ಬೆಂಗಳೂರು: ನಿಗೂಢತೆ ಹೊಂದಿದ್ದ ಸಾವು ಅದು. ಪೊಲೀಸರಿಗೇ ಹಾಗು ವೈದ್ಯರಿಗೇ ಕನ್ಪ್ಯೂಸ್ ಆಗುವಷ್ಟರ ಮಟ್ಟಿಗೆ ಈ ಕೃತ್ಯ ನಡೆದಿದೆ. ಆದರೆ ಇದು ಉದ್ದೇಶಪೂರ್ವಕವಾಗಿ ನಡೆದ ಹತ್ಯೆ ಅಲ್ಲ. ಅದೊಂದು ಸಾಕ್ಷಿ ಇಲ್ಲದಿದ್ದರೆ ಇದೊಂದು ಆತ್ಮಹತ್ಯೆ ಎಂದೇ ವರದಿಯಾಗಿರ್ತಿತ್ತು. ಅಷ್ಟಕ್ಕೂ ನಡೆದ ಘಟನೆ ಏನು. ಯಾವುದು ಆ ಸಾಕ್ಷಿ? ಡಿಟೇಲ್ಸ್ ಇಲ್ಲಿದೆ. ಸುಬ್ರಹ್ಮಣ್ಯಪುರ ಪ್ರಬುಧ್ಯ ಸಾವು ಪ್ರಕರಣ ಕೊನೆಗೂ ನಿಗೂಢತೆ ಬಯಲಾಗಿದೆ.
ಸುಬ್ರಹ್ಮಣ್ಯಪುರ ಪೊಲೀಸರು, ಅಪ್ರಾಪ್ತ ಬಾಲಕನನ್ನ ಬಂಧಿಸಿದ್ದಾರೆ. ಆತ್ಮಹತ್ಯೆಯಂತೆ ಬಿಂಬಿತವಾದ ಕೇಸ್ ಕೊನೆಗೂ ಸಾಲ್ವ್ ಆಗಿದ್ದು ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನ ವಿಚಾರಣೆ ನಡೆಸಿ ರಿಮ್ಯಾಂಡ್ ಹೋಂಗೆ ಕಳಿಸಲಾಗಿದೆ. ಪ್ರಬುದ್ಧಾಳ ತಾಯಿ ಸೌಮ್ಯ, ಘಟನೆ ಬಗ್ಗೆ ಗೊತ್ತಾದ ಕೂಡಲೇ ಇದೊಂದು ಕೊಲೆ ಎಂದೇ ಆರೋಪಿಸಿ ಅದೇ ರೀತಿ ಪ್ರಕರಣ ದಾಖಲಿಸಿದ್ದರು. ಪೊಲೀಸರಿಗೂ ಕೂಡ ಈ ಪ್ರಕರಣದಲ್ಲಿ ಇಬ್ಬದಿ ನೀತಿ ಇತ್ತು. ಮನೆ ಮುಂಭಾಗದ ಸಿಸಿಟಿವಿಗಳನ್ನ ಪರಿಶೀಲನೆ ನಡೆಸಿದಾಗಲೂ ಯಾರ ಚಲನವಲನಗಳು ಇರಲಿಲ್ಲ. ಆದರೆ ಅದೊಂದು ಸಿಸಿಟಿವಿ ಹಾಗು ಪೊಲೀಸರ ಶಂಕೆ ಅಪ್ರಾಪ್ತನ ಕೃತ್ಯ ಬಯಲಿಗೆ ಬಂದಿದೆ.
ಅಪ್ರಾಪ್ತ ಬಾಲಕ ಪ್ರಭುದ್ದ್ಯಾಳ ಸಹೋದರನ ಸ್ನೇಹಿತ. ಮನೆಗೆ ಬಂದು ಹೋಗವಷ್ಟು ಸಲುಗೆ ಇತ್ತು. ತೆಂಗಿನಕಾಯಿ – ಬೆಲ್ಲವನ್ನು ಒಟ್ಟಿಗೇ ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನವಿದೆ ಗೊತ್ತಾ..? . ಒಂದು ದಿನ ಪ್ರಭುದ್ಯಾಳ ಪರ್ಸ್ ನಿಂದ ಅಪ್ರಾಪ್ತ ಬಾಲಕ 2000 ನಗದು ಕದ್ದಿದ್ದ. ಇದನ್ನ ಪ್ರಭುದ್ಯಾ ನೋಡಿದ್ದಳು. ಆದರೆ ಅಂದು ಆಕೆ ಅವನನ್ನ ಕೇಳಿರಲಿಲ್ಲ. ಇತ್ತ ಅಪ್ರಾಪ್ತ ಬಾಲಕ ತನ್ನ ಸ್ನೇಹಿತನ ಜೊತೆ ಆಡುವಾಗ ಆತನ ಕನ್ಬಡ್ಕ ಒಡೆದು ಹಾಕಿದ್ದ. ಅದನ್ನ ರೆಡಿ ಮಾಡಿಸಿಕೊಡಲು ಒತ್ತಾಯ ಮಾಡಿದ್ದ. ಅಪ್ರಾಪ್ತನ ಪೋಷಕರು ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರು. ಸ್ವಲ್ಪ ಶಿಸ್ತು ಹೆಚ್ಚು. ಹೀಗಾಗಿ ಅವರ ಬಳಿಕ ಕನ್ನಡಕ ಒಡೆದದ್ದು ಹೇಳಿದರೆ ಬೈತಾರೆ ಎಂಬ ಕಾರಣಕ್ಕೆ ಸ್ನೇಹಿತನ ಕನ್ನಡಕ ಸರಿ ಮಾಡಲು ಬೇರೆ ಮಾರ್ಗ ಹಿಡಿದಿದ್ದ ಅದೇ ಕಳ್ಕತನ. ಪ್ರಬುದ್ದಳಾ ಹಣ ಕದ್ದು ಕನ್ನಡಕ ಸರಿ ಮಾಡಿಕೊಟ್ಟಿದ್ದ.
ಇದೇ 15 ರಂದು ಪ್ರಬುದ್ದಾ ಅಪ್ರಾಪ್ತನನ್ನ ಕರೆದು ಕದ್ದಿರೋದನ್ನ ನೋಡಿದ್ದೇನೆಂದು ಹೇಳಿದ್ದಳು. ಈ ವೇಳೆ ತಂದೆ ತಾಯಿಗೆ ಎಲ್ಲಿ ಹೇಳ್ತಾಳೆ ಎಂಬ ಭಯಕ್ಕೆ ಅಪ್ರಾಪ್ತ ಆರೋಪಿ ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದ. ಈ ವೇಳೆ ಪ್ರಬುದ್ದಾ ಎಡವಿ ಬಿದ್ದು ಪ್ರಜ್ಞೆ ತಪ್ಪಿದ್ದಾಳೆ. ಭಯಗೊಂಡ ಯುವಕ ಎಲ್ಲಿ ತನ್ನ ಮೇಲೆ ಆರೋಪ ಬರುತ್ತೋ ಎಂಬ ಕಾರಣಕ್ಕೆ ಆಕೆ ಈ ಹಿಂದೆ ಕೈ ಕುಯ್ದುಕೊಂಡ ಜಾಗದಲ್ಲೆ ನೀಟಾಗಿ ಚಾಕುವಿನಿಂದ ಡೀಪಾಗಿ ಕುಯ್ದು ನಂತರ ಕುತ್ತಿಗೆ ಕುಯ್ದು ಹಿಂಬದಿ ಬಾಗಿಲಿನಿಂದ ಎಸ್ಕೇಪ್ ಆಗಿದ್ದ. ನಂತರ ಮನೆ ಹಿಂಬದಿಯಿಂದ ಪರಿಶೀಲನೆ ನಡೆಸಿದಾಗ ಅಪ್ರಾಪ್ತನ ಚಲನವಲನ ಕಂಡು ಬಂದಿದೆ. ಅವನನ್ನ ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಹೊರ ಬಂದಿದೆ. ಹಳೆಯ ಗುರುತಿನ ಮೇಲೆ ಚಾಕುವಿನಿಂದ ಕುಯ್ದ ಹಿನ್ನಲೆ ಇದೊಂದು ಆತ್ಮಹತ್ಯೆ ಎಂದೇ ಬಿಂಬಿತವಾಗಿತ್ತು. ಆದ್ರೆ ಪೊಲೀಸರ ಅನುಮಾನದಿಂದ ಅಸಲಿ ಸಂಗತಿ ಹೊರಬಿದ್ದಿದೆ. ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


