ತುಮಕೂರು: ಗೃಹ ಸಚಿವರನ್ನು ಮೆಚ್ಚಿಸಲು ಸಾರ್ವಜನಿಕ ಜೀವನದ ಜೊತೆಗೆ ಎತ್ತಿನಹೊಳೆ ಅಧಿಕಾರಿಗಳು ಚೆಲ್ಲಾಟ ವಾಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಜಟ್ಟಿ ಅಗ್ರಹಾರ ನಾಗರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎತ್ತಿನಹೊಳೆ C E ವರದಯ್ಯ ಎಸಿ ರೂಮ್ನ ಲ್ಲಿ, ಜಮೀನು ಕಳಕೊಂಡ ರೈತರು ಬೀದಿಲ್ಲಿ, ನಮ್ಮನ್ನಾಳುವ ಜನಪ್ರತಿನಿಧಿಗಳಿಗೆ ಪರ್ಸೆಂಟೇಜ್ ದುಡ್ಡು ಸೂಟ್ಕೇಸ್ ನಲ್ಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯ ಕಾಲುವೆ ಕಾಮಗಾರಿಗಳಲ್ಲಿ ಪ್ರಮುಖವಾಗಿ ಇರಕಸಂದ್ರ ಕಾಲೋನಿ ಮತ್ತು ಲಕ್ಕೇನಹಳ್ಳಿ ಭಾಗದ ಕಾಮಗಾರಿಗಳಲ್ಲಿ ಯಾವುದೇ Third party Quality Control Team ಇಲ್ಲದೆ ಅಧಿಕಾರಿಗಳು ನೂರಾರು ಕೋಟಿ ಬಿಲ್ಲುಗಳು ಪಾವತಿ ಮಾಡಿದ್ದಾರೆ ಅಂತ ನಾಗರಾಜು ಆರೋಪಿಸಿದ್ದಾರೆ.
ನಿಯಮಗಳನ್ನ ಪಾಲಿಸದೆ ಎಗ್ಗಿಲ್ಲದೆ ಹಗಲು ರಾತ್ರಿ ಬ್ಲಾಸ್ಟಿಂಗ್ ಮಾಡಿ ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡಲಾಗುತ್ತಿದೆ. ಈ ಬಗ್ಗೆ ಗಮನ ಹರಿಸದೇ ಅಧಿಕಾರಿಗಳು ಕಣ್ಮುಚ್ಚಿ ಬೆಚ್ಚನೆ ಕುಳಿತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ತನಿಖಾ ಸಂಸ್ಥೆಗಳಿಂದ ತನಿಖೆ ಮಾಡಿದರೆ ಎತ್ತಿನಹೊಳೆ ಯೋಜನೆಯ ಬಂಡವಾಳ ಹೊರಬೀಳಲಿದೆ. ಲಕ್ಕೇನಹಳ್ಳಿ ಭಾಗದ ಕಾಮಗಾರಿಗಳಲ್ಲಿ ಯಾವುದೇ Third party Quality Control Team ಇಲ್ಲದೆ ನೂರಾರು ಕೋಟಿ ಬಿಲ್ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಮಧುಗಿರಿ ಕಾರ್ಯಪಾಲಕ ಅಭಿಯಂತರರಾದ ಬಸವೇಗೌಡ ರವರು ಕಚೇರಿಯಲ್ಲಿ ಕಾಣಸಿಗುವುದೇ ಅಪರೂಪ, ಫೋನ್ ಕರೆ ಸ್ವೀಕರಿಸುವುದಿಲ್ಲ ಹೀಗಿರುವಾಗ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ರೈತರ ಸಮಸ್ಯೆ ಅಂತ್ಯಗೊಳಿಸಲು ಇವರಿಂದ ಸಾಧ್ಯವೇ? ಅಂತ ನಾಗರಾಜು ಪ್ರಶ್ನಿಸಿದ್ದಾರೆ.
ಮುಖ್ಯ ಇಂಜಿನಿಯರ್ ವರದಯ್ಯರನ್ನ ಅಧಿಕಾರಿ ವರ್ಗ ಪರದಾಡುವಂತೆ ಮಾಡಿದ್ದಾರೆ. ಎಲ್ಲೆಲ್ಲೂ ಡಂ ಡಂ ಡಂ ಶಬ್ದ ಕೇಳಿ ಬರುತ್ತಿದ್ದರೂ ಅಧಿಕಾರಿಗಳು ಕ್ಯಾರೇ, ಅನ್ನುತ್ತಿಲ್ಲ ಕಾಮಗಾರಿ ಓಕೆ. ಪರಿಹಾರ ಬಂದಿಲ್ಲ ಯಾಕೆ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ರೈತರ ಖಾತೆಗೆ ಹಣ ಬರದೆ ಅವಾರ್ಡ್ ಆಗ್ದೇ ನಿಮಗೆ ಕೆಲಸ ಮಾಡೋ ಅಧಿಕಾರ ಕೊಟ್ಟವರು ಯಾರು? ಹಾಡ ಹಗಲೇ ಬ್ಲಾಸ್ಟಿಂಗ್ ಮಾಡಲು ಅವಕಾಶ ನೀಡಿದ್ದಾರಾ..? ಎತ್ತಿನಹೊಳೆ ಅಧಿಕಾರಿ AEE ಅಶ್ವತ್ಥ್ ಕುಮಾರ್ EE ಮುರಳಿಧರ್ ಎಂದು ನಾಗರಾಜು ಪ್ರಶ್ನಿಸಿದ್ದಾರೆ.
ಬ್ಲಾಸ್ಟಿಂಗ್ ನಿಂದಾಗಿ ಗ್ರಾಮಕ್ಕೆ ದಪ್ಪ ದಪ್ಪ ಕಲ್ಲುಗಳು ಬಿದ್ದಿವೆ. ಇದರಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನೀಲಗೊಂಡನಹಳ್ಳಿ ಸುತ್ತ ಮುತ್ತಿನ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಮಧ್ಯಾಹ್ನ ಸಿಡಿಸಿದ ಸಿಡಿ ಮದ್ದು ನೀಲಗೊಂಡನಹಳ್ಳಿ ಅಂಗಡಿ ಸೀಟ್ ಮನೆಗಳಿಗೆ ಸಿಡಿದಿದೆ. ಸಿಡಿಮದ್ದಿನಿಂದ ಬಿದ್ದ ಕಲ್ಲುಗಳಿಂದ ಕೂದಲು ಎಳೆಯಲಿ ವೃದ್ಧರು ಸಾರ್ವಜನಿಕರು ಪಾರಾಗಿದ್ದಾರೆ. ಅತಿಯಾದ ಸ್ಪೋಟಕ ಶಬ್ದದಿಂದ ಮಕ್ಕಳು ಗರ್ಭಿಣಿಯರು ಆತಂಕದಲ್ಲಿದ್ದಾರೆ ಎಂದು ನಾಗರಾಜು ತಿಳಿಸಿದ್ದಾರೆ.
ಹಲವು ಬಾರಿ AEE ಅಶ್ವತ್ಥ್ ಕುಮಾರ್ ಅವರಿಗೆ ಫೋನ್ ಮಾಡಿದರು ಅವರು ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ವಹಿಸಿದ್ದಾರೆ. ರೈತರ ಖಾತೆಗೆ ಪರಿಹಾರದ ಹಣ ಜಮೆಯಾಗದಿದ್ದರೂ ದೌರ್ಜನ್ಯದಿಂದ ಕಾಮಗಾರಿ ಮುಗಿಸಲು ಏಜೆನ್ಸಿಗಳು (ಗುತ್ತಿಗೆದಾರರು ) ಮುಂದಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅವಾರ್ಡ್ ಆಗದೆ ಅಕ್ರಮವಾಗಿ ರೈತರ ಜಮೀನಿನಲ್ಲಿ ನಿರ್ಮಿಸಲು ಸಹಕಾರಿ ಆಗಿದ್ದಾರ ಎತ್ತಿನಹೊಳೆ ಅಧಿಕಾರಿಗಳು ಎನ್ನುವ ಅನುಮಾನ ಸೃಷ್ಟಿಯಾಗಿದೆ. ಮಳೆಯಿಂದ ಕಾಮಗಾರಿಯ ಗುಣಮುಟ್ಟ ಅನಾವರಣವಾಗಿದೆ. ಕಾಮಗಾರಿ ಪ್ರಗತಿಯಂತದಲ್ಲಿರುವಾಗಲೇ ಹಲವು ಕಡೆ ಕುಸಿತವಾಗಿದೆ ಎಂದು ಅವರು ಹೇಳಿದರು.
ಮುಖ್ಯ ಇಂಜಿನಿಯರ್ ವರದಯ್ಯ, ಎಇಇ,ಇಇ, ಸೈಟ್ ಗೆ ಬಾರದ ಹಿನ್ನೆಲೆ ಅಧಿಕಾರಿಗಳಿಗೆ ಸುಗಮ ದಾರಿ ಸಿಕ್ಕಿದಂತಾಗಿದೆ. ಕಳಪೆ ಕಾಮಗಾರಿ ಕೇಂದ್ರ ಸಂಸ್ಥೆಗಳಿಂದ ತನಿಖೆ ಆಗಬೇಕಾಗಿದೆ. ದಾಖಲೆಗಳೊಂದಿಗೆ ಈ ಬಗ್ಗೆ ದೂರು ನೀಡುವುದಾಗಿ ಸಾಮಾಜಿಕ ಕಾರ್ಯಕರ್ತ ಜಟ್ಟಿ ಅಗ್ರಹಾರ ನಾಗರಾಜು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q