ಇತ್ತೀಚೆಗೆ ಬೆಂಗಳೂರಿನಲ್ಲಿ ರೌಡಿಶೀಟರ್ ಗಳು ಮತ್ತೆ ತಮ್ಮ ಬಾಲ ಬಿಚ್ಚಲು ಶುರು ಮಾಡಿದ್ದು, ಅದರ ಭಾಗವಾಗಿ ಸುಪಾರಿ ಕಿಲ್ಲರ್ ದಿನೇಶ್ ನನ್ನು ಹೋಟೆಲ್ ರೂಮಿನಲ್ಲಿಯೇ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿದ್ದಾರೆ.
ಬೆಂಗಳೂರಿನ ಕಮನಹಳ್ಳಿಯಲ್ಲಿರುವ ಓಯೋ ಹೋಟೆಲ್ ರೂಮ್ ನಲ್ಲಿ ರೌಡಿಶೀಟರ್ ದಿನೇಶ್ ತನ್ನ ಸ್ನೇಹಿತನ ಜೊತೆಗಿದ್ದ. ಈ ಸಮಯದಲ್ಲಿ ಏಳು ಮಂದಿ ದುಷ್ಕರ್ಮಿಗಳು ಇದ್ದಕ್ಕಿದ್ದಂತೆ ಬಂದು ಲಾಂಗು, ಮಚ್ಚುಗಳಿಂದ ದಿನೇಶ್ ನನ್ನು ಬರ್ಬರವಾಗಿ ಕೊಚ್ಚಿ ಮಾಡಿದ್ದಾರೆ.
ಇನ್ನು ಈ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಬಾಣಸವಾಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296