ಮಹಿಳೆಯರು ಹಾಗೂ ಕೆಲ ಪುರುಷರು ಬಿಳಿ ಕೂದಲನ್ನು ಮರೆ ಮಾಚಲು ಮೆಹಂದಿ ಹಚ್ಚುತ್ತಾರೆ. ಮೆಹಂದಿ ದೇಹಕ್ಕೆ ತಂಪು ಎಂಬ ಭಾವನೆ ಹಲವರಲ್ಲಿ ಇದೆ. ನಿಮ್ಮ ಕೂದಲನ್ನು ಕಪ್ಪಾಗಿಸಿಕೊಳ್ಳಲು ನೀವು ಕೂಡ ಮೆಹಂದಿ ಬಳಸುತ್ತಿದ್ದರೆ, ಮೊದಲು ಅದರಿಂದಾಗುವ ಹಾನಿಯ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.
ಮೆಹಂದಿಯು ಜನಪ್ರಿಯ ನೈಸರ್ಗಿಕ ಕೂದಲು ಬಣ್ಣ ಮತ್ತು ಕಂಡಿಷನರ್ ಆಗಿದ್ದರೂ, ಅದರ ಸಂಭಾವ್ಯ ಅಡ್ಡಪರಿಣಾಮಗಳ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಮೆಹಂದಿಯು ಅದರ ಕಂಡೀಷನಿಂಗ್ ಗುಣಲಕ್ಷಣಗಳಿಂದ ಮೆಚ್ಚುಗೆ ಪಡೆದರೂ, ಕೆಲವರಲ್ಲಿ ಇದರಿಂದ ಕೂದಲು ಒರಟಾಗುವುದನ್ನು ನಾವು ಗಮನಿಸಬಹುದು.
ನಿಮ್ಮ ಕೂದಲಿಗೆ ಮೆಹಂದಿ ಆಗಾಗ ಹಚ್ಚುವುದರಿಂದ ನಿಮ್ಮ ಕೂದಲಿನ ನೈಸರ್ಗಿಕ ಕೂದಲಿನ ಬಣ್ಣವನ್ನು ಹಾನಿಗೊಳಿಸುತ್ತದೆ. ಅಲ್ಲದೇ ಈ ಮೆಹಂದಿ ಬಣ್ಣ ಮಾಸಿದಾಗ ನಿಮ್ಮ ಕೂದಲು ಕೆಂಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ನಿಮ್ಮ ಕೂದಲಿಗೆ ಮೆಹಂದಿ ಹಚ್ಚುವುದರಿಂದ ಕೂದಲಿನ ನೈಸರ್ಗಿಕ ತೈಲಗಳು ಹೊರಹೋಗುತ್ತವೆ. ಇದರಿಂದ ನಿಮ್ಮ ಕೂದಲು ಶುಷ್ಕವಾಗಿರುತ್ತದೆ.
ಮೆಹಂದಿಯನ್ನು ನೆತ್ತಿಗೆ ಹಚ್ಚಿದ ನಂತರ ಕೂದಲನ್ನು ಸರಿಯಾಗಿ ತೊಳೆಯದಿದ್ದರೆ, ಮೆಹಂದಿ ಕೂದಲಿನ ಬೇರುಗಳಿಗೆ ಅಂಟಿಕೊಳ್ಳುತ್ತದೆ. ಇದು ಕೂದಲು ಬೆಳವಣಿಗೆ ಮತ್ತು ಅತಿಯಾದ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಮೆಹೆಂದಿ ನೆತ್ತಿಯನ್ನು ಒಣಗಿಸುತ್ತದೆ, ಇದು ತುರಿಕೆ ಮತ್ತು ಕಿರಿಕಿರಿಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA