nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಓದುವ ಸಂಸ್ಕೃತಿ ಬೆಳೆಸಬೇಕು: ಸಿ.ಬಿ. ಶಶಿಧರ್

    November 15, 2026

    7 ಮಂದಿಯ ಹತ್ಯೆ: ಆರೋಪಿ ಶೇಖರ್ ಮಾಡಿದ ‘ಕು’ತಂತ್ರ ಅಷ್ಟಿಷ್ಟಲ್ಲ, ಬೆಚ್ಚಿಬೀಳಿಸುವಂತಿದೆ ಕೃತ್ಯ

    November 13, 2026

    e–KYC ಮಾಡಿಸಲು ಲಂಚಕ್ಕೆ ಬೇಡಿಕೆ: ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತು

    November 13, 2026
    Facebook Twitter Instagram
    ಟ್ರೆಂಡಿಂಗ್
    • ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಓದುವ ಸಂಸ್ಕೃತಿ ಬೆಳೆಸಬೇಕು: ಸಿ.ಬಿ. ಶಶಿಧರ್
    • 7 ಮಂದಿಯ ಹತ್ಯೆ: ಆರೋಪಿ ಶೇಖರ್ ಮಾಡಿದ ‘ಕು’ತಂತ್ರ ಅಷ್ಟಿಷ್ಟಲ್ಲ, ಬೆಚ್ಚಿಬೀಳಿಸುವಂತಿದೆ ಕೃತ್ಯ
    • e–KYC ಮಾಡಿಸಲು ಲಂಚಕ್ಕೆ ಬೇಡಿಕೆ: ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತು
    • ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?
    • ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 7 ಗಂಟೆಯಲ್ಲಿ ತಲುಪಬಹುದು!
    • ಯೋಗವು ರೋಗಮುಕ್ತಿ ಮಾತ್ರವಲ್ಲ, ಭೋಗಮುಕ್ತಿಯನ್ನೂ ನೀಡುತ್ತದೆ; ಪ್ರತಿಯೊಬ್ಬರಿಗೂ ಆಯುರ್ವೇದ ತಲುಪಿಸುವುದೇ ಸರ್ಕಾರದ ಗುರಿ: ಪ್ರಧಾನಿ ಮೋದಿ
    • ಬಿಜೆಪಿಗೆ ಮತ ಹಾಕಿದರೆ ಐದೂ ಗ್ಯಾರಂಟಿ ಯೋಜನೆಗಳು ನೂರಕ್ಕೆ ನೂರರಷ್ಟು ಬಂದ್: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ
    • ಕಾಲು ಮುರಿದರೂ ನಿಲ್ಲದ ಕಾಯಕ: ತರಗತಿಯಲ್ಲೇ ಹಾಸಿಗೆ ಹಾಕಿ ಪಾಠ ಮಾಡುತ್ತಿರುವ ಶಾಸಕ ಪ್ರದೀಪ್ ಈಶ್ವರ್!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಓದುವ ಸಂಸ್ಕೃತಿ ಬೆಳೆಸಬೇಕು: ಸಿ.ಬಿ. ಶಶಿಧರ್
    ತಿಪಟೂರು November 15, 2026

    ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಓದುವ ಸಂಸ್ಕೃತಿ ಬೆಳೆಸಬೇಕು: ಸಿ.ಬಿ. ಶಶಿಧರ್

    By Ganesh TumkuruNovember 15, 2026No Comments2 Mins Read
    tuda shashidhar

    ತಿಪಟೂರು:  ಮಕ್ಕಳಲ್ಲಿ ಮೂಢನಂಬಿಕೆಗಳ ಬದಲಿಗೆ ವೈಚಾರಿಕತೆ, ವೈಜ್ಞಾನಿಕ ಚಿಂತನೆ ಹಾಗೂ ತರ್ಕಬದ್ಧ ಆಲೋಚನೆಗಳನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರು ವೈಜ್ಞಾನಿಕ ಮನೋಭಾವಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು ಎಂದು ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ. ಶಶಿಧರ್ (ಟೂಡಾ) ತಿಳಿಸಿದರು.

    ತಿಪಟೂರು ತಾಲ್ಲೂಕಿನ ನೊಣವಿನಕೆರೆಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ‘ನವಭಾರತ ನಿರ್ಮಾತೃ ನೆಹರು’ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.

    ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ಹಾಗೂ ಪಂಡಿತ್ ಜವಾಹರಲಾಲ್ ನೆಹರು ಅವರ ಜೀವನ, ಚಿಂತನೆಗಳು ಮತ್ತು ಆಧುನಿಕ ಭಾರತದ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆಗಳನ್ನು ಪರಿಚಯಿಸುವ ಉದ್ದೇಶದಿಂದ ಪುಸ್ತಕಗಳನ್ನು ವಿತರಿಸಲಾಗಿದೆ. ನಮ್ಮ ಉದ್ದೇಶ ಕೇವಲ ಪುಸ್ತಕ ವಿತರಿಸುವುದಲ್ಲ. ಮಕ್ಕಳಲ್ಲಿ ಓದುವ ಸಂಸ್ಕೃತಿ ಬೆಳೆಸುವುದು, ಸಂವಿಧಾನಿಕ ಮೌಲ್ಯಗಳನ್ನು ಬಿತ್ತುವುದು ಮತ್ತು ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವುದಾಗಿದೆ. ಮಕ್ಕಳ ಕೈಯಲ್ಲಿ ಪುಸ್ತಕವಿದ್ದರೆ ಮನಸ್ಸಿನಲ್ಲಿ ಜ್ಞಾನ ಮೂಡುತ್ತದೆ. ಜ್ಞಾನದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದರು.

    ಭಾರತವು ಕೇವಲ ರಾಜಕೀಯವಾಗಿ ಸ್ವತಂತ್ರವಾದರೆ ಸಾಲದು, ಆರ್ಥಿಕವಾಗಿ, ವೈಜ್ಞಾನಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿಯೂ ಬಲಿಷ್ಠವಾಗಬೇಕು ಎಂಬುದು ನೆಹರು ಅವರ ಆಶಯವಾಗಿತ್ತು. ಈ ಹಿನ್ನೆಲೆಯಲ್ಲಿ ದೊಡ್ಡ ಅಣೆಕಟ್ಟುಗಳು, ಕೈಗಾರಿಕೆಗಳು, ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಅವರು ಒತ್ತು ನೀಡಿದ್ದರು. ಐಐಟಿ, ಏಮ್ಸ್ ಸೇರಿದಂತೆ ಹಲವು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಬೆಳವಣಿಗೆಗೆ ಅವರ ಆಡಳಿತದಲ್ಲಿ ಮಹತ್ವದ ಪ್ರೋತ್ಸಾಹ ದೊರೆಯಿತು.

    —  ಸಿ.ಬಿ. ಶಶಿಧರ್ (ಟೂಡಾ)

    ಶಿಕ್ಷಣವನ್ನು ಕೇವಲ ಉದ್ಯೋಗ ಪಡೆಯುವ ಸಾಧನವಾಗಿ ನೆಹರು ಅವರು ಪರಿಗಣಿಸಿರಲಿಲ್ಲ. ಶಿಕ್ಷಣವು ಮನುಷ್ಯನಲ್ಲಿ ಪ್ರಶ್ನಿಸುವ ಮನೋಭಾವ, ಆಲೋಚನಾ ಶಕ್ತಿ ಹಾಗೂ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಬೇಕು ಎಂದು ನಂಬಿದ್ದರು. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ಸುಮ್ಮನೆ ನಂಬದೆ ಪ್ರಶ್ನಿಸಬೇಕು, ಉತ್ತರ ಹುಡುಕಬೇಕು ಮತ್ತು ಸತ್ಯವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

    ಕಾರ್ಯಕ್ರಮದಲ್ಲಿ ಶಾಲೆಯ ಉಪಪ್ರಾಂಶುಪಾಲ ಮಧು, ಹಿರಿಯ ಶಿಕ್ಷಕ ಶಿವಕುಮಾರ್ ಎಚ್.ಪಿ., ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಕೆ.ಎಸ್., ಶಾಂತರಾಜು, ಸಹ ಶಿಕ್ಷಕರಾದ ಮನೋಹರ್, ಚಂದ್ರಕಲಾ, ಎನ್. ಪುಷ್ಪಲತಾ, ವೀರಕುಮಾರ್, ಪುಟ್ಟಸ್ವಾಮಿ ಹಾಗೂ ಬೆಲೆ ಕಾವಲು ಸಮಿತಿಯ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಕೆಳಹಟ್ಟಿ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

    ವರದಿ: ಆನಂದ್ ತಿಪಟೂರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಸಿದ್ದಾಪುರ ಕೆರೆ ಪುನಶ್ಚೇತನಕ್ಕೆ ಧರ್ಮಸ್ಥಳ ಯೋಜನೆಯಿಂದ ₹11.50 ಲಕ್ಷ ಮಂಜೂರು: ಕಾಮಗಾರಿಗೆ ಗುದ್ದಲಿ ಪೂಜೆ

    November 13, 2026

    ತಿಪಟೂರು: ನೂತನ ಕನಕ ಭವನದ ಮೇಲ್ಚಾವಣಿ ನಿರ್ಮಾಣಕ್ಕೆ ಕೆಪಿಸಿಸಿ ಸದಸ್ಯ ವಿ. ಯೋಗೇಶ್ ಭರವಸೆ

    November 7, 2026

    ಹಲ್ಕುರಿಕೆ ಕೆರೆಗೆ ನೀರು: ನ.23ರ ಗಡುವು | ನೀರು ಹರಿಸದಿದ್ದರೆ ಬೃಹತ್ ಪಾದಯಾತ್ರೆ: ಜೆಡಿಎಸ್ ಮುಖಂಡ ಶಾಂತ್ ಕುಮಾರ್ ಎಚ್ಚರಿಕೆ

    November 7, 2026

    Leave A Reply Cancel Reply

    Our Picks

    ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?

    November 13, 2026

    ಯೋಗವು ರೋಗಮುಕ್ತಿ ಮಾತ್ರವಲ್ಲ, ಭೋಗಮುಕ್ತಿಯನ್ನೂ ನೀಡುತ್ತದೆ; ಪ್ರತಿಯೊಬ್ಬರಿಗೂ ಆಯುರ್ವೇದ ತಲುಪಿಸುವುದೇ ಸರ್ಕಾರದ ಗುರಿ: ಪ್ರಧಾನಿ ಮೋದಿ

    November 13, 2026

    ಡಬ್ಬಿಂಗ್ ಲೋಕದಲ್ಲಿ ಹೊಸ ಕ್ರಾಂತಿ; ‘ರಾಮಾಯಣ’ ಚಿತ್ರದಲ್ಲಿ ಬ್ರಹ್ಮ ಎಐ ಮ್ಯಾಜಿಕ್! ಏನಿದರ ವಿಶೇಷತೆ ?

    November 13, 2026

    ‘ಆಸ್ಕರ್’ ಅಂಗಳಕ್ಕೆ ರಣಬೀರ್ ಕಪೂರ್, ಯಶ್ ಅಭಿನಯದ ‘ರಾಮಾಯಣ’! ಯಾವ ವಿಭಾಗಗಳಲ್ಲಿ ಸ್ಪರ್ಧಿಸಲಿದೆ ಸಿನಿಮಾ?

    November 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಓದುವ ಸಂಸ್ಕೃತಿ ಬೆಳೆಸಬೇಕು: ಸಿ.ಬಿ. ಶಶಿಧರ್

    November 15, 2026

    ತಿಪಟೂರು:  ಮಕ್ಕಳಲ್ಲಿ ಮೂಢನಂಬಿಕೆಗಳ ಬದಲಿಗೆ ವೈಚಾರಿಕತೆ, ವೈಜ್ಞಾನಿಕ ಚಿಂತನೆ ಹಾಗೂ ತರ್ಕಬದ್ಧ ಆಲೋಚನೆಗಳನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಪಂಡಿತ್ ಜವಾಹರಲಾಲ್…

    7 ಮಂದಿಯ ಹತ್ಯೆ: ಆರೋಪಿ ಶೇಖರ್ ಮಾಡಿದ ‘ಕು’ತಂತ್ರ ಅಷ್ಟಿಷ್ಟಲ್ಲ, ಬೆಚ್ಚಿಬೀಳಿಸುವಂತಿದೆ ಕೃತ್ಯ

    November 13, 2026

    e–KYC ಮಾಡಿಸಲು ಲಂಚಕ್ಕೆ ಬೇಡಿಕೆ: ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತು

    November 13, 2026

    ಟ್ರಕ್ ಗೆ ಡಿಕ್ಕಿ ಹೊಡೆದ ಮಿನಿಬಸ್: 23 ಮಂದಿಯ ದಾರುಣ ಸಾವು, ಅತೀ ವೇಗವೇ ಅಪಘಾತಕ್ಕೆ ಕಾರಣವಾಯ್ತೇ?

    November 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.