ಗುಜರಾತ್: ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಗುಜರಾತ್ ನ ಮೊರ್ಬಿಯಾದ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ. ಗುಜರಾತ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ ಬೋರ್ಡ್ ಫಲಿತಾಂಶ ಮೇ 11 ರಂದು ಪ್ರಕಟವಾಗಿದೆ. ಹೀರ್ ಘೆಟಿಯಾ ಎಂಬಾಕೆ 10 ನೇ ತರಗತಿ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ್ದಾಳೆ. ಆಕೆಗೆ ಮೆದುಳಿನ ರಕ್ತಸ್ರಾವವಾಗಿದ್ದು, ಒಂದು ತಿಂಗಳ ಹಿಂದೆ ರಾಜ್ ಕೋಟ್ ನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು.
ಶಸ್ತ್ರಚಿಕಿತ್ಸೆಯ ನಂತರ ಡಿಸ್ಚಾರ್ಜ್ ಕೂಡ ಆಗಿ ಮನೆಗೆ ತೆರಳಿದ್ದಳು. ಆದರೆ ವಾರದ ಹಿಂದೆ ಆಕೆಯಲ್ಲಿ ಮತ್ತೆ ಉಸಿರಾಟ ಮತ್ತು ಹೃದಯದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಿಸಲಾಯಿತು. ಎಂಆರ್‌ಐ ವರದಿಯಲ್ಲಿ 80% ರಿಂದ 90% ರಷ್ಟು ಆಕೆಯ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ತೋರಿಸಿದೆ. ಆಕೆಯ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿದ ನಂತರ ಹೀರ್ ಬುಧವಾರ ನಿಧನರಾದಳು. ಬಳಿಕ ಆಕೆಯ ಕಣ್ಣುಗಳು ಮತ್ತು ಆಕೆಯ ದೇಹವನ್ನು ಪೋಷಕರು ದಾನ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296