Subscribe to Updates
Get the latest creative news from FooBar about art, design and business.
- ಸರಗೂರು: ಜಮೀನಿಗೆ ನುಗ್ಗಿದ್ದ ಕಾಡಾನೆ ಮರಿ ಯಶಸ್ವಿ ಸೆರೆ: ರಾಂಪುರ ಆನೆ ಶಿಬಿರಕ್ಕೆ ಸ್ಥಳಾಂತರ
- ಕುಡಿಯುವ ನೀರಿನ ಪೂರೈಕೆಗಾಗಿ ತಾಲೂಕಿಗೆ 1 ಕೋಟಿ, ಜಿಲ್ಲೆಗೆ 5 ಕೋಟಿ | ರೈತರಿಗೆ ಸಮಸ್ಯೆಯಾಗದಂತೆ ಕ್ರಮ: ಡಿಸಿಎಂ ಡಾ.ಜಿ.ಪರಮೇಶ್ವರ್
- ಹುಟ್ಟುಹಬ್ಬದಂದು ಹಮ್ಮಿಕೊಂಡ ಸಾಮಾಜಿಕ ಕಾರ್ಯಗಳಿಗೆ ತಡೆ: ತಿಪಟೂರು ತಾಲೂಕು ಆಡಳಿತ ವಿರುದ್ಧ ಅಶ್ವಥ್ ನಾರಾಯಣ್ ಆಕ್ರೋಶ
- ದೆಹಲಿ ವಿದ್ಯಾರ್ಥಿಗಳ ಪ್ರತಿಭಟನೆ: ‘ದೇಶದ್ರೋಹಿ’ಗಳ ಜೊತೆ ಸೇರಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನ: ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆರೋಪ
- ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
- ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
- ರೂ.1.50 ಲಕ್ಷಗಳಂತೆ ಫೆಲೋಶಿಪ್: ಕಿರು ಅಧ್ಯಯನ ಯೋಜನೆಗೆ ಅರ್ಜಿ ಆಹ್ವಾನ
- ಜು.28 ರಂದು ಅರಳಿಮರದಡಿಯಲ್ಲಿ ‘ಮೊಳಗಲಿ ಜಾನಪದ’: ಸಂಗೀತ–ಸಾಂಸ್ಕೃತಿಕ ಕಾರ್ಯಕ್ರಮ
Author: admin
ರಾಜ್ಯದ ಒಳನಾಡಿನ ಕೆಲವು ಕಡೆಗಳಲ್ಲಿ ಗುರುವಾರ ಮಳೆಯಾಗಿದ್ದು, ಕರಾವಳಿಯಲ್ಲಿ ಒಣ ಹವೆ ಇತ್ತು. ಮೇ 8 ರಿಂದ 9ರ ಬೆಳಗ್ಗೆ 8.30ರವರೆಗೆ ಕಲಬುರಗಿ ಜಿಲ್ಲೆಯ ಸೇಡಂನಲ್ಲಿ 6 ಸೆಂ. ಮೀ., ಬೀದರ್, ಚಾಮರಾಜನಗರದ ಬೇಗೂರು, ಕೊಡಗು ಜಿಲ್ಲೆಯ ನಾಪೋಕ್ಲು ವಿನಲ್ಲಿ ತಲಾ 4 ಸೆಂ.ಮೀ., ಮಂಡ್ಯ ಜಿಲ್ಲೆಯ ಮದ್ದೂರು, ಕೃಷ್ಣರಾಜಸಾಗರದಲ್ಲಿ ತಲಾ 3 ಸೆಂ.ಮೀ., ರಾಮನಗರ, ಮಂಡ್ಯ, ಕೊಡಗು ಜಿಲ್ಲೆಯ ಭಾಗಮಮಂಡಲ, ಮೈಸೂರು, ಬೆಂಗಳೂರು ನಗರ, ಮೈಸೂರು ಜಿಲ್ಲೆಯ ನಂಜನಗೂಡು, ಯಾದಗಿರಿ ಜಿಲ್ಲೆಯ ಶಹಾ ಪುರದಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ. ಮೇ 10ರಂದು ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜ ನಗರದ ಕೆಲವೆಡೆ ಮಳೆಯಾಗುವ ಸಂಭವವಿದೆ. ಚಿಕ್ಕಮಗಳೂರು, ಹಾಸನ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ವಿಜಯನಗರ, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ…
ಶಬರಿಮಲೆ ದೇವಸ್ಥಾನಕ್ಕೆ ಹೋಗುವವರು ಇನ್ನು ಮುಂದೆ ಕಡ್ಡಾಯವಾಗಿ ವರ್ಚ್ಯುವಲ್ ಕ್ಯೂನಲ್ಲಿ ಹೆಸರು ನೋಂದಾಯಿಸಲೇಬೇಕು. ವರ್ಚ್ಯುವಲ್ ಕ್ಯೂನಲ್ಲಿ ಹೆಸರು ನೋಂದಾಯಿಸಿದರೆ ಮಾತ್ರ ಶಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶ ಸಿಗುತ್ತದೆ ಎಂದು, ದೇವಸ್ಥಾನದ ಆಡಳಿತ ಮಂಡಳಿಯಾದ ತಿರುವಾಂಕೂರ್ ದೇವೋಸ್ವಂ ಬೋರ್ಡ್(ಟಿಡಿಬಿ) ತಿಳಿಸಿದೆ. ವರ್ಚ್ಯುವಲ್ ಕ್ಯೂ ಪದ್ಧತಿಯಲ್ಲಿ ತಮ್ಮ ಹೆಸರು ನೋಂದಾಯಿಸಲು ಇಚ್ಛಿಸುವ ಭಕ್ತರು, ದೇವಸ್ಥಾನ ಅಧಿಕತ ವೆಬ್ ಸೈಟ್ (ಶಬರಿಮಲ ಆನ್ ಲೈನ್ ಸರ್ವೀಸಸ್) ನಲ್ಲಿ ಅಥವಾ ಕೇರಳ ರಾಜ್ಯ ಸರ್ಕಾರದ ಶಬರಿಮಲ ಶ್ರೀ ಧರ್ಮಶಾಸ್ತ್ರ ಟೆಂಪಲ್ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ‘ವರ್ಚ್ಯುವಲ್ ಕ್ಯೂ’ ಗಾಗಿ ಇರುವ ಐಕಾನ್ ಕ್ಲಿಕ್ ಮಾಡಿ ತಮ್ಮ ಹೆಸರು ನೋಂದಾಯಿಸಬಹುದು. ವೆಬ್ ಸೈಟ್ ಗಳು ಬೇರೆ ಬೇರೆಯಾದರೂ ವರ್ಚ್ಯುವಲ್ ಕ್ಯೂ ಪುಟ ಮಾತ್ರ ಒಂದೇ ಆಗಿದೆ. ದೇವಸ್ಥಾನ ಆಡಳಿತ ಮಂಡಳಿಯ ಈ ನಿರ್ಧಾರ ಅನೇಕ ಭಕ್ತರಿಗೆ ನಿರಾಸೆ ತಂದಿದೆ. ಇದಲ್ಲದೆ, ಭಕ್ತರಿಗಾಗಿ ದೇವಸ್ಥಾನದ ಪ್ರಾಂಗಣಗಳಲ್ಲಿ ಉಚಿತ ಸೇವೆಗಳನ್ನು ನೀಡುವ ಹಲವಾರು ಸಂಘ,…
ಇಸ್ಲಾಂ ಧರ್ಮವನ್ನು ಪಾಲಿಸುವವರು ಲಿವ್ – ಇನ್ ಸಂಬಂಧದಲ್ಲಿ ಇರುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಮಾತ್ರವಲ್ಲ ಪತ್ನಿ ಬದುಕಿರುವಾಗ ಬೇರೆ ಮಹಿಳೆಯ ಜೊತೆ ಲಿವ್ – ಇನ್ ಸಂಬಂಧದಲ್ಲಿ ಇರುವಂತಿಲ್ಲ. ಆ ತತ್ವಗಳು ಇಸ್ಲಾಂಗೆ ವಿರುದ್ಧವಾಗಿದೆ ಅನ್ನುವುದನ್ನು ಬಹಳ ಸ್ಪಷ್ಟವಾಗಿ ತಿಳಿಸಿದೆ. ಸ್ನೇಹಾ ದೇವಿ ಮತ್ತು ಮೊಹಮ್ಮದ್ ಶಾದಾಬ್ ಖಾನ್ ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಆರ್ ಮಸೂದಿ ಮತ್ತು ಎ.ಕೆ. ಶ್ರೀ ವಾಸ್ತವ ಲಕ್ನೋ ಪೀಠ ಆದೇಶ ನೀಡಿದೆ. ಸ್ನೇಹಾ ದೇವಿಯ ಪೋಷಕರು ಖಾನ್ ವಿರುದ್ಧ ಅಪಹರಣ ಪ್ರಕರಣವನ್ನು ದಾಖಲಿಸಿದ ನಂತರ ದಂಪತಿ ಪೊಲೀಸ್ ರಕ್ಷಣೆ ಕೋರಿದ್ದರು. ಸ್ನೇಹಾ ದೇವಿ ಅವರನ್ನು ಭದ್ರತೆಯಲ್ಲಿ ಪೋಷಕರ ಬಳಿಗೆ ಕಳುಹಿಸುವಂತೆ ನ್ಯಾಯಾಲಯ ಸೂಚಿಸಿದೆ. ಮಹಿಳೆಯ ಪೋಷಕರು ಅಪಹರಣದ ಆರೋಪವನ್ನು ಹೊರಿಸಿದ್ದರು. ಆದರೆ ಈ ಖಾನ್ ೨೦೨೦ರಲ್ಲಿ ಫರೀದಾ ಅನ್ನೋ ಮಹಿಳೆಯನ್ನು ವಿವಾಹವಾಗಿದ್ದ. ದಂಪತಿಗೆ ಮಗುವಿದೆ. ಆ ಮಹಿಳೆ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಹಿಂದೂ ಯುವತಿ ಜೊತೆಗೆ ಲಿವ್ –…
ಮಂಡ್ಯ: ಮಂಡ್ಯದ ಹುಲಿಗೆಪುರ ಗ್ರಾಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದರೂ, ತಾನು ಫೇಲ್ ಆಗಿದ್ದೇನೆ ಎಂಬುದಾಗಿ ಭಾವಿಸಿ ವಿದ್ಯಾರ್ಥಿನಿಯೊಬ್ಬಳು, ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ. ಹೆಚ್.ಎಂ. ಅಮೃತ(15) ನೇಣಿಗೆ ಶರಣಾದ ವಿದ್ಯಾರ್ಥಿನಿಯಾಗಿದ್ದಾರೆ. SSLC ವಿದ್ಯಾರ್ಥಿನಿಯಾದ ಹೆಚ್.ಎಂ. ಅಮೃತ ಇಂದು ಪ್ರಕಟವಾದಂತ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 353 ಅಂಕವನ್ನು ಪಡೆದಿದ್ದರು. ಪಾಸ್ ಆಗಿದ್ದರೂ, ಫೇಲ್ ಆಗಿದ್ದೇನೆ ಎಂಬ ಭೀತಿಯಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯಲ್ಲಿ ಮನೆಯಲ್ಲಿ ನೇಣುಬಿಗಿದುಕೊಂಡು ಅತಿಥಿ ಉಪನ್ಯಾಸಕಿಯೂಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದೀಪಾ(34) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಇವರು ಚನ್ನರಾಯಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ದೀಪಾ ಇಂದು ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಚನ್ನರಾಯಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ನವದೆಹಲಿ: ನರೇಂದ್ರ ಮೋದಿಯವರ ಸುಳ್ಳು ಪ್ರಚಾರದಿಂದ ವಿಚಲಿತರಾಗಬೇಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ದೇಶದ ಶಕ್ತಿ ದೇಶದ ಯುವಕರು, ನರೇಂದ್ರ ಮೋದಿ ಅವರಿಂದ ಚುನಾವಣೆ ತಪ್ಪುತ್ತಿದೆ. ಅವರು ಮುಂದಿನ ಹಿಂದೂಸ್ತಾನದ ಪ್ರಧಾನ ಮಂತ್ರಿ ಅಗಲು ಸಾಧ್ಯವಿಲ್ಲ ಎಂದು ನಾನಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. 4, 5 ದಿನಗಳಲ್ಲಿ ನಿಮ್ಮ ಯೋಚನೆಯನ್ನು ಬದಲಾಯಿಸಲು ಯಾವುದಾದರೂ ಡ್ರಾಮ ಮಾಡುತ್ತಾರೆ. ಆದರೆ ನರೇಂದ್ರ ಮೋದಿಯವರ ಸುಳ್ಳು ಪ್ರಚಾರದಿಂದ ವಿಚಲಿತರಾಗಬೇಡಿ. 2 ಕೋಟಿ ಯುವಕರಿಗೆ ರೋಜಗಾರ್ ಯೋಜನೆಯನ್ನು ನೀಡುತ್ತೇವೆ ಎಂದು ಸುಳ್ಳು ಹೇಳಿದ್ದಾರೆ. ನೋಟ್ ಬ್ಯಾನ್ ಮಾಡಿದ್ದರು. ಆದರೆ ಈ ಎಲ್ಲಾ ಕೆಲಸವನ್ನು ಅದಾನಿಗಾಗಿ ಮಾಡಿದ್ದಾರೆ ಎಂದು ಕಿಡಿಕಾರಿದರು. ಜೂನ್ 4 ರಂದು ಇಂಡಿಯಾ ಘಟಬಂಧನದ ಸರ್ಕಾರ ರಚನೆಯಾಗಲಿದೆ. ಆಗಸ್ಟ್ 15ರೊಳಗೆ 30 ಲಕ್ಷ ಭರ್ತಿ ಭರೋಸಾ ಸರ್ಕಾರಿ ಹುದ್ದೆಗಳ ನೇಮಕಾತಿ ಕಾರ್ಯ ಆರಂಭಿಸುತ್ತೇವೆ ಎಂಬುದು ನಮ್ಮ ಗ್ಯಾರಂಟಿ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…
ಹಾಸನ: ಇಲ್ಲಿನ ಸಕಲೇಶಪುರದಲ್ಲಿ SSLC ಪರೀಕ್ಷೆ ಬರೆದಿದ್ದ ತಾಯಿ ಹಾಗೂ ಮಗ ಇಬ್ಬರೂ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಜ್ಯೋತಿ.ಪಿ.ಆರ್.(38) ಹಾಗೂ ಮಗನಾದ ನಿತಿನ್.ಸಿ.ಬಿ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಪರೀಕ್ಷೆಯಲ್ಲಿ ಉತ್ತೀರ್ಣರಾದವರಾಗಿದ್ದಾರೆ. ಜ್ಯೋತಿಯವರು 250 ಅಂಕ ಪಡೆದು ತೇರ್ಗಡೆಯಾಗಿದ್ದು, ಅವರ ಪುತ್ರ 582 ಅಂಕ ಪಡೆದಿದ್ದಾನೆ. ಸಾಧನೆ ಮಾಡಲು ಛಲ ಹಾಗೂ ಮನಸ್ಸು ಇದ್ದರೆ ಆಗುತ್ತದೆ ಎಂಬುವುದಕ್ಕೆ ಇದೊಂದು ನಿದರ್ಶನವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಚಿತ್ರದುರ್ಗ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಮೃತದೇಹ ಹೊಸದುರ್ಗ ಪಟ್ಟಣದಲ್ಲಿ ಪತ್ತೆಯಾಗಿದ್ದು, ಪತಿ ಮತ್ತು ಕುಟುಂಬಸ್ಥರ ವಿರುದ್ಧ ಮೃತಳ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ. ಈ ಹಿನ್ನಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುಮಕೂರು ಮೂಲದ ಗೀತಶ್ರೀ ಮೃತ ದುರ್ದೈವಿಯಾಗಿದ್ದಾರೆ. ಪ್ರಭುಕುಮಾರ್ ಹಾಗೂ ಗೀತಶ್ರೀ ಐದಾರು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಸುಂದರ ದಾಂಪತ್ಯಕ್ಕೆ ಮುದ್ದಾದ ಮಗಳು ಇದ್ದಳು. ಆದರೆ, ಇತ್ತೀಚೆಗೆ ಪ್ರಭು, ಪತ್ನಿಗೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದನು. ಇತ್ತೀಚೆಗಷ್ಟೇ ಪತ್ನಿ ಜೊತೆ ಗಲಾಟೆ ಮಾಡಿ ತವರುಮನೆಗೆ ಕಳಿಸಿದ್ದನು. ಮೂರ್ನಾಲ್ಕು ದಿನಗಳ ಹಿಂದಷ್ಟೇ ಗೀತಶ್ರೀ ಪತಿಯ ಮನೆಗೆ ವಾಪಾಸಾಗಿದ್ದಳು. ನಂತರ ನೇಣು ಬಿಗಿದ ಸ್ಥಿತಿಯಲ್ಲಿ ಗೀತಶ್ರೀ ಮೃತದೇಹ ಪತ್ತೆಯಾಗಿದೆ. ಪ್ರಭುಕುಮಾರ್ ವಿರುದ್ಧ ಮೃತಳ ಪೋಷಕರು ಕೊಲೆ ಆರೋಪ ಪ್ರಕರಣ ದಾಖಲಿಸುತ್ತಿದ್ದಂತೆ ಆರೋಪಿ ನಾಪತ್ತೆ ಆಗಿದ್ದಾನೆ. ಹಣದ ವ್ಯಾಮೋಹಕ್ಕೆ ಬಿದ್ದ ಪತಿರಾಯ ಪತ್ನಿಯ ಜೀವವನ್ನೇ ನುಂಗಿದ್ದಾನೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಈ…
ರಾಮನಗರ: ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮನಹಳ್ಳಿ ಟೋಲ್ ಬಳಿ KSRTC ಬಸ್ ಪಲ್ಟಿಯಾಗಿ ನಾಲ್ವರು ಪ್ರಯಾಣಿಕರಿಗೆ ಗಾಯವಾಗಿರುವ ಘಟನೆ ನಡೆದಿದೆ. ಇಂದು ಬೆ.8:30ಕ್ಕೆ ಕನಕಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಸು ಕಗ್ಗಲೀಪುರ ವ್ಯಾಪ್ತಿಯ ಸೋಮನಹಳ್ಳಿ ಟೋಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ ಪಲ್ಟಿ ಪರಿಣಾಮ ನಾಲ್ವರು ಪ್ರಯಾಣಿಕರಿಗೆ ಗಾಯವಾಗಿದೆ. ಗಾಯಾಳುಗಳಿಗೆ ಕಗ್ಗಲೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಕಗ್ಗಲೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಂಗಳೂರು: ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಜಿ ಮೇಲಿಂದ ಬಿದ್ದು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಗುಲ್ಬರ್ಗ ಮೂಲದ 28 ವರ್ಷ ವಯಸ್ಸಿನ ಯುವಕ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಗುಲ್ಬರ್ಗದಿಂದ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದ ಯುವಕ ಬೆಂಗಳೂರಿನ ಅಂಬೇಡ್ಕರ್ ನಗರದಲ್ಲಿ ಪಿಜಿಯಲ್ಲಿ ತಂಗಿಕೊಂಡು, ಕೆಲಸಕ್ಕಾಗಿ ಎಲ್ಲಾ ಕಡೆ ಪ್ರಯತ್ನಿಸಿದ್ದ. ಆದರೇ, ಯಾವುದೇ ಪ್ರಯೋಜನ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಯುವಕ ತಾನು ತಂಗಿದ್ದ ಪಿಜಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ವೈಟ್ ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296