ಮಧುಗಿರಿ : ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದಂದು ವಿದ್ಮಹಿ ಪ್ರೊಡಕ್ಷನ್ ಬಿಡುಗಡೆ ಮಾಡಿದ ಜೇಮ್ಸ್ ಚಲನ ಚಿತ್ರ ವೀಕ್ಷಣೆ ಅಭಿಮಾನಿಗಳು ಮುಗಿಬಿದ್ದರು.
ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದ ಬಾಲಾಜಿ ಚಲನಚಿತ್ರ ಮಂದಿರದಲ್ಲಿ ವಿದ್ಮಯಿ ಪ್ರೋಡಕ್ಷನ್ ರವರ ಜೆಮ್ಸ್ ಚಲನ ಚಿತ್ರವು ಪ್ರದರ್ಶನ ಆರಂಭಗೊಂಡಿದ್ದು ಅಪ್ಪು ಅಭಿಮಾನಿಗಳು ಅಪ್ಪು ರವರ ಭಾವಚಿತ್ರವನ್ನು ಹಿಡಿದು ಪ್ರಮುಖ ರಸ್ತೆಗಳಲ್ಲಿ ಬ್ಯಾಂಡ್ ಸೆಟ್ ಬಾರಿಸಿ ಕುಣಿಯುತ್ತಾ , ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಅಪ್ಪು ರವರ ಜನಮ ದಿನವನ್ನು ಆಚರಿಸಿದರು.
ತಾಲ್ಲೂಕಿನ ವಿವಿಧ ಕಡೆ ಜೇಮ್ಸ್ ಚಲನ ಚಿತ್ರವು ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಸಿದ್ದಗೊಳ್ಳುತ್ತಿದ್ದು ಅಪ್ಪು ಅಭಿಮಾನಿಗಳು ದೊಡ್ಡ ದೊಡ್ಡ ಕಟ್ ಓಟ್ ಗಳಿಗೆ ಬೃಹತ್ ಹೂವಿನ ಹಾರ, ಹಾಲಿನ ಅಭಿಷೇಕ ಮಾಡುವುದರೊಂದಿಗೆ ತಮ್ಮ ನೆಚ್ಚಿನ ಚಿತ್ರ ನಟ ಅಪ್ಪುರವರ ಚಲನ ಚಿತ್ರಕ್ಕೆ ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದಾರೆ.
ಯೋಧನ ಲುಕ್ ನಲ್ಲಿರುವ ಪವರ್ ಸ್ಟಾರ್ ಪುನೀತ್ ರವರ ಕಟ್ಓಟ್ ಗಳು ಚಿತ್ರ ಮಂದಿರಗಳು ರಾರಾಜಸಿದವು. ಜೆಮ್ಸ್ ಚಲನ ಚಿತ್ರವು ಸಂಪೂರ್ಣವಾಗಿ ಕುಟುಂಬದವರೆಲ್ಲಾ ಸೇರಿ ನೋಡ ಬೇಕಾದ ಸುಂದರ ಚಿತ್ರವಾಗಿದೆ. ಅನಾಥ ಬಾಲಕರು ಯೋಧರ ಜೊತೆಗೂಡಿ ಮುಂದೆ ಉನ್ನತ ವ್ಯಾಸಂಗ ಹಾಗೂ ಉನ್ನತ ಅಧಿಕಾರಿಗಳಾಗಿ ದೇಶದ ಭವ್ಯವನ್ನು ರೂಪಿಸುವಲ್ಲಿ ತಮ್ಮ ಕರ್ತವ್ಯ ನಿರ್ವಹಿಸುವುದು ಹಾಗೂ ಯುವ ಸಮೂಹ ಡ್ರಗ್ಸ್ ಮಾಫಿಯಾ ಬಲಿಯಾಗುವುದನ್ನು ತಡೆಗಟ್ಟುವುದಾಗಿದೆ ಒಟ್ಟಾರೆ ಯಾಗಿ ಪುನಿತ್ ರವರ ಸ್ಟಂಟ್ಸ್ ಗಳನ್ನು ವಿಭಿನ್ನ ರೀತಿಯಲ್ಲಿ ಕ್ಯಾಮಾರ ಸೆರೆ ಹಿಡಿಯಲಾಗಿದ್ದು ಚಿತ್ರದ ಹಾಡುಗಳು ಸಹ ಮೂಡಿ ಬಂದಿವೆ.
ಚಿತ್ರದಲ್ಲಿ ಡ್ರಗ್ಸ್ ಮಾಫಿಯಾ ಮೂಲವನ್ನು ಪತ್ತೆ ಹಚ್ಚಿ ಸಂಪುರ್ಣವಾಗಿ ಅಪರಾಧ ಕೃತ್ಯಗಳನ್ನು ತಡೆಗಟ್ಟುವುದಾಗಿದ್ದು ಸ್ನೇಹಿತರ ಸಾವಿಗಾಗಿ ಪ್ರತೀಕಾರ ತೀರಿಸಿಕೊಳ್ಳುವ ಉತ್ತಮ ಯೋಧನಾಗಿ ಬಿಂಬಿತರಾಗಿದ್ದಾರೆ. ಒಟ್ಟಾರೆ ಯಾಗಿ ಜೆಮ್ಸ್ ಚಲನ ಚಿತ್ರದಲ್ಲಿ ಪುನೀತ್ ರಾಜ್ ಜೆಮ್ಸ್ ಬಾಂಡ್ ರವರ ರೀತಿಯಲ್ಲಿನ ನಟನೆ ರಾಜ್ಯದ ಕನ್ನಡಿಗರ ಮನಸೂರೆ ಗೊಳ್ಳುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂಬುದು ಅಭಿಮಾನಿಗಳ ಮನದಾಳದ ಮಾತಾಗಿದೆ.
ಬೆಂಗಳೂರಿನ ಚಿತ್ರ ಮಂದಿರಗಳಲ್ಲಿ ಎಲ್ಲೂ ಟಿಕೆಟ್ ಸಿಗುತ್ತಿಲ್ಲ ಆದ ಕಾರಣ ಪ್ರದರ್ಶನದ ಪ್ರಥಮ ಟಿಕೆಟ್ ಪಡೆದು ಕೊಂಡಿರುವುದು ಖುಷಿ ತಂದಿದೆ ಕನ್ನಡ ಚಲನ ಚಿತ್ರಗಳನ್ನು ವೀಕ್ಷಿಸಿ ಕನ್ನಡ ಉಳಿಸಿ ಬೆಳಸಬೇಕಿದೆ ಎಂದು ಅಪ್ಪು ಅಭಿಮಾನಿ ತೊಣಗೊಂಡನಹಳ್ಳಿ ಬಿದರೇಶ್ ತಿಳಿಸಿದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB