nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಹಾತ್ಮ ಜ್ಯೋತಿಬಾ ಫುಲೆಯವರ ಸ್ಮರಣದಿನ: ಆಶಾ ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆ

    November 28, 2026

    ಪುರಾತನ ಕೃಷ್ಣಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅಡ್ಡಿ ಆರೋಪ: ಕಲ್ಲಿನ ಕಂಬಗಳ ತೆರವು, ಕ್ರಮಕ್ಕೆ ಭಕ್ತರ ಆಗ್ರಹ!

    November 28, 2026

    ದಾನ ಧರ್ಮದಿಂದಲೇ ವ್ಯಕ್ತಿಯ ಮೌಲ್ಯ ಹೆಚ್ಚಳ: ಕುಂಚಶ್ರೀ |   ಬಡವರು, ದೀನದಲಿತರ ನೆರವಿಗೆ ದುಡಿಮೆಯ ಒಂದು ಭಾಗ ಮೀಸಲಿಡಿ – ಡಾ. ಹನುಮಂತನಾಥ ಸ್ವಾಮೀಜಿ ಕರೆ

    November 28, 2026
    Facebook Twitter Instagram
    ಟ್ರೆಂಡಿಂಗ್
    • ಮಹಾತ್ಮ ಜ್ಯೋತಿಬಾ ಫುಲೆಯವರ ಸ್ಮರಣದಿನ: ಆಶಾ ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆ
    • ಪುರಾತನ ಕೃಷ್ಣಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅಡ್ಡಿ ಆರೋಪ: ಕಲ್ಲಿನ ಕಂಬಗಳ ತೆರವು, ಕ್ರಮಕ್ಕೆ ಭಕ್ತರ ಆಗ್ರಹ!
    • ದಾನ ಧರ್ಮದಿಂದಲೇ ವ್ಯಕ್ತಿಯ ಮೌಲ್ಯ ಹೆಚ್ಚಳ: ಕುಂಚಶ್ರೀ |   ಬಡವರು, ದೀನದಲಿತರ ನೆರವಿಗೆ ದುಡಿಮೆಯ ಒಂದು ಭಾಗ ಮೀಸಲಿಡಿ – ಡಾ. ಹನುಮಂತನಾಥ ಸ್ವಾಮೀಜಿ ಕರೆ
    • ಕನಕದಾಸರ ಸಮಾನತೆಯ ಸಂದೇಶ ಇಂದಿಗೂ ಪ್ರಸ್ತುತ: ರಾಘವೇಂದ್ರ ಡಿ.ಎಂ.
    • ಸಾಮಾಜಿಕ ಅಸಮಾನತೆ ವಿರುದ್ಧ ಕನಕದಾಸರ ಹೋರಾಟ ಅನುಕರಣೀಯ: ಡಾ.ಹನುಮಂತನಾಥ ಸ್ವಾಮೀಜಿ
    • ಸರ್ಕಾರಿ ಶಾಲಾ ಮಕ್ಕಳ ಆರೋಗ್ಯ ರಕ್ಷಣೆಗೆ ನೆರಳು ಟ್ರಸ್ಟ್ ಬದ್ಧ: ಜಗದೀಶ್ | ಮಾವಿನಹಳ್ಳಿ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
    • ಡಿ.12ರ ಲೋಕ ಅದಾಲತ್‌ ನಲ್ಲಿ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ: ನ್ಯಾ. ಸುಮಂಗಲ ಎಸ್. ಬಸವಣ್ಣೂರ್
    • WWE ಖ್ಯಾತಿಯ ಕುಸ್ತಿಪಟು ಬ್ರಾನ್ಸನ್ ರೀಡ್ ನಿಧನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಹಾತ್ಮ ಜ್ಯೋತಿಬಾ ಫುಲೆಯವರ ಸ್ಮರಣದಿನ: ಆಶಾ ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆ
    ತುಮಕೂರು November 28, 2026

    ಮಹಾತ್ಮ ಜ್ಯೋತಿಬಾ ಫುಲೆಯವರ ಸ್ಮರಣದಿನ: ಆಶಾ ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆ

    By Ganesh TumkuruNovember 28, 2026No Comments1 Min Read
    jyotiba phul

    ತುಮಕೂರು: ಮಹಿಳೆಯರು ಮತ್ತು ಹಿಂದುಳಿದ ಜನಸಮುದಾಯದ ಏಳಿಗೆಗೆ ಶ್ರಮಿಸಿದ ಮಹಾತ್ಮ ಜ್ಯೋತಿಬಾ ಫುಲೆಯವರ ಸ್ಮರಣದಿನದ ಸಂದರ್ಭದಲ್ಲಿ ಹೋರಾಟನಿರತ ‘ಆಶಾ’ಗಳಿಗೆ  ಬೆಂಬಲ ವ್ಯಕ್ತಪಡಿಸಿ ಎಐಡಿಎಸ್ ಓ ವತಿಯಿಂದ ತುಮಕೂರಿನ ಕುಂಕುಮನಹಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

    ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓನ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿ, “ಆಶಾ ಕಾರ್ಯಕರ್ತೆಯರು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ಸಾರ್ವಜನಿಕರ ಆರೋಗ್ಯದ ಕಾಳಜಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ, ಇಷ್ಟೊಂದು ಮಹತ್ವದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರಿಗೆ ಸಮರ್ಪಕ ಗೌರವಧನ ಮತ್ತು ಸಾಮಾಜಿಕ ಭದ್ರತೆ ಒದಗಿಸುವಲ್ಲಿ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿವೆ.

    ಜನರ ತೆರಿಗೆ ಹಣದಿಂದ ಆಡಳಿತ ನಡೆಸುವ ಸರ್ಕಾರಗಳು ಕಾರ್ಪೊರೇಟ್ ಕಂಪನಿಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಮುಂದಾಗುತ್ತವೆ. ಆದರೆ, ಜನರ ಆರೋಗ್ಯಕ್ಕಾಗಿ ದುಡಿಯುವ ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಹಿಂದೇಟು ಹಾಕುತ್ತಿರುವುದು ಸರ್ಕಾರದ ಜನವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮುಂದುವರೆದು ಮಾತನಾಡಿದ ಅವರು “ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ₹15,000 ಮಾಸಿಕ ಗೌರವಧನ ನೀಡಬೇಕು, ಬಾಕಿ ಇರುವ ಪ್ರೋತ್ಸಾಹಧನವನ್ನು ತಕ್ಷಣ ಬಿಡುಗಡೆ ಮಾಡಬೇಕು, ನಿವೃತ್ತಿ ಸೌಲಭ್ಯ ಮತ್ತು ಸಾಮಾಜಿಕ ಭದ್ರತೆ ಕಲ್ಪಿಸಬೇಕು ಹಾಗೂ ಕೆಲಸದ ಹೊರೆಗೆ ತಕ್ಕಂತೆ ಸಮರ್ಪಕ ಸೌಲಭ್ಯಗಳನ್ನು ಒದಗಿಸಬೇಕು. ಆಶಾ ಕಾರ್ಯಕರ್ತೆಯರ ಹೋರಾಟ ಕೇವಲ ಅವರ ಹಕ್ಕುಗಳ ಹೋರಾಟವಲ್ಲ; ಅದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ದುಡಿಯುವ ಜನರ ಘನತೆಯನ್ನು ಕಾಪಾಡುವ ಹೋರಾಟವಾಗಿದೆ. ಈ ಹೋರಾಟಕ್ಕೆ ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಪ್ರಜ್ಞಾವಂತ ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಕರೆ ನೀಡಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ತುಮಕೂರಿನಲ್ಲಿ ಸಂತಶ್ರೇಷ್ಠ ಕನಕದಾಸರ 539ನೇ ಜಯಂತ್ಯೋತ್ಸವ ಸಂಭ್ರಮ

    November 27, 2026

    ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಎಐಡಿಎಸ್ ಓ ಬೆಂಬಲ; ತುಮಕೂರಿನಲ್ಲಿ ವಿದ್ಯಾರ್ಥಿಗಳ ಆಗ್ರಹ ದಿನ ಆಚರಣೆ

    November 27, 2026

    ಕಾರ್ಮಿಕರ ಕನಿಷ್ಠ ವೇತನ ₹42 ಸಾವಿರ, ಪಿಂಚಣಿ ₹21 ಸಾವಿರಕ್ಕೆ ಆಗ್ರಹ

    November 27, 2026

    Leave A Reply Cancel Reply

    Our Picks

    LPG ಗ್ರಾಹಕರೇ ಗಮನಿಸಿ! ಡಿಸೆಂಬರ್ 1ರಿಂದ ಗ್ಯಾಸ್ ಸಿಲಿಂಡರ್ ಬುಕಿಂಗ್ ಬಂದ್ ಆಗುತ್ತಾ? ಇ-ಕೆವೈಸಿ ಬಗ್ಗೆ ಮಹತ್ವದ ಮಾಹಿತಿ

    November 27, 2026

    ಚಲಿಸುವ ಎಸಿ ರೈಲಿನಲ್ಲೇ ದೀಪ ಹಚ್ಚಿ ಶಂಖನಾದ, ಪೂಜೆ! ರೈಲ್ವೆ ಕಾಯ್ದೆ ಏನು ಹೇಳುತ್ತದೆ ಗೊತ್ತಾ?

    November 27, 2026

    ಡಿಸೆಂಬರ್ 3ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ: ಕಾರಣವೇನು ? ಗ್ರಾಹಕರು ಗಮನಿಸಬೇಕಾದದ್ದು ಏನು ?

    November 25, 2026

    ಎಸ್‌ ಬಿಐನಲ್ಲಿ ₹1 ಲಕ್ಷ ವೈಯಕ್ತಿಕ ಸಾಲ ಪಡೆದರೆ EMI ಎಷ್ಟು? ಬಡ್ಡಿದರದ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ!

    November 25, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಮಹಾತ್ಮ ಜ್ಯೋತಿಬಾ ಫುಲೆಯವರ ಸ್ಮರಣದಿನ: ಆಶಾ ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆ

    November 28, 2026

    ತುಮಕೂರು: ಮಹಿಳೆಯರು ಮತ್ತು ಹಿಂದುಳಿದ ಜನಸಮುದಾಯದ ಏಳಿಗೆಗೆ ಶ್ರಮಿಸಿದ ಮಹಾತ್ಮ ಜ್ಯೋತಿಬಾ ಫುಲೆಯವರ ಸ್ಮರಣದಿನದ ಸಂದರ್ಭದಲ್ಲಿ ಹೋರಾಟನಿರತ ‘ಆಶಾ’ಗಳಿಗೆ  ಬೆಂಬಲ…

    ಪುರಾತನ ಕೃಷ್ಣಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅಡ್ಡಿ ಆರೋಪ: ಕಲ್ಲಿನ ಕಂಬಗಳ ತೆರವು, ಕ್ರಮಕ್ಕೆ ಭಕ್ತರ ಆಗ್ರಹ!

    November 28, 2026

    ದಾನ ಧರ್ಮದಿಂದಲೇ ವ್ಯಕ್ತಿಯ ಮೌಲ್ಯ ಹೆಚ್ಚಳ: ಕುಂಚಶ್ರೀ |   ಬಡವರು, ದೀನದಲಿತರ ನೆರವಿಗೆ ದುಡಿಮೆಯ ಒಂದು ಭಾಗ ಮೀಸಲಿಡಿ – ಡಾ. ಹನುಮಂತನಾಥ ಸ್ವಾಮೀಜಿ ಕರೆ

    November 28, 2026

    ಕನಕದಾಸರ ಸಮಾನತೆಯ ಸಂದೇಶ ಇಂದಿಗೂ ಪ್ರಸ್ತುತ: ರಾಘವೇಂದ್ರ ಡಿ.ಎಂ.

    November 28, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.