Author: admin

ಬೆಂಗಳೂರು: ಸ್ಯಾಂಡಲ್‌ ವುಡ್‌ ನ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್‌ ನಿಧನಕ್ಕೆ ಸಂಬಂಧಪಟ್ಟಂತೆ ಒಂದು ಕಾಕಾತಾಳೀಯ ಅಂಶ ಬಹಿರಂಗಗೊಂಡಿದೆ. ತಮ್ಮ ಪತ್ನಿ ದೈವಾದೀನರಾದ ದಿನದಂದೇ ದ್ವಾರಕೀಶ್‌ ನಿಧನರಾಗಿದ್ದಾರೆ. ದ್ವಾರಕೀಶ್‌ ಪತ್ನಿ ಅಂಬುಜಾ ಅವರು 2021ರ ಏಪ್ರಿಲ್‌ 16ರಂದು ಮೃತಪಟ್ಟಿದ್ದರು. ಇದಾಗಿ ಮೂರು ವರ್ಷಗಳ ಬಳಿಕ ಇದೇ ದಿನಾಂಕದಂದು ದ್ವಾರಕೀಶ್‌ ನಿಧನರಾಗಿದ್ದಾರೆ. ದ್ವಾರಕೀಶ್‌ ಮತ್ತು ಅಂಬುಜಾ ಅವರ ವಿವಾಹ 1967ರಲ್ಲಿ ನಡೆದಿತ್ತು. ಮೂರು ವರ್ಷದ ಹಿಂದೆ ಅಂಬುಜಾ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಇದೀಗ ಪತ್ನಿ ಮೃತಪಟ್ಟ ದಿನದಂದೇ ದ್ವಾರಕೀಶ್‌ ಮೃತಪಟ್ಟ ಘಟನೆಯು ಅಚ್ಚರಿ ತಂದಿದೆ. ಶ್ಯಾಮರಾವ್‌ ಮತ್ತು ಜಯಮ್ಮರ ಪುತ್ರ ದ್ವಾರಕೀಶ್‌ ಅವರು ಚಿತ್ರರಂಗಕ್ಕೆ ಆಗಮಿಸಲು ಸೋದರ ಮಾವ ಹುಣಸೂರು ಕೃಷ್ಣಮೂರ್ತಿ ಕಾರಣವಾಗಿದ್ದರು. ದ್ವಾರಕೀಶ್‌ ಗೆ ಶೈಲಜಾ ಎಂಬ ಇನ್ನೊಬ್ಬರು ಪತ್ನಿಯೂ ಇದ್ದಾರೆ. “ನಾನು ಅಂಬುಜಾ ಮತ್ತು ಶೈಲಾಜಾ ಜತೆಜತೆಗೆ ಇದ್ದೇನೆ. ನನ್ನ ಜೀವನ ಹೀಗೆಯೇ ಸಾಗುತ್ತಿದೆ” ಎಂದು ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ದ್ವಾರಕೀಶ್‌ ಹೇಳಿದ್ದರು. “ನಾನು ಜೀವನದಲ್ಲಿ ಎರಡು…

Read More

ಬೆಂಗಳೂರು:ದಂಪತಿಗಳು ಬೈಕ್ ಹಿಂಬಾಗದಲ್ಲಿ ಮಗುವನ್ನು ಫೂಟ್​ ರೆಸ್ಟ್​ ಮೇಲೆ ನಿಲ್ಲಿಸಿ ಪ್ರಯಾಣಿಸುತಿರುವ  ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ವೈಟ್​ಫೀಲ್ಡ್ ​ನ ಮುಖ್ಯರಸ್ತೆಯಲ್ಲಿ ದಂಪತಿಗಳು ಬೈಕ್ ನಲ್ಲಿ ತೆರಳುತ್ತಿದ್ದರು. ಈ ದೃಶ್ಯವನ್ನ ಹಿಂಬದಿಯಲ್ಲಿ ಬರುತ್ತಿದ್ದ ವಾಹನದಲ್ಲಿದ್ದವರು ಸೆರೆ ಹಿಡಿದಿದ್ದಾರೆ. ಸದ್ಯ ಬೈಕ್​ ನಂಬರ್ ಬರೆದು, ವಿಡಿಯೋವನ್ನು ಪೋಸ್ಟ್ ಅನ್ನು ಎಕ್ಸ್​ನಲ್ಲಿ ಶೇರ್ ಮಾಡಲಾಗಿದೆ. ದಂಪತಿಗಳು ಮಗುವನ್ನ ಬೈಕ್​ ನಲ್ಲಿ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA  

Read More

ಸರಗೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಸದುಪಯೋಗವನ್ನು ನಾವು ಪಡೆದುಕೊಳ್ಳುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಕಾರ್ಯಕ್ರಮಗಳನ್ನು ಒಪ್ಪಿಕೊಂಡಿದ್ದೇವೆ. ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಸುನೀಲ್ ಬೋಸ್ ಗೆ ಹೆಚ್ಚು ಮತಗಳನ್ನು ನೀಡಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ಹಂಚೀಪುರ,ಮುಳ್ಳೂರು.ಕೆ ಬೆಳತ್ತೂರು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ಮಂಗಳವಾರ ದಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಭೆಯನ್ನು ಹಮ್ಮಿಕೊಂಡಿದ್ದು,ಗಣ್ಯರು ಜ್ಯೋತಿ ಬೆಳಗಿಸಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ನಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ವೇಳೆ ನೀಡಿದ ಮತಗಳಗಿಂತ ಹೆಚ್ಚಿನ ಮತಗಳನ್ನು ಸುನೀಲ್ ಬೋಸ್ ರವರಿಗೆ ನೀಡಬೇಕು.ಆರ್ಭ್ಯಥಿಯಾದ ಸುನೀಲ್ ಬೋಸ್ ರವರು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು.ಎಲ್ಲಿ ಕ್ಷೇತ್ರಗಳಿಗಿಂತ ನಮ್ಮ ಕ್ಷೇತ್ರದಲ್ಲಿ ಹೆಚ್ಚು ಮತಗಳನ್ನು ನೀಡಲಾಗುವುದು ಎಂದರು. ಚಾಮರಾಜನಗರ ಲೋಕಸಭಾ ಕ್ಷೇತ್ರದ ಮೀಸಲು ಆರ್ಭ್ಯಥಿ ಸುನೀಲ್ ಬೋಸ್ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಪ್ರಚಾರ ಮಾಡಿ ಈ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅನಿಲ್ ಚಿಕ್ಕಮಾದು…

Read More

ವೈ.ಎನ್.ಹೊಸಕೋಟೆ: ವಿಕಸಿತ ಭಾರತಕ್ಕಾಗಿ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸಿ ಎಂದು ಮಾಜಿ ಸಂಸದ ಜನಾರ್ದನ ಸ್ವಾಮಿ ತಿಳಿಸಿದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಪರವಾಗಿ ಗ್ರಾಮದಲ್ಲಿಇಂದು  ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮತಯಾಚನೆ ಮಾಡಿ ಮಾತನಾಡಿದ ಅವರು, ಪ್ರಧಾನಿ  ನರೇಂದ್ರ ಮೋದಿ ಈ ಹತ್ತು ವರ್ಷಗಳ ಕಾಲ ಭಾರತ ದೇಶವನ್ನು ಕಟ್ಟಿ ಹೊಸದಾಗಿ ವಿಶ್ವದ ಮುಂದೆ ಅಭಿವೃದ್ಧಿ ಹೊಂದಿದ ದೇಶವೆಂದು ತೋರಿಸಿ ಕೊಟ್ಟ ಧೀಮಂತ ನಾಯಕರಾಗಿದ್ದಾರೆ. ಇವರು  ಒಬ್ಬ ಸಾಮಾನ್ಯ ಬಡ ಕುಟುಂಬದವರು ಕೂಡಾ ಈ ದೇಶದ ಪ್ರಧಾನಿ ಆಗಬಹುದು ಎಂದು ತೋರಿಸಿಕೊಟ್ಟರು. ಹಾಗೇ ಅವರು ನೀಡಿದ ಅಭಿವೃದ್ಧಿ ಯೋಜನೆಯಿಂದಾಗಿ ಮೂರನೇ ಬಾರಿಗೆ 400 ಹೆಚ್ಚು ಲೋಕ ಸಭಾ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಮತಷ್ಟು ದೇಶವನ್ನು ಉನ್ನತ ಸ್ಥಾನದಲ್ಲಿ ನೋಡುವುದಾಗಿ ಮಾಧ್ಯಮದವರಿಗೆ ತಿಳಿಸಿದರು. ನಾನು ಸಂಸದನಾದ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆ, ಹಾಗೂ DRDO,ISRO ದಂತಹ ಶಾಶ್ವತ ಯೋಜನೆಗಳನ್ನು ಜಾರಿಗೆ…

Read More

ತುಮಕೂರು: ನಗರದ ಶ್ರೀ ಸಿದ್ದಗಂಗಾ ಫಾರ್ಮಸಿ ಕಾಲೇಜು ವತಿಯಿಂದ ಇತ್ತೀಚಿಗೆ ಜರಗಿದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ ಜಯಂತಿ ಮತ್ತು ವಿಶ್ವ ಆರೋಗ್ಯ ದಿನವನ್ನು ವಿಭಿನ್ನ ಹಾಗೂ ವಿನೂತನವಾಗಿ ಆಚರಿಸಲಾಯಿತು. ಶ್ರೀಗಳವರ 117 ಜಯಂತಿಯ ಪ್ರಯುಕ್ತ ಕಾಲೇಜಿನ ಸುತ್ತಮುತ್ತಲಿನ 117 ಮನೆಗಳಲ್ಲಿ ‘ಮನೆ ಔಷಧಿ ವಿಮರ್ಶೆ ಮತ್ತು ಆರೋಗ್ಯ ಜಾಗೃತಿ’ ಶೀರ್ಷಿಕೆ ಅಡಿಯಲ್ಲಿ ಮನೆ ಮನೆಗಳಲ್ಲಿ ಆರೋಗ್ಯ, ಔಷಧ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ ವಿ.ಕುಲಕರ್ಣಿರವರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಉತ್ತಮ ಆರೋಗ್ಯದ ಮಹತ್ವ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಉಸ್ತುವಾರಿಯನ್ನು ಡಾ.ಪಿ.ಅಶೋಕ್ ಕುಮಾರ್, ರವಿನಂದನ್ ಎ.ಪಿ. ಮತ್ತು ಡಾ.ನಂದಿನಿ ಎಂ.ಸ್ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಮನೆ-ಮನೆಗೆ ಭೇಟಿ ನೀಡಿದರು ಮತ್ತು ಅನೇಕ ಕ್ಲಿನಿಕಲ್ ಫಾರ್ಮಸಿ ಚಟುವಟಿಕೆಗಳನ್ನು ನಡೆಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More

ಹಿರಿಯ ನಟ ದ್ವಾರಕೀಶ್ ಅವರ ಅಂತಿಮ ದರ್ಶನಕ್ಕೆ ನಾಳೆ ಬೆಳಗ್ಗೆ 7 ಗಂಟೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ದ್ವಾರಕೀಶ್ ಕುಟುಂಬಸ್ಥರು ತಿಳಿಸಿದ್ದಾರೆ. ನಾಳೆ ಏಳು ಗಂಟೆಯಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದ್ದು, ನಂತರ ಚಾಮರಾಜಪೇಟೆಯ ಟಿಆರ್ ಮಿಲ್ ನಲ್ಲಿಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ. ಈ ಕುರಿತಂತೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್, ದ್ವಾರಕೀಶ್ ಚಿತ್ರರಂಗದ ದೊಡ್ಡ ಆಸ್ತಿ. ಅವರ ಅಗಲಿಕೆ ಎಲ್ಲರಿಗೂ ತುಂಬಾ ನೋವಾಗಿದೆ. ಅವರು ಕೇವಲ ನಟರಲ್ಲ ನಿರ್ದೇಶಕ, ನಿರ್ಮಾಪಕ ಕೂಡ ಹೌದು. ಹಾಗಾಗಿ ನಾಳೆ ಚಿತ್ರರಂಗ ಬಂದ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ನಾಳೆ ಸ್ವಯಂಪ್ರೇರಿತವಾಗಿ ಬಂದ್ ಮಾಡಬೇಕು ಅಂತ ಕೇಳಿಕೊಳ್ತೀನಿ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಲಕ್ಷ್ಮಿ ನಿವಾಸ ಸೀರಿಯಲ್ ನಲ್ಲಿ ಜಯಂತ್ ಸೈಕೋ ನಡವಳಿಕೆ ಕಳೆದ ಹಲವು ಸಂಚಿಕೆಗಳಲ್ಲಿ ವೀಕ್ಷಕರು ಗಮನಿಸುತ್ತಿದ್ದಾರೆ. ಜಯಂತ್ ತನ್ನ ಪತ್ನಿ ಕುರಿತು ವಿಪರೀತ ಪೊಸೆಸಿವ್ ನೆಸ್ ಬೆಳೆಸಿಕೊಂಡಿದ್ದಾನೆ. ಜಯಂತ್ ತನ್ನ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಡಾಕ್ಟರ್ ಜಾಹ್ವವಿಯ ಮೈ ಮುಟ್ಟುವುದು ಜಯಂತ್ಗೆ ಅಸಹನೀಯ ಎಂದೆನಿಸಿದ್ದು, ಡಾಕ್ಟರ್ ಸ್ಕೇತಾಸ್ಕೋಪ್ ಅನ್ನು ಜಾಹ್ನವಿಯ ಎದೆಯಲ್ಲಿಟ್ಟು ಪರೀಕ್ಷಿಸಿದಾಗ ಜಯಂತ್ ಗೆ ಕಿರಿಕಿರಿಯಾಗಿದೆ. ಇದೇ ಸಮಯದಲ್ಲಿ ನಾಡಿ ಮಿಡಿತ ಟೆಸ್ಟ್ ಮಾಡಲು ಡಾಕ್ಟರ್ ಜಾಹ್ನವಿ ಕೈ ಹಿಡಿದುಕೊಂಡಾಗ ವಿಪರೀತ ಹಿಂಸೆ ಅನುಭವಿಸಿದ್ದಾನೆ ಜಯಂತ್. ಎಲ್ಲಾ ಟೆಸ್ಟ್ ಮಾಡಿದ ಬಳಿಕ “ನಾನು ಪ್ರಿಸ್ಕ್ರಿಪ್ಷನ್ ಬರೆದುಕೊಡ್ತಿನಿ, ಅದನ್ನ ಫಾಲೋ ಮಾಡಿ” ಎಂದು ವೈದ್ಯರು ಹೇಳುತ್ತಾರೆ. ಆಮೇಲೆ ಹುಷಾರು ಎಂದು ಜಾಹ್ವವಿಯ ಬೆನ್ನಮೇಲೆ ಡಾಕ್ಟರ್ ಕೈ ಇಟ್ಟಾಗ ಜಯಂತ್ ಉರಿದುಹೋಗಿದ್ದಾನೆ. ಪರೀಕ್ಷೆಯ ಬಳಿಕ ಹೊರಗೆ ಪತ್ನಿಯನ್ನು ಕುಳ್ಳಿರಿಸಿದ ಜಯಂತ್ “ನಾನು ಹೋಗಿ ಮಾತ್ರೆಗಳನ್ನು ತೆಗೆದುಕೊಂಡು ಬರ್ತೇನೆ” ಎಂದು ನೇರವಾಗಿ ಡಾಕ್ಟರ್ ರೂಂಗೆ ನುಗ್ಗಿದ್ದಾನೆ. “ನನ್ನ ಬಿಟ್ಟು ಬೇರೆ ಯಾರೂ ಅವರ…

Read More

ಪಾವಗಡ: ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ಬೆಸ್ಕಾಂ ಎಇಇ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ತಾಲ್ಲೂಕು ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರ ಕೃಷಿ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ. ಸಮರ್ಪಕವಾಗಿ ವಿದ್ಯುತ್ ಪೂರೈಸದಿರುವುದರಿಂದ ರೈತರ ಬೆಳೆಗಳು ಒಣಗುತ್ತಿವೆ. ಶೈಲಾಪುರ ಸಬ್ ಸ್ಟೇಷನ್ ನಲ್ಲಿ ಸರ್ಕಾರ ನಿಗದಿ ಮಾಡಿರುವ ವೇಳಾಪಟ್ಟಿಯಂತೆ 3 ಪೇಸ್ 8 ಗಂಟೆ, ಸಿಂಗಲ್ ಪೇಸ್ 6 ಗಂಟೆ ವಿದ್ಯುತ್ ನೀಡದೇ ತಮಗೆ ಇಷ್ಟ ಬಂದ ಹಾಗೆ ವಿದ್ಯುತ್ ಸರಬರಾಜು ಮಾಡುತ್ತಿರುವ ಬೆಸ್ಕಾಂ ಇಲಾಖೆ ರೈತರ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಮುಖಂಡ ಎತ್ತಿನಹಳ್ಳಿ ಚಿನ್ನ ಮಾತನಾಡಿ, ರೈತರ ಪಂಪ್‌ಸೆಟ್‌ಗೆ ಸಮರ್ಪಕ ವಿದ್ಯುತ್‌ ಪೂರೈಕೆ ಮಾಡಬೇಕು. ರೈತರು ಹೊಲಗದ್ದೆಗಳಲ್ಲಿ ಶೇಂಗಾ, ಟೊಮೇಟೊ, ಮೆಣಸು, ಬದನೆ, ಅಡಿಕೆ ಹಾಗೂ ಇತರೆ ಬೆಳೆಗಳಿಗೆ ಪಂಪ್‌ಸೆಟ್‌ ಮೋಟಾರ್‌ಗಳ ಮೂಲಕ ನೀರುಣಿಸುವರು. ಇಂತಹ ಸಂದರ್ಭದಲ್ಲಿ ಬೆಸ್ಕಾಂ ಸರಿಯಾದ ರೀತಿಯಲ್ಲಿ ವಿದ್ಯುತ್‌…

Read More

ಬೆಳಗಿನ ಹೊತ್ತಿಗೆ ಹಲವು ರೀತಿಯ ಹಸಿರು ಜ್ಯೂಸ್‌ಗಳನ್ನು ಕುಡಿದರೆ ಆರೋಗ್ಯಕ್ಕೆ ಒಳಿತು. ಅಂಥದ್ದೇ ಹಸಿರು ಜ್ಯೂಸ್‌ಗಳ ಪೈಕಿ ಒಂದು ಪಾಲಕ್ ಸೊಪ್ಪಿನದ್ದು. ರುಚಿಗೆ ಬೇಕಿದ್ದರೆ ಶುಂಠಿ, ನಿಂಬೆ ರಸಗಳನ್ನೆಲ್ಲ ಬೆರೆಸಿಕೊಂಡರೆ ಹಸಿರು ಜ್ಯೂಸ್‌ಗಳು ಬಾಯಿಗೂ ರುಚಿ ದೇಹಕ್ಕೂ ಹಿತ ನೀಡುತ್ತದೆ. ಹಲವು ರೀತಿಯ ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ಕ್ಯಾಲ್ಸಿಯಂನಂಥ ಅಗತ್ಯ ಖನಿಜಗಳು, ಎ, ಸಿ, ಇ ನಂಥ ಮಹತ್ವದ ಜೀವಸತ್ವಗಳನ್ನು ಒಳಗೊಂಡ ಈ ಸೊಪ್ಪಿನಲ್ಲಿ ನಾರು ಸಹ ಹೇರಳವಾಗಿದೆ. ತುಳಸಿಯನ್ನು ಆಹಾರ ರೂಪದಲ್ಲಿ ಸೇವಿಸಿದರೆ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಬೆಳಗ್ಗೆ ಮಾಡುವ ಚಹಾಗೆ ತುಳಸಿಯ ತಾಜಾ ಎಲೆಗಳನ್ನು ಹಾಕಿ ಬಿಸಿ ಬಿಸಿಯಾಗಿ ಕುಡಿದರೆ ನೆಗಡಿ ಹಾಗೂ ಕಟ್ಟಿದ ಮೂಗು ಸರಾಗವಾಗುತ್ತದೆ. ತುಳಸಿಯ ಪಾನಕ ಮಾಡಿ ಸಹ ಕುಡಿಯಬಹುದು. ಇತರ ಹಣ್ಣಿನ ಜ್ಯೂಸ್‌ಗಳಿಗೆ ತುಳಸಿಯ ಎಲೆಗಳನ್ನು ಬೆರೆಸಿ ಕುಡಿಯಬಹುದು. ತುಳಸಿ ಎಲೆಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನಿಷಿಯಂ ಮುಂತಾದ ಪೋಷಕಾಂಶಗಳಿದ್ದು, ಇದನ್ನು ಅನ್ನಕ್ಕೂ ಬೆರೆಸಿ ತಿನ್ನಬಹುದು. ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತೆ ಮಾವಿನ ಕಾಯಿ…

Read More

ತಮಿಳು ನಟ  ವಿಶಾಲ್ ರಾಜಕೀಯಕ್ಕೆ ಎಂಟ್ರಿಕೊಡಲು ಸಿದ್ಧರಾಗಿದ್ದುಯಾವುದೇ ಪಕ್ಷದಲ್ಲಿ ಸೇರದೇ ತಾವೇ ರಾಜಕೀಯ ಪಕ್ಷ ಸ್ಥಾಪಿಸುವುದಾಗಿಯೂ ಘೋಷಿಸಿದ್ದಾರೆ. 2026ರಲ್ಲಿ ತಮಿಳುನಾಡು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆಂದು ತಿಳಿಸಿದ್ದಾರೆ. ಅಲ್ಲದೆ ಅತಿ ಶೀಘ್ರದಲ್ಲಿ ರಾಜಕೀಯ ಪ್ರವೇಶ ಮಾಡುವುದು ಖಚಿತ ಎಂದಿರುವ ವಿಶಾಲ್​. ರಾಜಕೀಯ ಪ್ರವೇಶದ ಭಾಗವಾಗಿ ಪಕ್ಷ ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ರಾಜ್ಯದ ಜನತೆ ಸಮಸ್ಯೆ ಅಥವಾ ಸೂಕ್ತ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಅವುಗಳನ್ನು ಪರಿಹರಿಸಲು ರಾಜಕೀಯ ಪ್ರವೇಶ ನಿಶ್ಚಿತ ಎಂದಿದ್ದಾರೆ. ಇನ್ನು ಯಾವುದಾದರೂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿಶಾಲ್, ಮೊದಲು ತನ್ನನ್ನು ತಾನು ಸಾಬೀತುಪಡಿಸಿಕೊಂಡ ನಂತರವೇ ಮೈತ್ರಿ ಮತ್ತಿತರ ವಿಚಾರಗಳ ಬಗ್ಗೆ ಯೋಚಿಸುತ್ತೇನೆ, ಆದರೆ, ಸದ್ಯಕ್ಕೆ ಅಂತಹ ಯೋಚನೆ ಇಲ್ಲ ಎಂದು ಹೇಳಿದರು. ಅವರ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲ ದಿನಗಳ ಹಿಂದೆ ದಳಪತಿ ವಿಜಯ್ ಕೂಡ ತಮ್ಮದೇ ಪಕ್ಷ ಕಟ್ಟಿಕೊಂಡು 2026ರ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಚಿತ್ರರಂಗದ ಗಣ್ಯರು ರಾಜಕೀಯಕ್ಕೆ…

Read More