nammatumakuru

    Subscribe to Updates

    Get the latest creative news from FooBar about art, design and business.

    What's Hot

    ವಿಲ್ ಇಲ್ಲ, ವಾರಸುದಾರರೂ ಇಲ್ಲ ಎಂದರೆ ಆಸ್ತಿ ಯಾರ ಪಾಲಾಗುತ್ತದೆ? 

    November 22, 2026

    ನ್ಯಾಯಕ್ಕಾಗಿ ತಹಶೀಲ್ದಾರ್ ಕಚೇರಿ ಮುಂದೆ ರಾತ್ರಿ ಕಳೆದ ನಾಗರಾಜಪ್ಪನಿಗೆ ದಾಖಲೆಗಳ ಶಾಕ್! | ತಹಶೀಲ್ದಾರ್ ನಂದಿನಿ ದಾಖಲೆಗಳ ಸಮೇತ ಸ್ಪಷ್ಟನೆ

    November 22, 2026

    ವಿಶೇಷ ಸಂಪಾದಕೀಯ: ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಬಡ ಹೊರಗುತ್ತಿಗೆ ನೌಕರರ ಬಲಿ! ಆಹಾರ ನಿಗಮದ ಅಮಾನವೀಯ ಸುತ್ತೋಲೆ

    November 21, 2026
    Facebook Twitter Instagram
    ಟ್ರೆಂಡಿಂಗ್
    • ವಿಲ್ ಇಲ್ಲ, ವಾರಸುದಾರರೂ ಇಲ್ಲ ಎಂದರೆ ಆಸ್ತಿ ಯಾರ ಪಾಲಾಗುತ್ತದೆ? 
    • ನ್ಯಾಯಕ್ಕಾಗಿ ತಹಶೀಲ್ದಾರ್ ಕಚೇರಿ ಮುಂದೆ ರಾತ್ರಿ ಕಳೆದ ನಾಗರಾಜಪ್ಪನಿಗೆ ದಾಖಲೆಗಳ ಶಾಕ್! | ತಹಶೀಲ್ದಾರ್ ನಂದಿನಿ ದಾಖಲೆಗಳ ಸಮೇತ ಸ್ಪಷ್ಟನೆ
    • ವಿಶೇಷ ಸಂಪಾದಕೀಯ: ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಬಡ ಹೊರಗುತ್ತಿಗೆ ನೌಕರರ ಬಲಿ! ಆಹಾರ ನಿಗಮದ ಅಮಾನವೀಯ ಸುತ್ತೋಲೆ
    • ಬ್ಯಾಂಕ್‌ ನಿಂದ ಗ್ರಾಹಕನಿಗೆ ₹40.30 ಲಕ್ಷ ಪರಿಹಾರ! ಏನಿದು ಪ್ರಕರಣ ?
    • ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 33 ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆ
    • ಅಲೆಮಾರಿ ಬುಡಕಟ್ಟು ಕುಟುಂಬಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು ಮೊದಲ ಆದ್ಯತೆ: ಶಾಸಕ ಸಿ.ಬಿ. ಸುರೇಶ್‌ ಬಾಬು
    • ನ.27ರಂದು ಕನಕದಾಸರ ಜಯಂತ್ಯೋತ್ಸವ ಅದ್ಧೂರಿ ಆಚರಣೆ: ಜಿಲ್ಲಾಧಿಕಾರಿ ಶುಭ ಕಲ್ಯಾಣ್
    • ಯುವ ರೈತ ಮಹಿಳೆ ಕಾವ್ಯ ದಿನೇಶ್‌ ಗೆ ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಮಹಿಳೆ ಪ್ರಶಸ್ತಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಿಲ್ ಇಲ್ಲ, ವಾರಸುದಾರರೂ ಇಲ್ಲ ಎಂದರೆ ಆಸ್ತಿ ಯಾರ ಪಾಲಾಗುತ್ತದೆ? 
    ಲೇಖನ November 22, 2026

    ವಿಲ್ ಇಲ್ಲ, ವಾರಸುದಾರರೂ ಇಲ್ಲ ಎಂದರೆ ಆಸ್ತಿ ಯಾರ ಪಾಲಾಗುತ್ತದೆ? 

    By Ganesh TumkuruNovember 22, 2026No Comments2 Mins Read
    order of succession

    ವ್ಯಕ್ತಿಯೊಬ್ಬರು ವಿಲ್ (ಉಯಿಲು) ಬರೆಯದೆ ಮೃತಪಟ್ಟರೆ, ಅವರ ಆಸ್ತಿ ಸಾಮಾನ್ಯವಾಗಿ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಸೇರುತ್ತದೆ. ಆದರೆ ಮೃತ ವ್ಯಕ್ತಿಗೆ ಯಾವುದೇ ಕಾನೂನುಬದ್ಧ ವಾರಸುದಾರರು ಇಲ್ಲದಿದ್ದರೆ ಆಸ್ತಿ ಯಾರ ಪಾಲಾಗುತ್ತದೆ? ಸರ್ಕಾರ ಅದನ್ನು ವಶಪಡಿಸಿಕೊಳ್ಳಬಹುದೇ? ಈ ಕುರಿತು 1956ರ ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ಸ್ಪಷ್ಟ ನಿಯಮಗಳನ್ನು ರೂಪಿಸಲಾಗಿದೆ.

    ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 29ರ ಪ್ರಕಾರ, ವ್ಯಕ್ತಿಯೊಬ್ಬರು ವಿಲ್ ಮಾಡದೆ ಮೃತಪಟ್ಟಿದ್ದು, ಅವರಿಗೆ ಯಾವುದೇ ಅರ್ಹ ಕಾನೂನುಬದ್ಧ ಉತ್ತರಾಧಿಕಾರಿಗಳು ಇಲ್ಲದಿದ್ದರೆ ಅವರ ಆಸ್ತಿ ಸರ್ಕಾರದ ಪಾಲಾಗುತ್ತದೆ. ಕಾನೂನಿನಲ್ಲಿ ಈ ಪ್ರಕ್ರಿಯೆಯನ್ನು ‘ಎಸ್ಚೀಟ್’ (Escheat) ಎಂದು ಕರೆಯಲಾಗುತ್ತದೆ. ಆದರೆ ಉತ್ತರಾಧಿಕಾರಿಗಳು ಇಲ್ಲವೆಂದು ತಿಳಿದ ತಕ್ಷಣವೇ ಸರ್ಕಾರ ಆಸ್ತಿಯನ್ನು ತನ್ನ ವಶಕ್ಕೆ ಪಡೆಯಲು ಸಾಧ್ಯವಿಲ್ಲ. ಅದಕ್ಕೂ ಮೊದಲು ಹಲವು ಹಂತಗಳ ಪರಿಶೀಲನೆ ನಡೆಸಬೇಕಾಗುತ್ತದೆ.

    ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆಯುವ ಮೊದಲು ಮೃತ ವ್ಯಕ್ತಿಗೆ ಸಂಬಂಧಿಸಿದ ಕಾನೂನುಬದ್ಧ ವಾರಸುದಾರರು ಯಾರಾದರೂ ಇದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಮೊದಲಿಗೆ ಪತ್ನಿ, ಪುತ್ರ, ಪುತ್ರಿ ಮತ್ತು ತಾಯಿ ಸೇರಿದಂತೆ ಮೊದಲ ದರ್ಜೆಯ (Class I) ಉತ್ತರಾಧಿಕಾರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಇವರು ಇದ್ದರೆ ಆಸ್ತಿಯನ್ನು ಕಾನೂನಿನ ಪ್ರಕಾರ ಅವರಿಗೆ ಹಂಚಿಕೆ ಮಾಡಲಾಗುತ್ತದೆ.

    ಮೊದಲ ದರ್ಜೆಯ ವಾರಸುದಾರರು ಇಲ್ಲದಿದ್ದರೆ ತಂದೆ, ಸಹೋದರ, ಸಹೋದರಿ ಸೇರಿದಂತೆ ಎರಡನೇ ದರ್ಜೆಯ (Class II) ಉತ್ತರಾಧಿಕಾರಿಗಳಿಗಾಗಿ ಹುಡುಕಾಟ ನಡೆಸಲಾಗುತ್ತದೆ.ಇವರೂ ಇಲ್ಲದಿದ್ದರೆ ತಂದೆಯ ಕಡೆಯ ಪುರುಷ ಸಂಬಂಧಿಕರಾದ ಅಗ್ನೇಟ್ಸ್ (Agnates) ಅವರನ್ನು ಪರಿಗಣಿಸಲಾಗುತ್ತದೆ. ಕೊನೆಯದಾಗಿ ತಾಯಿಯ ಕಡೆಯ ಸಂಬಂಧಿಕರಾದ ಕಾಗ್ನೇಟ್ಸ್ (Cognates) ಇದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.ಈ ಎಲ್ಲ ಹಂತಗಳಲ್ಲಿಯೂ ಅರ್ಹ ಉತ್ತರಾಧಿಕಾರಿಗಳು ಯಾರೂ ಇಲ್ಲ ಎಂಬುದು ಕಾನೂನುಬದ್ಧವಾಗಿ ದೃಢಪಟ್ಟ ಬಳಿಕವಷ್ಟೇ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆಯುವ ಪ್ರಕ್ರಿಯೆ ಆರಂಭವಾಗುತ್ತದೆ.

    ಈ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, ಸರ್ಕಾರ ಕೇವಲ ಆಸ್ತಿಯನ್ನು ಮಾತ್ರ ಸ್ವೀಕರಿಸುವುದಿಲ್ಲ. ಆಸ್ತಿಗೆ ಸಂಬಂಧಿಸಿದ ಸಾಲಗಳು, ಅಡಮಾನಗಳು ಹಾಗೂ ಇತರ ಕಾನೂನುಬದ್ಧ ಹೊಣೆಗಾರಿಕೆಗಳನ್ನೂ ಪರಿಗಣಿಸಬೇಕಾಗುತ್ತದೆ. ಅಂದರೆ ಆಸ್ತಿಯ ಮೇಲಿರುವ ಬಾಧ್ಯತೆಗಳನ್ನು ನಿರ್ಲಕ್ಷಿಸಿ ಸರ್ಕಾರ ಅದನ್ನು ಸಂಪೂರ್ಣ ಹಕ್ಕಿನಿಂದ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ.

    ಆಸ್ತಿ ಸರ್ಕಾರದ ಪಾಲಾಗುವ ಪ್ರಕ್ರಿಯೆ ಹೇಗೆ ನಡೆಯುತ್ತದೆ?

    ಉತ್ತರಾಧಿಕಾರಿಗಳು ಇಲ್ಲದ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆಯಲು ಕಂದಾಯ ಇಲಾಖೆಯ ಮೂಲಕ ಪರಿಶೀಲನೆ ನಡೆಸಲಾಗುತ್ತದೆ. ಆರಂಭದಲ್ಲಿ ಗ್ರಾಮ ಆಡಳಿತ ಅಧಿಕಾರಿ ಮತ್ತು ಕಂದಾಯ ನಿರೀಕ್ಷಕರು ಆಸ್ತಿಯ ಕುರಿತು ವರದಿ ಸಲ್ಲಿಸುತ್ತಾರೆ. ಈ ವರದಿಯ ಆಧಾರದ ಮೇಲೆ ತಹಸೀಲ್ದಾರ್ ಹೆಚ್ಚಿನ ತನಿಖೆ ನಡೆಸುತ್ತಾರೆ.ನಂತರ ಜಿಲ್ಲಾಧಿಕಾರಿ ಅಥವಾ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾ ಗೆಜೆಟ್ ಹಾಗೂ ಪ್ರಮುಖ ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ ನೀಡುವ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಈ ಪ್ರಕಟಣೆಯ ಮೂಲಕ ಆಸ್ತಿಯ ಮೇಲೆ ಹಕ್ಕು ಹೊಂದಿರುವವರು ಸೂಕ್ತ ದಾಖಲೆಗಳೊಂದಿಗೆ ಮುಂದೆ ಬರಲು ಅವಕಾಶ ನೀಡಲಾಗುತ್ತದೆ.

    ನಿಗದಿತ ಅವಧಿಯಲ್ಲಿ ಯಾರೂ ಹಕ್ಕು ಪ್ರತಿಪಾದಿಸದಿದ್ದರೆ ಮತ್ತು ಉತ್ತರಾಧಿಕಾರಿಗಳು ಇಲ್ಲ ಎಂಬುದು ದೃಢಪಟ್ಟರೆ, ಸಂಬಂಧಪಟ್ಟ ಅಧಿಕಾರಿಗಳ ಆದೇಶದಂತೆ ಆಸ್ತಿಯನ್ನು ಸರ್ಕಾರಿ ಆಸ್ತಿಯೆಂದು ದಾಖಲೆಗಳಲ್ಲಿ ನಮೂದಿಸುವ ಪ್ರಕ್ರಿಯೆ ನಡೆಯುತ್ತದೆ.

    ಸರ್ಕಾರದ ಪಾಲಾದ ಆಸ್ತಿಯನ್ನು ಏನು ಮಾಡಲಾಗುತ್ತದೆ?

    ಹೀಗೆ ಸರ್ಕಾರದ ವಶಕ್ಕೆ ಬಂದ ಆಸ್ತಿಗಳನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಬಳಸಬಹುದಾಗಿದೆ. ಸರ್ಕಾರಿ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿಗಳು ಸೇರಿದಂತೆ ಸಾರ್ವಜನಿಕ ಸೌಲಭ್ಯಗಳ ನಿರ್ಮಾಣಕ್ಕೆ ಇಂತಹ ಆಸ್ತಿಗಳನ್ನು ಬಳಸುವ ಸಾಧ್ಯತೆಯಿದೆ. ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಿಲ್ಲದ ಆಸ್ತಿಗಳನ್ನು ನಿಯಮಾನುಸಾರ ಹರಾಜು ಹಾಕಿ, ಅದರಿಂದ ಬಂದ ಹಣವನ್ನು ಸರ್ಕಾರಿ ಖಜಾನೆಗೆ ಜಮೆ ಮಾಡಬಹುದು.

    ವ್ಯಕ್ತಿಯೊಬ್ಬರು ವಿಲ್ ಮಾಡದೆ ಮೃತಪಟ್ಟಾಗ ಅವರ ಆಸ್ತಿ ನೇರವಾಗಿ ಸರ್ಕಾರದ ಪಾಲಾಗುವುದಿಲ್ಲ. ಮೊದಲು ಕಾನೂನಿನಲ್ಲಿ ಗುರುತಿಸಿರುವ ಎಲ್ಲ ವರ್ಗಗಳ ಉತ್ತರಾಧಿಕಾರಿಗಳನ್ನು ಹುಡುಕಲಾಗುತ್ತದೆ. ಯಾರೂ ಇಲ್ಲ ಎಂಬುದು ಖಚಿತವಾದ ನಂತರವಷ್ಟೇ ಎಸ್ಚೀಟ್ ನಿಯಮದಡಿ ಆಸ್ತಿ ಸರ್ಕಾರದ ವಶಕ್ಕೆ ಹೋಗುತ್ತದೆ. ಹೀಗಾಗಿ ತಮ್ಮ ಆಸ್ತಿಯ ಹಂಚಿಕೆ ಕುರಿತು ಗೊಂದಲಗಳು ಉಂಟಾಗದಂತೆ ಮುಂಚಿತವಾಗಿಯೇ ಕಾನೂನುಬದ್ಧ ವಿಲ್ ಮಾಡಿಸಿಕೊಳ್ಳುವುದು ಸೂಕ್ತ.

    ಸೂಚನೆ: ಈ ನಿಯಮಗಳು ಹಿಂದೂ ಉತ್ತರಾಧಿಕಾರ ಕಾಯ್ದೆಯ ವ್ಯಾಪ್ತಿಗೆ ಸಂಬಂಧಿಸಿದ್ದು, ಇತರ ವೈಯಕ್ತಿಕ ಕಾನೂನುಗಳಡಿ ಉತ್ತರಾಧಿಕಾರದ ನಿಯಮಗಳು ಭಿನ್ನವಾಗಿರಬಹುದು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ವಿಶೇಷ ಸಂಪಾದಕೀಯ: ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಬಡ ಹೊರಗುತ್ತಿಗೆ ನೌಕರರ ಬಲಿ! ಆಹಾರ ನಿಗಮದ ಅಮಾನವೀಯ ಸುತ್ತೋಲೆ

    November 21, 2026

    ಪತ್ನಿ ಪತಿಯ ಮಡಿಲಲ್ಲಿ ಕುಳಿತುಕೊಳ್ಳುವುದು ಭಾರತೀಯ ಸಂಸ್ಕೃತಿಯಲ್ಲಿ ತಪ್ಪೇ? ಶಿಲ್ಪಕಲೆ, ಪುರಾಣಗಳಲ್ಲಿದೆ ಉಲ್ಲೇಖ!

    November 20, 2026

    ಆಕಾಶ್‌ ಗೆ ಮೂರನೇ ರಾಜ್ಯ ರ‍್ಯಾಂಕಿಂಗ್ ಪ್ರಶಸ್ತಿ

    November 19, 2026

    Leave A Reply Cancel Reply

    Our Picks

    ಬ್ಯಾಂಕ್‌ ನಿಂದ ಗ್ರಾಹಕನಿಗೆ ₹40.30 ಲಕ್ಷ ಪರಿಹಾರ! ಏನಿದು ಪ್ರಕರಣ ?

    November 21, 2026

    ಮಧ್ಯಪ್ರದೇಶದ ನರ್ಮದಾ ಕಣಿವೆಯಲ್ಲಿ 5 ಲಕ್ಷ ವರ್ಷಗಳ ಹಿಂದಿನ ಪಳೆಯುಳಿಕೆ ಪತ್ತೆ! ಏನದು ?

    November 20, 2026

    ಐಐಟಿಎಫ್ 2026ರಲ್ಲಿ EPFO ಲಾಂಜ್ ಮತ್ತು ESIC ಪೆವಿಲಿಯನ್ ಉದ್ಘಾಟಿಸಿದ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ

    November 16, 2026

    ರಾಮಾಯಣದ ಪುಷ್ಪಕ ವಿಮಾನವನ್ನು ನಿರ್ಮಿಸಿದ್ದು ಯಾರು? ರಾವಣನ ಕೈಗೆ ಸಿಕ್ಕಿದ್ದು ಹೇಗೆ? ಪುರಾಣ ಮತ್ತು ವಿಜ್ಞಾನ ಹೇಳುವುದೇನು?

    November 15, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ವಿಲ್ ಇಲ್ಲ, ವಾರಸುದಾರರೂ ಇಲ್ಲ ಎಂದರೆ ಆಸ್ತಿ ಯಾರ ಪಾಲಾಗುತ್ತದೆ? 

    November 22, 2026

    ವ್ಯಕ್ತಿಯೊಬ್ಬರು ವಿಲ್ (ಉಯಿಲು) ಬರೆಯದೆ ಮೃತಪಟ್ಟರೆ, ಅವರ ಆಸ್ತಿ ಸಾಮಾನ್ಯವಾಗಿ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಸೇರುತ್ತದೆ. ಆದರೆ ಮೃತ ವ್ಯಕ್ತಿಗೆ ಯಾವುದೇ…

    ನ್ಯಾಯಕ್ಕಾಗಿ ತಹಶೀಲ್ದಾರ್ ಕಚೇರಿ ಮುಂದೆ ರಾತ್ರಿ ಕಳೆದ ನಾಗರಾಜಪ್ಪನಿಗೆ ದಾಖಲೆಗಳ ಶಾಕ್! | ತಹಶೀಲ್ದಾರ್ ನಂದಿನಿ ದಾಖಲೆಗಳ ಸಮೇತ ಸ್ಪಷ್ಟನೆ

    November 22, 2026

    ವಿಶೇಷ ಸಂಪಾದಕೀಯ: ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಬಡ ಹೊರಗುತ್ತಿಗೆ ನೌಕರರ ಬಲಿ! ಆಹಾರ ನಿಗಮದ ಅಮಾನವೀಯ ಸುತ್ತೋಲೆ

    November 21, 2026

    ಬ್ಯಾಂಕ್‌ ನಿಂದ ಗ್ರಾಹಕನಿಗೆ ₹40.30 ಲಕ್ಷ ಪರಿಹಾರ! ಏನಿದು ಪ್ರಕರಣ ?

    November 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.