ತುರುವೇಕೆರೆ: ತಾಲೂಕು ಕಸಬಾ ಹೋಬಳಿ ಬುಗುಡನಹಳ್ಳಿ ಗ್ರಾಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ನಾಮಕರಣ ಫಲಕ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಎಪಿಎಂಸಿ ಅಧ್ಯಕ್ಷರು ಹಾಗೂ ಹಾಲಿ ಗ್ರಾಮ ಪಂಚಾಯತಿ ಸದಸ್ಯರಾದ ನರಸಿಂಹರಾಜು ಅವರು ವಹಿಸಿದ್ದರು. ಅಂಬೇಡ್ಕರ್ ವೃತ್ತದ ನಾಮಫಲಕ ಉದ್ಘಾಟನೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತುರುವೇಕೆರೆ ತಾಲೂಕು ಸಂಚಾಲಕರಾದ ಡಾ.ಟಿ.ಆರ್.ಚಂದ್ರಯ್ಯನವರು ನೆರವೇರಿಸಿದರು.
ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಘಟನಾ ಸಂಚಾಲಕ ಕುಮಾರ್ ಕ್ರಾಂತಿ ಗೀತೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಕಿರಣ್ ಕುಮಾರ್ ಸ್ವಾಗತವನ್ನ ಕೋರಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಚಂದ್ರಯ್ಯ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಶಕ್ತಿ. ಆ ವ್ಯಕ್ತಿಯು ಅಸ್ಪೃಶ್ಯತೆಯ ನೋವಿನಲ್ಲಿ ನೊಂದು ನಾವು ಜಾತಿಯಿಂದ ವಿಮುಕ್ತಿ ಹೊಂದಲು ಹೋರಾಟ ನಡೆಸಿದರು. ಶಾಲೆಯ ಮೆಟ್ಟಿಲನ್ನೇ ನೋಡದವರು ಇಂದು ಬಾಬಾ ಸಾಹೇಬರ ಹೋರಾಟದಿಂದ ವಿದ್ಯಾವಂತರಾಗುವ ಕಾಲ ಬಂತು ಎಂದರು.
ಅಂಬೇಡ್ಕರ್ ಅವರು ಬಿಟ್ಟು ಹೋದ ಹೋರಾಟವನ್ನು ಇಂದು ಈ ಗ್ರಾಮದ ಯುವಕರು ಮುಂದುವರಿಸಬೇಕಿದೆ. ಈ ವೃತ್ತಕ್ಕೆ ಬಾಬಾ ಸಾಹೇಬರ ಹೆಸರನ್ನು ಇಟ್ಟಿದ್ದಾರೆ. ಮುಂದಿನ ದಿನಗಳಲ್ಲೂ ತಾವುಗಳು ವಿದ್ಯಾವಂತರಾಗಿ ಆರ್ಥಿಕವಾಗಿ ಸದೃಢರಾಗಿ ಎಂದರು.
ಈ ಸಮಾರಂಭದಲ್ಲಿ ಬಾಣಸಂದ್ರ ಗ್ರಾಮ ಪಂಚಾಯಿತಿಯ ಸದಸ್ಯರಾದ ಲೋಕೇಶ್ , ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷರಾದ ನರಸಿಂಹಮೂರ್ತಿ, ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧಕ ಗಂಗಾಧರ್, ರೈಲ್ವೆ ಇಲಾಖೆ ನಿವೃತ್ತ ನೌಕರರಾದ ಚೆನ್ನಪ್ಪ, ರಾಮಡಿಹಳ್ಳಿ ವಿನಯ್ , ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಡೊಂಕಿಹಳ್ಳಿ ರಾಮಣ್ಣ, ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಜಗದೀಶ್ , ಪುರ ರಾಮಚಂದ್ರ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಗ್ರಾಮ ಪಂಚಾಯತಿ ಸದಸ್ಯ ರಾಘವೇಂದ್ರ, ಹೊನ್ನೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಜಯಣ್ಣ , ದಲಿತ ಸಂಘರ್ಷ ಸಮಿತಿಯ ನಗರ ಘಟಕದ ಅಧ್ಯಕ್ಷ ಶಿವಣ್ಣ, ಸಂಚಾಲಕರಾದ ಹೊನ್ನೇನಹಳ್ಳಿ ಕೃಷ್ಣಪ್ಪ ,ಸಂಪಿಗೆ ಹೊಸಳ್ಳಿ ವಿ ಎಸ್ ಎಸ್ ಎನ್ ನಿರ್ದೇಶಕರಾದ ಕಿರಣ್ ಕುಮಾರ್, ಬುಗುಡನಹಳ್ಳಿ ಗ್ರಾಮದ ಯುವಕರು ಹಾಗೂ ಮಹಿಳೆಯರು ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಸುರೇಶ್ ಬಾಬು ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz