ಬೆಂಗಳೂರು: ಕುಡಿದು ಬರ್ತಾನೆ, ಮಲಗಿದ್ದವರ ತಲೆ ಮೇಲೆ ಕಲ್ಲು ಎಸೆದು ಸಾಯಿಸ್ತಾನೆ. ಕೊಲೆಗಾರನನ್ನು ನಗರದ ಬನಶಂಕರಿ ಪೊಲೀಸರು ಕಾರ್ಯಾಚರಣೆ ನಡೆಸಿ ನಟೋರಿಯಸ್ ನ್ನು ಅರೆಸ್ಟ್ ಮಾಡಿದ್ದಾರೆ. ಬನಶಂಕರಿಯ ಗಿರೀಶ್ ಬಂಧಿತ ಆರೋಪಿ. ಆರೋಪಿಯು ಒಂದೇ ವಾರದಲ್ಲಿ ಎರಡು ಕೊಲೆ ಮಾಡಿದ್ದ. ಈ ಕೊಲೆಗಾರನ ಕೃತ್ಯ ಕೇಳಿದರೆ ಗಾಬರಿ ಆಗೋದು ಗ್ಯಾರಂಟಿ. ಈತ ಕುಡಿದು ಬರ್ತಾನೆ, ಬೀದಿ ಬದಿ ಮಲಗಿದ್ದವರ ತಲೆ ಮೇಲೆ ಕಲ್ಲು ಎಸೆದು ಸಾಯಿಸುತ್ತಾನೆ. ಅಲ್ಲಿಂದ ಪರಾರಿಯಾಗ್ತಾನೆ! ಒಂದೇ ವಾರದಲ್ಲಿ ಆರೋಪಿ ಗಿರೀಶ್ ಎರಡು ಕೊಲೆ ಮಾಡಿದ್ದಾನೆ.
ಮೇ.12 ರಂದು ಜಯನಗರ 7ನೇ ಬಡಾವಣೆಯಲ್ಲಿ ವ್ಯಕ್ತಿಯೊಬ್ಬರ ಕೊಲೆಯಾಗಿತ್ತು. ಮೃತದೇಹ ನೋಡಿದಾಗ ಯಾರೋ ಎಳೆದು ತಂದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದಂತೆ ಕಂಡಿತ್ತು. ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ಮೇ.18 ರಂದು ಸಿಟಿ ಮಾರ್ಕೆಟ್ ಹಿಂಭಾಗದ ಕಾಂಪ್ಲೆಕ್ಸ್ ನಲ್ಲಿ ಇದೇ ರೀತಿಯೇ ಮತ್ತೊಂದು ಕೊಲೆ ಆಗಿತ್ತು. ವ್ಯಕ್ತಿಯೋರ್ವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು.
ಘಟನೆ ಸಂಬಂಧ ಕೊಲೆ ಪ್ರಕರಣವನ್ನು ಮಾರ್ಕೆಟ್ ಪೊಲೀಸರು ದಾಖಲಿಸಿಕೊಂಡಿದ್ದರು. ಈ ರೀತಿ ಎರಡು ಪ್ರಕರಣ ಆದ ಬೆನ್ನಲ್ಲೇ ಬನಶಂಕರಿ ಹಾಗೂ ಕೆ.ಆರ್.ಮಾರ್ಕೆಟ್ ಪೊಲೀಸರು ಎಚ್ಚೆತ್ತುಕೊಂಡು ಆರೋಪಿಯ ಹುಡುಕಾಟ ನಡೆಸಿದ್ದರು. ಈಗ ಸೈಕೋ ಕಿಲ್ಲರ್‌ನಂತೆ ವರ್ತನೆ ಮಾಡಿದ್ದ ಆರೋಪಿ ಗಿರೀಶ್ ಅರೆಸ್ಟ್ ಆಗಿದ್ದಾನೆ. ಆರೋಪಿ ಕುಡಿದು ಬಂದು, ಬೀದಿ ಬದಿ ಮಲಗಿದ್ದವರ ತಲೆಮೇಲೆ ಕಲ್ಲೆಸೆದು ಸಾಯಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


