ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತಾಗಿ ನಟಿ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾರೆ. ಮಾರ್ಫಿಂಗ್ ಮಾಡಿರುವವರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಮಾರ್ಫಿಂಗ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ನಟಿ ಜ್ಯೋತಿ ರೈ ಮನವಿ ಮಾಡಿದ್ದಾರೆ. ನನ್ನ ಮಾನ ಹಾಗೂ ಕುಟುಂಬದ ಗೌರವ ಅಪಾಯದಲ್ಲಿದೆ. ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ನನ್ನ ಜೀವನದಲ್ಲಿ ಸರಿಪಡಿಸಲಾಗದ ಹಾನಿ ಉಂಟಾಗುತ್ತದೆ ಎಂದು ದೂರಿನಲ್ಲಿ ನಟಿ ಕಳವಳ ವ್ಯಕ್ತಪಡಿಸಿದ್ದಾರೆ.
ನಾನು ಇಂಟರ್ ನೆಟ್ ಮತ್ತು ಸಾಮಾಜಿಕ ಜಾಲತಾಣಗಳನ್ನು ನಿತ್ಯ ಬಳಕೆ ಮಾಡುತ್ತೇನೆ. ಇತ್ತೀಚಿನ ದಿನಗಳಲ್ಲಿ ಫೇಕ್ ಅಕೌಂಟ್ ಗಳ ಮೂಲಕ ನನಗೆ ಮೆಸೇಜ್ ಗಳು ಬರುತ್ತಿವೆ. ನನ್ನ ಫೋಟೋಗಳ ಜೊತೆಗೆ ಇಂಟರ್ ನೆಟ್ ಡೌನ್ ಲೋಡ್ ಮಾಡಲಾದ ನಗ್ನ ಹಾಗೂ ಅಶ್ಲೀಲ ಚಿತ್ರಗಳನ್ನು ಮಾರ್ಫಿಂಗ್ ಮಾಡಿ ನನ್ನ ಇನ್ ಬಾಕ್ಸ್‌ಗೆ ಕಳುಹಿಸುತ್ತಿದ್ದಾರೆ. ನನ್ನ ಇನ್ಸ್ಟಾಗ್ರಾಂ ಸ್ಟೋರಿಗಳಲ್ಲಿ ಹಾಕಲಾದ ಫೋಟೋಗಳನ್ನು ಬಳಸಿ ಮಾರ್ಫಿಂಗ್ ಮಾಡಲಾಗಿದೆ. ನನಗೆ ಕಿರುಕುಳ ನೀಡುವ ಮತ್ತು ನನ್ನ ಮಾನಹಾನಿ ಮಾಡುವ ಉದ್ದೇಶದಿಂದಲೇ ಮಾಡಲಾಗಿದೆ ಎಂದಿದ್ದಾರೆ.
ಕೆಲವು ದಿವಸಗಳ ಹಿಂದೆಯೇ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿದ್ದೇನೆ. ನನ್ನ ಕುಟಂಬದವರ ಮಾನ ಹರಾಜು ಹಾಕುವವರಿಗೆ ಖಂಡಿತಾ ಕಠಿಣ ಶಿಕ್ಷೆ ಆಗತ್ತೆ ಎಂದು ಜ್ಯೋತಿ ರೈ ಕಿಡಿಗೇಡಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳು ಸಖತ್ ಸುದ್ದಿ ಮಾಡುತ್ತಿರುವ ಬೆನ್ನಲ್ಲೇ, ಕನ್ನಡದ ಕಿರುತೆರೆಯ ಪ್ರಸಿದ್ಧ ನಟಿಯೊಬ್ಬರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು.
ಮೂರು ಅಶ್ಲೀಲ ವೀಡಿಯೋಗಳು ಮತ್ತು ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸೇಲ್ ಆಗುತ್ತಿದ್ದವು. ಅವು ಕನ್ನಡದ ನಟಿಯದ್ದು ಎನ್ನುವಂತೆ ಬಿಂಬಿಸಲಾಗಿತ್ತು. ಈ ಬಗ್ಗೆ ನಟಿ ದೂರು ದಾಖಲಿಸಿದ್ದು ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296