ಕಾರ್ಮಿಕರ ಕ್ಯಾಂಟೀನ್ ಊಟದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ ಘಟನೆ ಕಲಬುರಗಿ ಜಿಲ್ಲೆಯ ಸೇಡಂನಲ್ಲಿರುವ ವಾಸವದತ್ತಾ ಸಿಮೆಂಟ್ ಕಾರ್ಖಾನೆಯಲ್ಲಿ ನಡೆದಿದೆ.
ಎಂದಿನಂತೆ ಊಟ ಸೇವಿಸುತ್ತಿದ್ದಾಗ ಕಾರ್ಮಿಕನೊಬ್ಬನ ಊಟದ ತಟ್ಟೆಯಲ್ಲಿ ಸತ್ತ ಹಲ್ಲಿ ಕಾಣಸಿಕ್ಕಿತ್ತು. ಆತ ಕೂಡಲೇ ಅಲ್ಲಿ ಊಟ ಮಾಡುತ್ತಿದ್ದ ಇತರ ಕಾರ್ಮಿಕರಲ್ಲಿ ಹೇಳಿ ನಿಲ್ಲಿಸಿದ್ದಾನೆ.
ಅದಾಗಲೇ ನೂರಾರು ಕಾರ್ಮಿಕರು ಅದೇ ಕ್ಯಾಂಟೀನ್ ನಲ್ಲಿ ಊಟ ಮಾಡಿ ಹೋಗಿದ್ದರು. ಅವರೆಲ್ಲರೂ ಹಲ್ಲಿ ಸತ್ತು ಬಿದ್ದಿರುವ ಊಟ ಮಾಡಿರುವ ಕಾರಣ, ಇನ್ನೇನಾಗುವುದೋ ಎಂದು ಆತಂಕಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ವಾಸವದತ್ತಾ ಸಿಮೆಂಟ್ ಫ್ಯಾಕ್ಟರಿ ಕ್ಯಾಂಟೀನ್ ನಲ್ಲಿ ಕಾರ್ಮಿಕರಿಗೆ ಬಹಳ ವರ್ಷಗಳಿಂದ ಊಟ ನೀಡಲಾಗುತ್ತಿದೆ. ಕಾರ್ಮಿಕರು ಇಲ್ಲಿ ಟೋಕನ್ ನೀಡಿ ಊಟ ಮಾಡುವುದು ರೂಢಿ.ಗಾಬರಿ ಬಿದ್ದ ಆತ, ಕೂಡಲೇ ಅಲ್ಲಿ ಊಟ ಮಾಡುತ್ತಿದ್ದ ಉಳಿದವರ ಗಮನಕ್ಕೆ ತಂದಿದ್ದಾರೆ.
ಅವರು ಊಟ ಬಿಟ್ಟು ಕೈತೊಳೆದು, ಕೆಲವರು ವಾಂತಿ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಕೂಡಲೇ ಕಂಪನಿ ಆವರಣದಲ್ಲಿರುವ ಆಸ್ಪತ್ರೆಗೆ ಎಲ್ಲರನ್ನೂ ಕರೆಯಿಸಿ ಅಲ್ಲಿ ಪ್ರಥಮ ಚಿಕಿತ್ಸೆಯನ್ನೂ ಒದಗಿಸಲಾಗಿದೆ. ಎಲ್ಲರ ಆರೋಗ್ಯವೂ ಸ್ಥಿರವಾಗಿದೆ ಎಂದು ವರದಿ ಬಂದ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA