ಬೆಂಗಳೂರು: ರಾಜ್ಯದ ಪ್ರಭಾವಿ ರಾಜಕಾರಣಿ, ತುಮಕೂರು ಭಾಗದ ಪ್ರಭಾವಿ ಸಚಿವರ ಹನಿಟ್ರ್ಯಾಪ್ ಗೆ ಯತ್ನಿಸಲಾಗಿರುವ ವಿಚಾರ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದು, ಸ್ವಪಕ್ಷದ ಮತ್ತೊಬ್ಬರ ಸಚಿವರೇ ಹನಿಟ್ರ್ಯಾಪ್ ನಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ಗೆ ಬಲೆ ಬೀಸಲು ಪ್ಲಾನ್ ನಡೆಸಲಾಗಿತ್ತು. ಆದ್ರೆ ಆ ನಾಯಕ ಹನಿಟ್ರ್ಯಾಪ್ ಗೆ ಬೀಳದ ಹಿನ್ನೆಲೆ ಚಾರಿತ್ರ್ಯ ಹರಣದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
2 ಬಾರಿ ಸಚಿವರ ಮೇಲೆ ಹನಿಟ್ರ್ಯಾಪ್ ಪ್ರಯೋಗಕ್ಕೆ ತಂಡವೊಂದು ಪ್ರಯತ್ನಿಸಿತ್ತು. ಹೀಗಾಗಿ ಇದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ತಿಳಿಯಲು ಅವರದ್ದೇ ತಂಡದಿಂದ ಸಚಿವರ ಮಾಹಿತಿ ಕಲೆ ಹಾಕಿದ್ದಾರೆ. ಹೀಗಾಗಿ ಇದೊಂದು ಪೊಲಿಟಿಕಲ್ ಹನಿಟ್ರ್ಯಾಪ್ ಪ್ರಯತ್ನ ಅನ್ನೋ ವಿಚಾರ ತಿಳಿದು ಬಂದಿತ್ತು.
ಯಾರನ್ನೂ ಕ್ಯಾರೇ ಅನ್ನದೇ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಸಚಿವರ ರಾಜಕೀಯ ಭವಿಷ್ಯಕ್ಕೆ ಕಲ್ಲು ಹಾಕಲು ಯತ್ನ ನಡೆದಿತ್ತು. ಇದನ್ನು ಅರಿತ ನಾಯಕ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದಾರೆ. ಈ ಹನಿಟ್ರ್ಯಾಪ್ ಮಾಡಲು ಯತ್ನಿಸಿರುವವರು ಕೂಡ ಸ್ವಪಕ್ಷದವರೇ ಆಗಿರುವುದರಿಂದ ಇನ್ನೂ ಕೂಡ ದೂರು ನೀಡಲಾಗಿಲ್ಲ ಎನ್ನಲಾಗಿದೆ.
ನಾಯಕರ ಚಾರಿತ್ರ್ಯಹರಣ ಮಾಡಿ ಅವರ ರಾಜಕೀಯ ಭವಿಷ್ಯ ನಾಶಮಾಡುವ ಪ್ರಯತ್ನದ ವಿರುದ್ಧ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4