4 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಾಲಿವುಡ್ ನಟರೊಬ್ಬರ ಮೇಲೆ ಕೇಸು ದಾಖಲಾಗಿದೆ.
ಕೇರಳದ ಕೋಝಿಕ್ಕೋಡ್ ನಲ್ಲಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವು ನಟ ಕೂಟಿಕಲ್ ಜಯಚಂದ್ರನ್ ವಿರುದ್ಧ ಕೇಳಿ ಬಂದಿದೆ. ಸ್ಥಳೀಯ ಪೊಲೀಸರು ಕೇಸು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.
ತಮ್ಮ ಕುಟುಂಬದೊಳಗಿರುವ ವಿವಾದದ ಲಾಭವನ್ನು ಪಡೆದು ನಟ ತನ್ನ ನಾಲ್ಕು ವರ್ಷದ ಮಗಳಿಗೆ ಕಿರುಕುಳ ನೀಡಿದ್ದಾರೆ ಎಂದು ಮಗುವಿನ ತಾಯಿ ದೂರಿನಲ್ಲಿ ಹೇಳಿದ್ದು, ತಾಯಿ ನೀಡಿದ ದೂರಿನ ಆಧಾರದ ಮೇಲೆ ಕಸಬಾ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಈ ಪ್ರಕರಣದ ಕುರಿತು ನಟ ಜಯಚಂದ್ರನ್ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ. ದೃಶ್ಯಂ ಸಿನಿಮಾ ಸೇರಿ ನಜಾನ್, ಓರು ಸೆಕೆಂಡ್ ಕ್ಲಾಸ್ ಯಾತ್ರಾ, ಲಕ್ಷ್ಯಮ್, ನಾರದನ್, ಮೈಬಾಸ್, ಡಿಟೆಕ್ಟಿವ್ ಸೇರಿ ಹಲವು ಸಿನಿಮಾದಲ್ಲಿ ಜಯಚಂದ್ರನ್ ನಟಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


