ಅಜ್ಜಿ ಮನೆಗೆ ರಜೆ ಕಳೆಯಲು ಬಂದಿದ್ದ ಬಾಲಕ ಟ್ರಾಕ್ಟರ್ ಗೆ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಈ ದುರ್ಘಟನೆಯು ಮೈಸೂರಿನ ನಂಜನಗೂಡು ತಾಲೂಕಿನ ದೇವರಸನಹಳ್ಳಿಯಲ್ಲಿ ನಡೆದಿದೆ. ಭವಿಷ್ (8) ಟ್ರಾಕ್ಟರ್ ಗೆ ಸಿಲುಕಿ ಸಾವನ್ನಪ್ಪಿದ ಬಾಲಕನಾಗಿದ್ದಾನೆ.
ಚಾಮರಾಜನಗರ ವಾಸಿ ತಾಯಿ ಮಮತಾ ತನ್ನ ಮಕ್ಕಳೊಂದಿಗೆ ದೇವರಸನಹಳ್ಳಿಗೆ ಬಂದಿದ್ದರು. ಮಕ್ಕಳಿಗೆ ರಜೆ ನಿಮಿತ್ತ ತನ್ನ ಮಕ್ಕಳ ಅಜ್ಜಿಮನೆಗೆ ಮಕ್ಕಳೂ ಖುಷಿಯಿಂದ ಬಂದಿದ್ದರು. ಮಕ್ಕಳಲ್ಲಿ ಭವಿಷ್ ಎಂಬ 8 ವರ್ಷದ ಹುಡುಗ ತನ್ನ ಸೋದರಮಾವನ ಜೊತೆ ಟ್ರಾಕ್ಟರ್ ಹತ್ತಿ ಜಮೀನಿಗೆ ತೆರಳಿದ್ದ. ಅಲ್ಲಿ ಜಮೀನಿನಲ್ಲಿ ಟ್ರ್ಯಾಕ್ಟರ್ ಹತ್ತಿ ಮಾವನ ಜತೆ ಉಳುಮೆ ಮಾಡುತ್ತಿದ್ದ.
ಈ ಸಂದರ್ಭ ಭವಿಷ್ ಟ್ರಾಕ್ಟರ್ ನಿಂದ ಏಕಾಏಕಿ ಕೆಳಗೆ ಬಿದ್ದಿದ್ದಾನೆ. ಆತನ ಮೇಲೆ ರೊಟಾವೆಲ್ಟರ್ ಹರಿದು ಹೋಗಿದೆ. ಘಟನೆಯಲ್ಲಿ ಆತನ ದೇಹ ಛಿದ್ರ ಛಿದ್ರ ವಾಗಿದೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296