ತುಮಕೂರು: ಭಾರತೀಯ ವಾಯುಪಡೆಯಲ್ಲಿ ಖಾಲಿಯಿರುವ ಏರ್ ಮ್ಯಾನ್ ಗ್ರೂಪ್ ‘ವೈ’(ವೈದ್ಯಕೀಯ ಸಹಾಯಕ ವೃತ್ತಿ) ಹಾಗೂ ಅಗ್ನಿವೀರ್ ವಾಯು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಗಾಗಿ ಜನವರಿ 29 ರಿಂದ ಫೆಬ್ರವರಿ 6ರವರೆಗೆ ನೇಮಕಾತಿ ರ‍್ಯಾಲಿ ಏರ್ಪಡಿಸಲಾಗಿದೆ.
ನೇಮಕಾತಿ ರ‍್ಯಾಲಿಯು ಜನವರಿ 29 ರಿಂದ ಫೆಬ್ರವರಿ 6ರವರೆಗೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಕೇರಳ ರಾಜ್ಯ ಕೊಚ್ಚಿಯ ಎರ್ನಾಕುಲಂ ಪಿ.ಟಿ. ಉಷಾ ರಸ್ತೆಯ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ವಾಯುಪಡೆಯ ಗ್ರುಪ್ ‘ವೈ’(ತಾಂತ್ರಿಕವಲ್ಲದ) ವೈದ್ಯಕೀಯ ಸಹಾಯಕ ಹುದ್ದೆಯ ಆಯ್ಕೆಗೆ ಜನವರಿ 29ರಂದು ನಡೆಯಲಿರುವ ನೇಮಕಾತಿ ರ‍್ಯಾಲಿಯಲ್ಲಿ 10+2 ವಿದ್ಯಾರ್ಹತೆ ಹೊಂದಿದ ಹಾಗೂ 2004ರ ಜುಲೈ 3 ಮತ್ತು 2008ರ ಜುಲೈ 3ರ ನಡುವೆ ಜನಿಸಿರುವ ಅವಿವಾಹಿತ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ವಾಯುಪಡೆಯ ಗ್ರುಪ್ ‘ವೈ’ ವೈದ್ಯಕೀಯ ಸಹಾಯಕ ಹುದ್ದೆಯ ಆಯ್ಕೆಗೆ ಫೆಬ್ರವರಿ 4ರಂದು ನಡೆಯಲಿರುವ ನೇಮಕಾತಿ ರ‍್ಯಾಲಿಯಲ್ಲಿ ಫಾರ್ಮಸಿಯಲ್ಲಿ ಡಿಪ್ಲೊಮಾ/ಬಿಎಸ್ಸಿ ಪದವಿ ಹೊಂದಿರುವ 2001ರ ಜುಲೈ 3 ಮತ್ತು 2006ರ ಜುಲೈ 3ರ ನಡುವೆ ಜನಿಸಿರುವ ಅವಿವಾಹಿತ ಅಭ್ಯರ್ಥಿಗಳು ಹಾಗೂ 2001ರ ಜುಲೈ 3 ಮತ್ತು 2004ರ ಜುಲೈ 3ರ ನಡುವೆ ಜನಿಸಿರುವ ವಿವಾಹಿತ ಅಭ್ಯರ್ಥಿಗಳು ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಯನ್ನು ವೆಬ್ ಸೈಟ್-–www.airmenselection.cdac.in ನಿಂದ ಪಡೆಯಬಹುದು.
ಅಗ್ನಿವೀರ್ ವಾಯು ಹುದ್ದೆಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2005ರ ಜನವರಿ 1 ಮತ್ತು 2008ರ ಜುಲೈ 1ರ ನಡುವೆ ಜನಿಸಿದವರಾಗಿರಬೇಕು. ಶೈಕ್ಷಣಿಕ ಅರ್ಹತೆ, ಪ್ರವೇಶ ಮಟ್ಟದ ವಿದ್ಯಾರ್ಹತೆ, ವೈದ್ಯಕೀಯ ಮಾನದಂಡ, ನಿಯಮ ಮತ್ತು ಷರತ್ತುಗಳು, ಆನ್‌ಲೈನ್ ಅರ್ಜಿ ಭರ್ತಿ ಮಾಡುವ ವಿವರವಾದ ಮಾಹಿತಿಗಾಗಿ ವೆಬ್ ಪೋರ್ಟಲ್ https://agnipathvayu.cdac.in ಮೂಲಕ ಪಡೆಯಬಹುದಾಗಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಜನವರಿ 27 ಕಡೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ತುಮಕೂರು ದೂ.ವಾ.ಸಂ. 0816–2278488ನ್ನು ಸಂಪರ್ಕಿಸಬಹುದಾಗಿದೆ ಎಂದು ಉದ್ಯೋಗಾಧಿಕಾರಿ ಕಿಶೋರ್ ಕುಮಾರ್ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx