬರ್ 1ರಂದು ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶಾಸಕ ಹೆಚ್.ವಿ. ವೆಂಕಟೇಶ್ ಅವರು ಈರಣ್ಣ ಬಿ.ಡಿ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

    ದವಡಬೆಟ್ಟ ಗ್ರಾಮದ ದೊಡ್ಡಕ್ಕ ಮತ್ತು ಬೋರಪ್ಪ ದಂಪತಿಯ ಪುತ್ರರಾದ ಈರಣ್ಣ ಬಿ.ಡಿ. ಅವರು ತಮ್ಮ 15ನೇ ವಯಸ್ಸಿನಲ್ಲಿಯೇ ರಂಗ ಭೂಮಿಯತ್ತ ಆಕರ್ಷಿತರಾಗಿ, ಕಳೆದ 30 ವರ್ಷಗಳಿಂದ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವುದೇ ಔಪಚಾರಿಕ ತರಬೇತಿ ಪಡೆಯದೆ ಸ್ವಯಂ ಆಸಕ್ತಿ, ನಿರಂತರ ಅಭ್ಯಾಸ ಮತ್ತು ಪರಿಶ್ರಮದಿಂದ ಅಭಿನಯ ಕಲೆಯನ್ನು ಕರಗತ ಮಾಡಿಕೊಂಡಿರುವುದು ಅವರ ವಿಶೇಷತೆ.

    ವಿಶೇಷವಾಗಿ ಸ್ತ್ರೀ ವೇಷದ ಪಾತ್ರಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುವ ಮೂಲಕ ರಂಗಭೂಮಿ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಗ್ರಾಮೀಣ ಸೊಗಡಿನ ಅಭಿನಯ, ಮನಮೋಹಕ ನರ್ತನ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಸಾವಿರಾರು ಕಲಾ ವೇದಿಕೆಗಳಲ್ಲಿ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುವ ಪೌರಾಣಿಕ ನಾಟಕಗಳಲ್ಲಿ ಕುರುಕ್ಷೇತ್ರ ಸೇರಿದಂತೆ ಹಲವು ಪ್ರಸಂಗಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇತ್ತೀಚೆಗೆ ಮೈಸೂರು ದಸರಾ, ತುಮಕೂರು ದಸರಾ ಹಾಗೂ ಪಾವಗಡ ದಸರಾ ಉತ್ಸವಗಳಲ್ಲಿಯೂ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.

    ಹೀಗೆ ಮೂರು ದಶಕಗಳ ಕಾಲ ರಂಗಭೂಮಿಯನ್ನೇ ಬದುಕಿನ ಭಾಗವಾಗಿಸಿಕೊಂಡು, ಸಾಂಪ್ರದಾಯಿಕ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಶ್ರಮಿಸುತ್ತಿರುವ ಈರಣ್ಣ ಬಿ.ಡಿ. ಅವರ ಕಲಾಸೇವೆ, ಪ್ರತಿಭೆ ಹಾಗೂ ರಂಗಭೂಮಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ತಾಲೂಕು ಆಡಳಿತವು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಕಲಾವಲಯದಲ್ಲಿ ಸಂತಸ ಮೂಡಿಸಿದೆ.

    ಕಲೆಯನ್ನೇ ಉಸಿರಾಗಿಸಿಕೊಂಡ ಕಲಾವಿದನ ಸುದೀರ್ಘ ಸಾಧನೆಗೆ ಸಂದ ಗೌರವವಾಗಿ ಈ ಪ್ರಶಸ್ತಿ ಗುರುತಿಸಿಕೊಂಡಿದೆ.

    ಸಾಂಪ್ರದಾಯಿಕ ಕಲೆ ಉಳಿಸುವುದು ಎಲ್ಲರ ಜವಾಬ್ದಾರಿ

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಈರಣ್ಣ ಬಿ.ಡಿ. ಅವರು, ಇಂದಿನ ದಿನಗಳಲ್ಲಿ ಅನೇಕ ಸಾಂಪ್ರದಾಯಿಕ ಕಲೆಗಳು ನಿಧಾನವಾಗಿ ನಶಿಸುತ್ತಿವೆ. ಇಂತಹ ಅಮೂಲ್ಯ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕಲಾವಿದರು ಮಾತ್ರವಲ್ಲದೆ ಇಡೀ ಸಮಾಜದ ಮೇಲಿದೆ. ಮುಂದಿನ ಪೀಳಿಗೆಗೂ ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಕಲಾ ವೈಭವವನ್ನು ಪರಿಚಯಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಅಭಿಪ್ರಾಯಪಟ್ಟರು. ತಮ್ಮನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ಆಯ್ಕೆ ಸಮಿತಿಗೆ ಕೃತಜ್ಞತೆ ಸಲ್ಲಿಸಿದರು.

    ಈರಣ್ಣ ಬಿ.ಡಿ. ಅವರಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದಕ್ಕೆ ತಾಲೂಕಿನ ಹಿರಿಯ ಕಲಾವಿದರು, ಕುಟುಂಬಸ್ಥರು, ಸ್ನೇಹಿತರು ಹಾಗೂ ಕಲಾಭಿಮಾನಿಗಳು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ದೇಹದ ಮೇಲೆ ಕಾಣಿಸಿಕೊಳ್ಳುವ ಕೊಬ್ಬಿನ ಗಡ್ಡೆಗಳು ಏಕೆ ಬರುತ್ತವೆ? ಮನೆಮದ್ದುಗಳಿಂದ ಕರಗುತ್ತವೆಯೇ?

    November 1, 2026

    ನವೆಂಬರ್ 1: ನಮ್ಮತುಮಕೂರು ಡಿಜಿಟಲ್ ಮಾಧ್ಯಮಕ್ಕೆ 5 ವರ್ಷಗಳ ಸಂಭ್ರಮ | ಸಂಪಾದಕೀಯ

    November 1, 2026

    ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಧರಣಿ ಸತ್ಯಾಗ್ರಹ: ಕಂದಾಯ ನಿರೀಕ್ಷಕರ ಅಮಾನತಿಗೆ ಆಗ್ರಹಿಸಿ ತಹಶೀಲ್ದಾರ್‌ ಗೆ ಸಾರ್ವಜನಿಕರ ಮನವಿ

    October 31, 2026

    Leave A Reply Cancel Reply

    Our Picks

    ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?

    October 31, 2026

    ವಂಚನೆಗೆ ಹಣ ಕಳೆದುಕೊಂಡವರಿಗೆ ಬ್ಯಾಂಕ್‌ ಗಳೇ ಪರಿಹಾರ ನೀಡಬೇಕಾ? ಸುಪ್ರೀಂ ಕೋರ್ಟ್ ಮಹತ್ವದ ಪ್ರಸ್ತಾಪ ಇಲ್ಲಿದೆ

    October 31, 2026

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026

    ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಹೊಡೆತ: ₹30 ಲಕ್ಷ ಕೋಟಿ ಸಂಪತ್ತು ಕರಗಲು 10 ಕಾರಣಗಳೇನು?

    October 28, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    Uncategorized

    ಮೂರು ದಶಕಗಳ ರಂಗ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ! | ಸ್ತ್ರೀ ವೇಷದ ಅಭಿನಯದಲ್ಲಿ ವಿಶಿಷ್ಟ ಛಾಪು ಮೂಡಿಸಿದ ದವಡಬೆಟ್ಟದ ಈರಣ್ಣ ಬಿ.ಡಿ.ಗೆ ಒಲಿದ ಪ್ರಶಸ್ತಿ

    November 3, 2026

    ಪಾವಗಡ : ಮೂರು ದಶಕಗಳ ಸುದೀರ್ಘ ರಂಗಸೇವೆಗೆ ಮನ್ನಣೆ ದೊರೆತಿದ್ದು, ತಾಲೂಕಿನ ದವಡಬೆಟ್ಟ ಗ್ರಾಮದ ಹಿರಿಯ ರಂಗಭೂಮಿ ಕಲಾವಿದ ಈರಣ್ಣ…

    12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ.ಶಿವತಾರಕ್ ಆಯ್ಕೆ | ಶಾಸಕ ಸಿ.ಬಿ. ಸುರೇಶ್‌ ಬಾಬು ನೇತೃತ್ವದಲ್ಲಿ ಸಮ್ಮೇಳನಕ್ಕೆ ಸಿದ್ಧತೆ

    November 3, 2026

    ಔರಾದ್‌ | ಕುಡಿಯುವ ನೀರು ಪೂರೈಕೆಯಲ್ಲಿ ಲೋಪವಾದರೆ ಕ್ರಮ: ಶಾಸಕ ಪ್ರಭು ಚವ್ಹಾಣ

    November 3, 2026

    ಔರಾದ್: ಕುಡಿಯುವ ನೀರಿಗಾಗಿ 2.5 ಕೋಟಿ ಅನುದಾನಕ್ಕೆ ಶಾಸಕ ಪ್ರಭು ಚವ್ಹಾಣ ಆಗ್ರಹ

    November 3, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.