ಮಧುಗಿರಿ: ಅಂಗನವಾಡಿ ಕಾರ್ಯಕರ್ತೆಯ ಕಾರ್ಯನಿರ್ವಹಣೆಯ ಬಗ್ಗೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ತಾಲ್ಲೂಕಿನ ಐ ಡಿ ಹಳ್ಳಿ ಹೋಬಳಿಯ ಹೊಸ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಅಂಗನವಾಡಿ ಕಾರ್ಯಕರ್ತೆಯು ಮಕ್ಕಳ ಆಹಾರ ಸಾಮಗ್ರಿಗಳನ್ನು ಕೇಳಲು ಹೋದಾಗ ಉಡಾಫೆ ಉತ್ತರಕೊಡುತ್ತಿದ್ದು, ಗ್ರಾಮಸ್ಥರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಪೋಷಕರಾದ ನಾಗಮಣಿ ಎಂಬವರು ಆಕ್ರೋಶ ವ್ಯಕ್ತಪಡಿಸಿದರು. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿಲ್ಲ, ಮೊಟ್ಟೆಯೂ ಕೊಡುತ್ತಿಲ್ಲ ಎಂದು ಸಾವಿತ್ರಮ್ಮ ಎಂಬವರು ಆರೋಪಿಸಿದರು.
ಅಂಗನವಾಡಿ ಕಾರ್ಯಕರ್ತೆಯ ಪತಿ ಪೋಷಕರ ಮನೆ ಮುಂದೆ ಹೋಗಿ ಗಲಾಟೆ ಮಾಡುತ್ತಿದ್ದಾರೆ. ಅಕ್ಷರ ಕಲಿಸಬೇಕಾದ ಶಿಕ್ಷಕಿ ಏಕವಚನದಲ್ಲಿ ಬೈಯ್ಯುತ್ತಾರೆ. ಮುಗ್ದ ಜನಗಳ ಬಳಿ ದುರಹಂಕಾರದಿಂದ ಮಾತನಾಡುತ್ತಾರೆ. 3 ದಿನಗಳಿಂದ ಅನಾವಶ್ಯಕವಾಗಿ ಅಂಗನವಾಡಿಯ ಬಾಗಿಲು ತೆರೆದಿಲ್ಲ ಎಂದು ಗ್ರಾಮಸ್ಥರು ಆರೋಪಗಳ ಸುರಿಮಳೆ ಸುರಿಸಿದ್ದಾರೆ.
ಈ ಭಾಗದ ಇಲಾಖೆಯ ಸಂಬಂಧಪಟ್ಟ ಮೇಲಧಿಕಾರಿಗಳು ಗಡಿ ಭಾಗಗಳಿಗೆ ಹೋಗಿ ಕುಂದುಕೊರತೆ ಸಭೆಗಳನ್ನು ನಡೆಸಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಮ್ಮ ಊರಲ್ಲಿ ಈ ಕಾರ್ಯಕರ್ತೆ ಕಾರ್ಯನಿರ್ವಹಿಸುವುದು ಬೇಡ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz