ಚೆನ್ನೈನಿಂದ ಶಸ್ತ್ರಾಸ್ತ್ರಗಳನ್ನು ಹೊತ್ತು ಇಸ್ರೇಲ್ ಗೆ ಸಾಗುತ್ತಿರುವ ಹಡಗಿಗೆ ಸ್ಪೇನ್ ದೇಶ ತನ್ನ ಕಾರ್ಟಗೆನರ ಬಂದರಿನಲ್ಲಿ ನಿಲುಗಡೆಗೆ ಅವಕಾಶ ನಿರಾಕರಿಸಿದೆ ಎಂದು ಸ್ಪೇನ್ ನ ವಿದೇಶ ಸಚಿವ ಜೋಸ್ ಮ್ಯಾನುವೆಲ್ ಅಲ್ಬಾರೆಸ್ ಮಾಹಿತಿ ನೀಡಿದ್ದಾರೆ. ʼಮರಿಯನ್ನೆ ಡೇನಿಕಾʼ ಹೆಸರಿನ ಹಡಗು ಸ್ಪೇನ್ ಬಂದರಿನಲ್ಲಿ ಮೇ 21ರಂದು ನಿಲುಗಡೆಗೆ ಅವಕಾಶ ಕೋರಿತ್ತು.
ಗಾಝಾ ಯುದ್ಧ ಆರಂಭಗೊಂಡಂದಿನಿಂದ ಇಸ್ರೇಲ್ ಗೆ ಎಲ್ಲಾ ಶಸ್ತ್ರಾಸ್ತ್ರ ರಫ್ತು ನಿಷೇಧಿಸುವ ಸ್ಪೇನ್ ನೀತಿಯ ಅನುಸಾರ ಅನುಮತಿ ನಿರಾಕರಿಸಲಾಗಿದೆ ಎಂದು ಸ್ಪೇನ್ ಸಚಿವರು ತಿಳಿಸಿದ್ದಾರೆ. ಡೆನ್ಮಾರ್ಕ್ ಧ್ವಜವಿರುವ ಹಡಗಿನಲ್ಲಿ 27 ಟನ್ ತೂಕದ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ನ ಹೈಫಾ ಬಂದರಿಗೆ ಸಾಗಿಸಲಾಗುತ್ತಿತ್ತು. ಈ ರೀತಿ ಸ್ಪೇನ್ ಬಂದರಿಗೆ ಇಸ್ರೇಲ್ ಗೆ ಹೊರಟಿರುವ ಶಸ್ತ್ರಾಸ್ತ್ರ ಹೊತ್ತ ಹಡಗು ಆಗಮಿಸಿರುವುದು ಮೊದಲನೇ ಬಾರಿ ಇದಾಗಿದ್ದು ಅನುಮತಿ ನಿರಾಕರಿಸಲಾಗಿದೆ ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296