ಉತ್ತರಪ್ರದೇಶ: ಪ್ರೇಮಿಯೊಂದಿಗೆ ಜಗಳವಾಡಿದ ಮಹಿಳೆಯೊಬ್ಬರು, ನಾನು ರೈಲಿನಡಿ ಬಿದ್ದು ಸಾಯುತ್ತೇನೆ ಎಂದು ಪ್ರಿಯಕರನನ್ನು ಹೆದರಿಸಲು ಹೋಗಿ, ನಿಜವಾಗಲು ಆಕಸ್ಮಿಕವಾಗಿ ರೈಲಿನಡಿ ಸಿಲುಕಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಉತ್ತರ ಪ್ರದೇಶದಲ್ಲಿನ ಆಗ್ರಾದ ರಾಜಾ ಕಿ ಮಂಡಿ ರೈಲು ನಿಲ್ದಾಣದಲ್ಲಿ ನಡೆದಿದೆ.
ಗೆಳೆಯನೊಂದಿದೆ ಜಗಳವಾಡಿದ ಮಹಿಳೆಯೊಬ್ಬರು, ಸಿಟ್ಟಿನಿಂದ ರೈಲ್ವೆ ಹಳಿಗೆ ಹಾರಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸಾವನ್ನಪ್ಪಿದ ಮಹಿಳೆಯನ್ನು ಲೋಹಾ ಮಂಡಿಯ ಭಾರತಿ ಧರ್ಮೇಂದ್ರ ಎಂದು ಗುರುತಿಸಲಾಗಿದೆ. ಭಾರತಿ ಎಂಬವರಿಗೆ ಪೂನಂ ಮತ್ತು ಕೃಷ್ಣ ಎಂಬ ಇಬ್ಬರು ಮಕ್ಕಳಿದ್ದು, ಕೆಲ ವರ್ಷಗಳ ಹಿಂದೆ ಆಕೆಯ ಪತಿ ಧರ್ಮೇಂದ ಮೃತಪಟ್ಟಿದ್ದರು. ಕಳೆದ ಎರಡು ವರ್ಷಗಳಿಂದ ಭಾರತಿ ತನ್ನ ಪ್ರೇಮಿ ಕಿಶೋರ್ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು.
ಕುಡಿತದ ವಿಷಯದಲ್ಲಿ ಇಬ್ಬರ ನಡುವೆ ಜಗಳ ಏರ್ಪಟ್ಟಿದ್ದು, ಆಕೆ ರೈಲ್ವೆ ನಿಲ್ದಾಣದ ಬಳಿ ಬಂದು ತಾನು ಸಾಯುವುದಾಗಿ ಪ್ರಿಯಕರನನ್ನು ಹೆದರಿಸುತ್ತಾರೆ. ನಂತರ ರೈಲ್ವೆ ಹಳಿಯ ಮೇಲೆ ಜಿಗಿಯಲು ಹೋಗಿದ್ದು, ಆಕಸ್ಮಿಕವಾಗಿ ಬಿದ್ದಿದ್ದಾರೆ. ಅಷ್ಟರಲ್ಲಿ ವೇಗವಾಗಿ ಬಂದ ಕೇರಳ ಎಕ್ಸ್ ಪ್ರೆಸ್ ರೈಲು ಆಕೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಪ್ರೇಮಿ ಅಲ್ಲಿಂದ ಓಡಿದ್ದಾನೆ. ಈ ಕುರಿತು ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


