ಇಂದು ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ಬಾರಿ ದಸರಾಕ್ಕೆ ಬಾಸ್ ಹೊರ ಬರಬೇಕು ಅಂತ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ದರ್ಶನ್ ಪರವಾಗಿ ವಾದ ಮಂಡಿಸಲು ವಕೀಲರು ಸಿದ್ಧತೆ ನಡೆಸಿದ್ದಾರೆ.
ಪೊಲೀಸರು ಸಾಕ್ಷಿಗಳನ್ನ ಸೃಷ್ಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ನಟ ದರ್ಶನ್ ಪರ ವಕೀಲರು ವಾದ ಮಾಡುವ ಸಾಧ್ಯತೆಗಳಿವೆಯಂತೆ. ದರ್ಶನ್ ಕರೆ ಮಾಡಿರುವುದು ತನ್ನ ಸ್ನೇಹಿತರಿಗೆ. ಅವರು ಎಂದಿನಂತೆ ಕರೆ ಮಾಡಿದ್ದಾರೆ, ಅವರ ರೆಗ್ಯುಲರ್ ಸಂಪರ್ಕದಲ್ಲಿರುವವರನ್ನು ಮಾತ್ರವೇ ಅವರು ಸಂಪರ್ಕಿಸಿದ್ದಾರೆ ಎಂದು ವಾದಿಸಲಿದ್ದಾರೆನ್ನಲಾಗಿದೆ.
ಕೊಲೆ ನಡೆದ ಹಲವು ದಿನಗಳ ನಂತರ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ನಾಲ್ಕು ದಿನಗಳ ಬಳಿಕ ಮೃತದೇಹದ ತಪಾಸಣೆ ನಡೆದಿದೆ. ಈ ನಿಧಾನ ಪ್ರಕ್ರಿಯೆ ಬಗ್ಗೆಯೂ ತನಿಖಾಧಿಕಾರಿಗಳೂ ಸಂಪೂರ್ಣ ವಿವರ ನೀಡಿಲ್ಲ ಎಂದಿದ್ದಾರೆ. ಇನ್ನು ಮೃತ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ಅಸ್ಪಷ್ಟವಾದ ವರದಿ ನೀಡಿದ್ದಾರೆ. ರೇಣುಕಾಸ್ವಾಮಿ ಸಾವಿಗೆ ನಿಖರವಾದ ಕಾರಣ ಹಾಗೂ ಸಾವಿನ ಅವಧಿ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲ ಎಂದು ದರ್ಶನ್ ಪರ ವಕೀಲರು ವಾದ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಅಲ್ಲಿ ಸಿಕ್ಕಿರುವ ಸಿಸಿಟಿವಿ ಸಾಕ್ಷಿಗಳಲ್ಲಿ ನಟ ದರ್ಶನ್ ಅವರ ಇರುವಿಕೆ, ಕೊಲೆ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವುದಂತಹ ಯಾವುದೇ ಮಾಹಿತಿ ಸಿಕ್ಕಿಲ್ಲ. ಅಲ್ಲಿ ನಡೆದಿದೆ ಎಂದಿರುವುದಕ್ಕೂ ವೈದ್ಯರು ನೀಡಿರುವ ವರದಿಗೂ ಅಜಗಜಾಂತರ ವ್ಯತ್ಯಾಸವಿದೆ. ತಾಂತ್ರಿಕ ಸಾಕ್ಷ್ಯಗಳು ಹಾಗು ದಾಖಲಾಗಿರುವ ಹೇಳಿಕೆಗಳಿಗೂ ಹೊಂದಾಣಿಕೆ ಇಲ್ಲ. ಇದನ್ನೆಲ್ಲ ಗಮನಿಸಿದರೆ ಈ ಕೃತ್ಯದಲ್ಲಿ ದರ್ಶನ್ ಅವರ ಪಾತ್ರವೇ ಇಲ್ಲ ಎಂಬುದು ಕಂಡುಬರುತ್ತಿದೆ ಎಂದು ವಾದಿಸುವ ಸಾಧ್ಯತೆ ಇದೆಯಂತೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296